ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಸೋಮೇಶ್ವರ-ಈತನು ಕಲ್ಯಾಣ ಚಾಳುಕ್ಯವಂಶದ ರಾಜನು. ಪ್ರಸಿದ್ದ ವಿಕ್ರಮಾಂಕನ ಮಗನು ; ಜ್ಯೋತಿಷವನ್ನೂ ಬಲ್ಲವನು. ಈತನು ಶಕ ೧೦೫೧ರಲ್ಲಿ ಅಭಿಲಷಿತಾರ್ಥಚಿಂತಾಮಣಿ ಅಧವಾ ಮಾನಸೋಲ್ಲಾಸ ವೆಂಬ ಗ್ರಂಥವನ್ನು ಬರೆದರು. ಅದರಲ್ಲಿ ಅನೇಕ ವಿಷಯಗಳಿದ್ದು ಜ್ಯೋತಿಷವೂ ಬಂದಿದೆ. ಭಾಸ್ಕರಾಚಾರ್ಯ-ಇವನು ಅತ್ಯಂತ ಪ್ರಸಿದ್ಧ ಜ್ಯೋತಿಷಿಯು. ಸಹಕುಲಾಚಲದ ಹತ್ತಿರವಿದ್ದ ವಿಚ್ಚಡವೀಡು (?) ಎಂಬ ಊರಲ್ಲಿ ಶಕ ೧೦೩೬ರಲ್ಲಿ ಹುಟ್ಟಿದನು. ಇವನು ಸಿದ್ಧಾಂತಶಿರೋಮಣಿ, ಕರಣ ಕುತೂಹಲ ಎಂಬ ಜ್ಯೋತಿಷ ಗ್ರಂಧಗಳನ್ನು ಬರೆದಿದ್ದಾನೆ. ಪ್ರಸಿದ್ದ ಲೀಲಾವತಿ ಗ್ರಂಧವನ್ನು ಬರೆದಾತನು ಈತನೆ. ಈತನ ಮೊಮ್ಮಗನಾದ ಚೆಂಗದೇವನು ಯಾದವ ವಂಶದ ಸಿಂಗಣ ರಾಜನಲ್ಲಿ ಜ್ಯೋತಿಷಿ ಯಿದ್ದನು. ಗಣೇಶದೈವಜ್ಞ-ಈತನು ಗ್ರಹಲಾಘವ ಮುಂತಾದ ಅನೇಕ ಗ್ರಂಧಗಳನ್ನು ರಚಿಸಿರುವನು. ಈತನ ಗ್ರಹಲಾಘವವು ಈಗ ಇಡೀ ಹಿಂದುಸ್ಥಾನದಲ್ಲೆಲ್ಲ ಸರ್ವಮಾನ್ಯವಾಗಿದೆ. ಈತನ ಜನ್ಮ ಶಕ ೧೪೨೦. ಜಯಸಿಂಹ-ಈತನು ೧೬೧೫ನೆಯ ಶಕದಲ್ಲಿ ಅಂಬೇರದ ಅರಸ ನಾಗಿದ್ದನು. ಈಗಿನ ಜಯಪುರವನ್ನು ಕಟ್ಟಿಸಿದವನು ಇವನೆ. ಈತನೂ ಪ್ರಸಿದ್ಧ ಜ್ಯೋತಿಷಿಯು, ಜಯಪುರ, ದಿಲ್ಲಿ, ಉಜ್ಜಯಿನಿ, ಕಾಶಿ, ಮಧುರಾ ಈ ೫ ಸ್ಥಳಗಳಲ್ಲಿ ವೇಧಶಾಲೆಗಳನ್ನು ಸ್ಥಾಪಿಸಿ ಹೊಸ ವೇಧಗ್ರಂಧಗಳನ್ನು ಮಾಡಿಸಿದನು. ಧಾತುವಿನಿಂದ ಮಾಡಿದ ಯಂತ್ರಗಳು ಜಂಗುತಿನ್ನು ನವೆಂದು ತಿಳಿದು ಕಲ್ಲು ಮತ್ತು ಗಚ್ಚುಗಳ ದೊಡ್ಡ ದೊಡ್ಡ ಯಂತ್ರಗಳನ್ನು ಮಾಡಿ ಸಿದನ , ಜಯಪ್ರಕಾಶ, ಯಂತ್ರಸಮ್ರಾಟ್, ಭಿತ್ತಿಯಂತ್ರ ಮುಂತಾದ ಕೆಲವು ಹೊಸ ಯಂತ್ರಗಳನ್ನು ಕಲ್ಪಿಸಿದನು. ಯುರೋಪಖಂಡದಲ್ಲಿ ಆಗಿನ ಕಾಲದಲ್ಲಿ ಗ್ರಹಗತಿ ಸ್ಪಿತಿಗಳ ಎಷ್ಟು ಸೂಕ್ಷ್ಮ ರೀತಿಯಿಂದ ತೆಗೆಯಲ್ಪಡು ತಿದ್ದವೋ ಅದಕ್ಕೂ ಹೆಚ್ಚು ಸೂಕ್ಷ್ಮತೆಯನ್ನು ಜಯಸಿಂಹನು ಸಾಧಿಸಿದ್ದ ನೆಂದು ಹೇಳಿದರೆ ಆತನ ಯೋಗ್ಯತೆಯು ಗೊತ್ತಾಗುವುದು.