ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಹಿಡಿದರೆ ಸುಡಹತ್ತುವುದು, ಸೂರ್ಯಕಿರಣಗಳಲ್ಲಿ ಬೆಳಕೂ ಶಕೆಯ ಇರುವವು. ಸೂರ್ಯಕಾಂತದೊಳಗಿಂದ ಹಾಯುವಾಗ ಇವೆಲ್ಲ ಕಿರಣಗಳು ಮಣಿಸಲ್ಪಟ್ಟು ಒಂದೆಡೆಗೆ ಒಟ್ಟುಗೂಡುವುದರಿಂದಲೆ ಈ ಪ್ರಕಾರದ ಶಕೆಯು ಕಂಡುಬರುವುದು. ಒಂದು ದೀಪದ ಎದುರಿಗೆ ಇಂತಹ ಸೂರ್ಯಕಾಂತವನ್ನು ಹಿಡಿದರೆ ಆಚೆಯ ಬದಿಗೆ ಕೆಲವಂತರದ ಮೇಲೆ ನಾವು ಆ ದೀಪದ ಉರಿಯ ತಿರುವುಮುರುವಾದ ಪ್ರತಿಕೃತಿಯನ್ನು ಎಂದರೆ ಚಿತ್ರವನ್ನು ಕಾಣುವೆವು. ಸೂರ್ಯನ ಎದುರಿಗೆ ಹಿಡಿದಾಗ ಕಾಣುವ ಬೆಳಕಿನ ಬಿಂದು... ಹೀಗೆ ಸೂರ್ಯನ ಸಣ್ಣ ಪ್ರತಿಕೃತಿಯಾಗಿರುವುದು. ಸೂಕ್ಷ್ಮದರ್ಶಕ ಯಂತ್ರಗಳೊಳಗಿಂದ ಒಡವೆಗಳನ್ನು ನೋಡ ಬೇಕಾದರೆ ನಾವು ಆ ಯಂತ್ರವನ್ನು ಅವುಗಳ ತೀರ ಹತ್ತಿರಕ್ಕೆ ಒಯ್ಯ ಬೇಕಾಗುವುದು. ಆದರೆ ಇವುಗಳ ಸಹಾಯದಿಂದ ದೂರಿನ ಪದಾರ್ಥಗಳನ್ನು ನೋಡುವುದು ಹೇಗೆ ? ವಿಶೇಷತಃ ಲಕ್ಷಾಂತರ ಮೈಲುಗಳ ಮೇಲಿರುವ ಗ್ರಹ ನಕ್ಷತ್ರಾದಿಗಳನ್ನು ನೋಡುವುದು ಹೇಗೆ ? ಇದಕ್ಕೆ ಸೂರ್ಯಕಾಂತ ಗಳ ಎರಡೂ ಗುಣಗಳನ್ನು ಉಪಯೋಗಿಸುವರು. ಒಂದು ಕೊಳವೆಯ ಒಂದು ತುದಿಗೆ ಒಂದು ಸೂರ್ಯಕಾಂತವನ್ನಿಡುವರು. ದೂರಿನದೊಂದು ಪದಾರ್ಧದಿಂದ ಬರುವ ಪ್ರಕಾಶ ಕಿರಣಗಳು ಇದರೊಳಗಿಂದ ಹಾಯು ಮಣಿಸಲ್ಪಟ್ಟು, ಆ ಕೊಳವಿಯೊಳಗೆ ಅದರದೊಂದ ಪ್ರತಿಕೃತಿ ಮಡುವುದು. ಇದು ತೀರ ಸಣ್ಣದಿರುವುದು. ಇದನ್ನು ದೊಡ್ಡದಾಗಿ ಕಾಣುವಂತೆ ಮಾಡ ವುದಕ್ಕೆ ಆ ಕೊಳವೆಯ ಇನ್ನೊಂದು ತುದಿಗೆ ಒಂದು ಸೂಕ್ಷ್ಮ ದರ್ಶಕ ಯಂತ್ರವನ್ನಿಡುವರು. ಹೆಚ್ಚುಕಡಿಮೆ ದೂರದ ಪದಾರ್ಥಗಳನ್ನು ನೋಡುವುದಕ್ಕೆ ಇವೆರಡೂ ತುದಿಗಳ ನಡುವಿನ ಅಂತರವನ್ನು ಹೆಚ್ಚು ಕಡಿಮೆ ಮಾಡಬೇಕಾಗುವುದು. ಅದರಿಂದ ಒಂದೇ ಕೊಳವೆಯನ್ನಿಡದೆ ಒಂದರೊಳಗೊಂದು ಹೀಗೆ ಎರಡು ಕೊಳವೆಗಳನ್ನಿಡುವರು. ಎರಡೂ ಕೊಳವೆಗಳ ಹೊರಗಿನ ತುದಿಗಳಿಗೆ ಸೂರ್ಯಕಾಂತಗಳಿರುವವು. ಒಳಗಿನ ಕೊಳವೆಯನ್ನು ಬೇಕಾದಷ್ಟು ಹೊರಗೆ ತೆಗೆಯುವುದರಿಂದ ಅವುಗಳ ನಡುವಿನ ಅಂತರವು ಬೇಕಾದಷ್ಟು ಸಣ್ಣ ದೊಡ್ಡದಾಗಿ ಮಾಡಲ್ಪಡುವುದು. ಇಂತಹ ಯಂತ್ರಗಳಿಗೆ ದೂರದರ್ಶಕ ಯಂತ್ರಗಳೆನ್ನುವರು.