ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭವಿಷ್ಯ ಪುರಾಣ ಹೆಚ್ಚು ಸೀತವುಳ್ಳದ್ದಾಗುವುದು. ಕಲ್ಲಿದ್ದಲಿ ಮತ್ತು ಎಣ್ಣೆ ಇವುಗಳ ಕಣಿಗಳು ಬತ್ತಿಹೋಗುವವು. ಈಗಲೇ ಅಡವಿಗಳೆಲ್ಲ ಬಯಲಾಗಹತ್ತಿವೆ. ಮುಂದೆಯಂತೂ ಒಂದು ಗಿಡವು ಸಹ ಉಳಿಯಲಿಕ್ಕಿಲ್ಲ. ಆದರೆ ಆಗಕೂಡ ಜನರು ವಾಸಿಸದೆ ಇರಲಿಕ್ಕೆ ಕಾರಣವಿಲ್ಲ. ಸೃದ್ಧಿಯಲ್ಲಿ ಈಗಿನಷ್ಟು ದೊಡ್ಡ ಜನಸಂಖ್ಯೆಯುಳಿಯಲಿಕ್ಕಿಲ್ಲ. ಮನುಷ್ಯಪ್ರಾಣಿಯ ಹಿಂದಿನ ಆಯುಷ್ಯಕ್ಕಿಂತಲೂ ಮುಂದೆ ಆತನು ಬದುಕುವ ಆಯುಷ್ಯವೆ ಹೆಚ್ಚಿಗೆ ಇದೆ. ತೀರ ಕಡಿಮೆಯೆಂದರೆ ಅದು ೨೦ ಕೋಟಿ ಎಂದು ಹಿಡಿಯೋಣ. ಒಬ್ಬ ವ್ಯಕ್ತಿಯ ಆಯುಷ್ಯವು ೭೦ ವರುಷಗಳೆಂದು ತಿಳಿದರೆ ಸೃದ್ಧಿಯಲ್ಲಿ ಹುಟ್ಟಿದ ಮನುಷ್ಯ ಪ್ರಾಣಿಯ ಆಯುಷ್ಯವು, ಇಂದಿಗೆ ಮೂರೇ ದಿವಸದ್ದಾಗುತ್ತದೆ. ಎಂದರೆ ಮನುಷ್ಯ ಪ್ರಾಣಿಯು ೩ ದಿವಸದ ಕೂಸು. ಅದು ಮೊನ್ನೆ ಕಣ್ಣು ತರೆದಿದೆ. ಕಣ್ಣು ತೆಗೆದು ಜಗತ್ತನ್ನು ಇನ್ನೂ ಪೂರ್ಣವಾಗಿ ನೋಡಿಲ್ಲ. ೧ll ಮಿನಿಟಿನ ಹಿಂದೆ ಮಾತ್ರ ಈ ಕೂಸು ನಕ್ಷತ್ರಗಳ ಅಳತೆಯನ್ನು ಕಂಡು ಹಿಡಿಯಿತು. ೧೫ ಸೆಕೆಂಡುಗಳ ಹಿಂದೆ ಶ್ರೀ ಹರ್ಟ್ಟಸ್ಸಂಗ್ ಇವರೇ ಮುಂತಾದವರು ನಕ್ಷತ್ರಗಳ ಅಳತೆಯ ವಿಷಯವಾಗಿ ಹೊಸ ಶೋಧ ಮಾಡಿದರು. ಈ ಕೂಸಿನ ಒಂದೆ ಸೆಕಂಡಿನ ಹಿಂದೆ ಡಾ|| ಹಬಲ್ ಎಂಬವನು ಪೃಥ್ವಿಯ ಮೇಲಿನ ಎಲ್ಲಕ್ಕೂ ದೊಡ್ಡದಾದ ದೂರದರ್ಶಕಯಂತ್ರದೊಳಗಿಂದ ಎಲ್ಲಕ್ಕೂ ದೂರದಲ್ಲಿ ಕಾಣುವ ನಕ್ಷತ್ರದಿಂದ ಹೊರಟ ಬೆಳಕು ನಮಗೆ ಬಂದು ತಲುಪಬೇಕಾದರೆ ೧೪,೦೦,೦೦,೦೦೦ ವರುಷಗಳು ಬೇಕಾಗುವವೆಂದು ಹೇಳಿದ್ದಾನೆ! ಹೀಗೆ ವಿಶ್ವದ ನಮ್ಮ ಕಲ್ಪನೆಯು ದಿನದಿನಕ್ಕೆ ಅತ್ಯದ್ಭುತವಾಗಿ ಬೆಳೆಯುತ್ತಿದೆ. ಆದರೆ ಅದು ಹೀಗೆ ಎಲ್ಲಿಯವರೆಗೆ ಬೆಳೆಯಬಹುದು ? ಅದಕ್ಕೆ ಏನಾದರೂ ಮರ್ಯಾದೆಯುಂಟೋ, ಇಲ್ಲವೋ ? ಎಂದು ಕೇಳಿದರೆ ಈಗಿನ ಜ್ಞಾನದ ಮೇಲಿಂದ ಹೇಳುವುದಾದರೆ ಈ ಉಂಟು ' ಎಂದು ಹೇಳಬಹುದು. ಏಕೆಂದರೆ ಆಕಾಶವೆಂಬುದು ಒಂದು ದೊಡ್ಡ ಗೋಲವು, ಆಕಾಶದ ದೂರ ದಲ್ಲಿಯ ಭಾಗಗಳ ಜ್ಞಾನವು ಅಲ್ಲಿಯ ಜ್ಯೋತಿಗಳಿಂದ ಬರುವ ಕಿರಣಗಳಿಂದಲೆ ಆಗುತ್ತದೆ. ಈ ಕಿರಣಗಳು ಸರಳವಾಗಿ ಬರುತ್ತವೆಂದು ಈಗಿನವರೆಗೆ ತಿಳಿವಳಿಕೆಯಿತ್ತು. ಆದುದರಿಂದ ನಕ್ಷತ್ರಗಳು ಎಷ್ಟೇ ದೂರದಲ್ಲಿದ್ದರೂ ಅವು