ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಾಚೀನ ಇತಿಹಾಸ ಭುವನಕೋಶದ ಬಗ್ಗೆ ನಮ್ಮ ವಿಚಾರವು ಹೇಗಿದ್ದವು? ವಿಶ್ವದ ಮಧ್ಯಭಾಗದಲ್ಲಿ ಸೃದ್ಧಿಯಿದೆ. ಅದರ ಸುತ್ತಲು ಚಂದ್ರಾದಿ ಗ್ರಹಗಳು ತಿರುಗುತ್ತವೆ. ಅವುಗಳ ಕ್ರಮ: ಚಂದ್ರ, ಬುಧ, ಶುಕ್ರ, ರವಿ, ಮಂಗಳ, ಗುರು, ಶನಿ, ತಾರಕಾ ಮಂಡಲ ಹೀಗೆ ಇರುವುದು, ನಕ್ಷತ್ರ ಮಂಡಲವು ಧ್ರುವದ್ವಯಬದ್ಧವಾಗಿ ತಿರುಗುತ್ತದೆ. ಹೃದ್ಧಿಯು ಗೋಲವಿದೆ; ನಿರಾಧಾರವಿದೆ ; ಅದರ ಸುತ್ತಲೂ ವಾಯುವಿರುತ್ತದೆ. ಅದಕ್ಕೆ ಭೂವಾಯುವನ್ನು ವರು. ಅದರಮೇಲೆ ಆಕಾಶದಲ್ಲಿ ಪ್ರವಹನಾಮಕ ವಾಯುವು ಸಂಚಾರಮಾಡುತ್ತದೆ. ಅದರ ಪ್ರೇರಣೆಯಿಂದ ಚಂದ್ರಾದಿ ಗಳಿಗೆ ಗತಿಯು ಪ್ರಾಪ್ತವಾಗುತ್ತದೆ. ಮತ್ತು ಅವು ಪೃಥ್ವಿಯ ಸುತ್ತಲೂ ತಿರುಗುತ್ತವೆ. ಗ್ರಹಗಳು ಸಹಿತವಾಗಿ ಯಾವತ್ತೂ ತಾರಕಾ ಮಂಡಲವು ಸುಮಾರು ಒಂದು ದಿವಸದಲ್ಲಿ ಪೃಥ್ವಿಯ ಸುತ್ತಲು ಒಂದು ಪ್ರದಕ್ಷಿಣೆ ಯನ್ನು ಮಾಡಿದಂತೆ ತೋರುತ್ತದೆ. ಆದರೆ ಈ ದೈನಂದಿನ ಗತಿಯು ನಿಜವಾ ದದ್ದು ಅಲ್ಲವೆಂದೂ, ಪೃಥ್ವಿಯ ದೈನಂದಿನ ಗತಿಯ ವ ಲಕ ಅದು ಹಾಗೆ ತೋರುತ್ತದೆಂದೂ ಆಧುನಿಕ ಮತವಿರುತ್ತದಷ್ಟೆ. ಅದರಂತೆ ನಮ್ಮ ಜ್ಯೋತಿಷಿಗಳಲ್ಲಿ ಮೊದಲನೆಯ ಆರ್ಯಭಟ್ಟನ ಮತವು ಮಾತ್ರ ಇರುತ್ತದೆ (೫ನೆಯ ಶತಮಾನ), ಮಿಕ್ಕವರೆಲ್ಲರ ಮತವು ನಕ್ಷತ್ರ ಮಂಡಲದ ದೈನಂದಿನ ಗತಿಯು ವಾಸ್ತವಿಕವಿರುತ್ತದೆಂದೆ ಇರುತ್ತದೆ. ಮತ್ತು ಬಹುಶಃ ಎಲ್ಲ ಪೌರುಷ ಸಿದ್ಧಾಂತಕಾರರು ಆರ್ಯಭಟ್ಟನ ಮತವನ್ನು ದೂಷಿಸಿದ್ದಾರೆ. ಗ್ರಹಗಳ ಗತಿಯು ನಕ್ಷತ್ರಗಳ ಗತಿಗಿಂತ ಕಡಿಮೆಯಿರುವುದರಿಂದ ಅವು ಹಿಂದುಳಿಯುತ್ತವೆ. ಆದುದರಿಂದ ನಕ್ಷತ್ರಗಳ ಸಂಬಂಧದಿಂದ ಅವುಗಳನ್ನು ನೋಡಲು ಅವು ಪೂರ್ವಕ್ಕೆ ಹೋದಂತೆ ಕಾಣುತ್ತವೆ. ಚಂದ್ರನು ಬಹಳ ಹತ್ತರವಿರುವ ಮೂಲಕ ಅವನ ಗತಿಯು ಬಹಳ ವೇಗವುಳ್ಳದ್ದಿದೆ. ಶನಿಯ ಕಕ್ಷೆಯು ಸರ್ವ ಗ್ರಹಗಳ ಹೊರಗೆ ಇರುವ ಮೂಲಕ ಆತನ ಗತಿಯು ಬಹಳ ವ ಂದವಿದೆ. ಸರ್ವ ನಕ್ಷತ್ರ ಮಂಡಲದಲ್ಲಿ ಗ್ರಹಗಳ ಒಂದು ಪ್ರದಕ್ಷಿಣೆಗೆ ಭಗಣ ವೆನ್ನುತ್ತಾರೆ. ನಿತ್ಯದಲ್ಲಿ ಪ್ರತ್ಯಕ್ಷವಾಗಿ ತೋರುವ ಗತಿಗೆ “ಸೃಷ್ಟ'ವೆನ್ನುತ್ತಾರೆ. ಭಗಣಕ್ಕೆ ಎಷ್ಟು ಕಾಲ ಹಿಡಿಯುತ್ತದೆಂಬು ದನ್ನು ಗೊತ್ತುಪಡಿಸುವುದಕ್ಕೆ ( ಮಧ್ಯಮ'ವೆನ್ನುತ್ತಾರೆ.