ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಸೂರ್ಯನು ಒಂದ ನಕ್ಷತ್ರಕ್ಕೆ ಬಂದು ಪುನಃ ಅದೇ ನಕ್ಷತ್ರಕ್ಕೆ ಬರುವ ಕಾಲಕ್ಕೆ ( ನಕ್ಷತ್ರ ಸೌರವರ್ಷ'ವೆನ್ನುತ್ತಾರೆ. ವಿಷುವವೃತ್ತ ಮತ್ತು ಕ್ರಾಂತಿವೃತ್ಯ ಇವುಗಳ ಛೇದವು ಎರಡು ಕಡೆಯಾಗ ಇದೆ. ಆ ಬಿಂದುಗಳಿಗೆ ಸಂಪಾತ ಅಧವಾ ( ಕ್ರಾಂತಿಪಾತ ವೆನ್ನುತ್ತಾರೆ. ವಿಶ್ವದ ಉತ್ಪತ್ತಿಯ ಬಗ್ಗೆ ವಿಚಾರಗಳು-ಮೊದಲು ಯಾವುದೊ ಒಂದು ಅಸ್ತಿತ್ವವು ಹುಟ್ಟಿತು. ಅಲ್ಲಿಂದ ದಿಕ್ಕುಗಳು ಹುಟ್ಟಿದವು. ವಿಶ್ವದಲ್ಲಿ ಮೂರು ಭಾಗಗಳು ; ಸೃದ್ಧಿ, ಅಂತರಿಕ್ಷ ಮತ್ತು ದೌ (ಆಕಾಶ). ಇವು ಗಳಲ್ಲಿ ಮೇಘ, ವಾಯ 5, ವಿದ್ಯುತ್ತು ಇವುಗಳಿರುವ ಪ್ರದೇಶವು ಸೃದ್ಧಿಯ ಹತ್ತಿರವಿರುತ್ತದೆ. ಸೂರ್ಯ ಚಂದ್ರ ನಕ್ಷತ್ರಗಳು ಆಕ್ರಮಣಮಾಡುವ ಪ್ರದೇಶವು ಸೃದ್ಧಿಯಿಂದ ದೂರವಿರುತ್ತದೆ. ಸಕಲ ಭವನಕ್ಕೆ ಆಧಾರನು ಸೂರ್ಯನು ; ಋತುಗಳಿಗೆ ಕಾರಣನು ಸೂರ್ಯನು ; ವಾಯುವು ಸಂಚರಿ ಸುವುದಕ್ಕೂ ಸೂರ್ಯನೆ ಕಾರಣನು. ಋಗೈದದಲ್ಲಿ ಗ್ರಹಣಗಳ ಉಲ್ಲೇಖವಿದೆ. ಮಹಾಭಾರತದಲ್ಲಿ ಏಳು ವಾರಗಳು ಮತ್ತು ವೆ ಷಾದಿ ರಾಶಿಗಳ ಇಲ್ಲ; ಖ ತು, ಅಯನ, ಮಧ್ಯಾದಿ ಮಾಸ, ತಿಧಿ ಇವುಗಳ ಉಲ್ಲೇಖವು ಅನೇಕ ಕಡೆಗೆ ಬಂದಿದೆ, ೨೭ ನಕ್ಷತ್ರಗಳ ಉಲ್ಲೇಖವು ೨ಕಡೆ ಬಂದಿದೆ; ಚಂದ್ರ ಸೂರ್ಯರ ಗ್ರಹಣಗಳು ಬಂದಿವೆ. ಭಾರತ ಯುದ್ಧಕ್ಕೆ ಪೂರ್ವದಲ್ಲಿ ಕಾರ್ತಿಕ ಪೌರ್ಣಿಮೆಗೆ ಚಂದ್ರಗ್ರಹಣವಾಗಿತ್ತು; ಮುಂದಿನ ಅಮಾವಾಸ್ಯೆಗೆ ಸೂರ್ಯಗ್ರಹಣವಾಗಿತ್ತು; ದುರ್ಯೋಧನನ ವಧೆ ಯಾದಾಗ ಸೂರ್ಯಗ್ರಹಣವಿತ್ತು; ಧೂಮಕೇತ ಉಲ್ಕಾಪಾತಗಳ ವರ್ಣನೆಯಿದೆ. ವೇದಾಂಗ ಜ್ಯೋತಿಷಗಳ ಕಾಲವು ಕ್ರಿ. ಶ. ಪೂರ್ವದ ೫೦೦ ವರುಷ, ಆ ಬಳಿಕ ಲಾಟ, ಸಿಂಹ ಮುಂತಾದ ಜ್ಯೋತಿಷಿಗಳು ಹುಟ್ಟಿದರು. ಈಗಿನ ಸೂರ್ಯಸಿದ್ಧಾಂತವು ಯಾರಿಂದ ಮಾಡಲ್ಪಟ್ಟಿದೆಯೆಂಬುದು ಗೊತ್ತಿಲ್ಲ. ನಮ್ಮ ದೇಶದಲ್ಲಿ ಗ್ರಹಗಣಿತದ ಸಂಬಂಧದಿಂದ ಈಗ ಮುಖ್ಯ ಮೂರು ಪಕ್ಷಗಳಿರುತ್ತವೆ. ಒಂದು ಸೌರಪಕ್ಷ, ಇನ್ನೊಂದು ಆರ್ಯಪಕ್ಷ : ಮತ್ತೊಂದು ಬ್ರಹ್ಮ ಪಕ್ಷ. ಮೊದಲನೆಯ ಪಕ್ಷದ ಮೂಲಗ್ರಂಧವು ಸೂರ್ಯ ಸಿದ್ಧಾಂತವು ; ಎರಡನೆಯ ಪಕ್ಷದ್ದು ಆರ್ಯಸಿದ್ಧಾಂತವು ; ಮೂರನೆಯ