ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫ನೆಯ ಪ್ರಕರಣ ಭವಿಷ್ಯ ಪುರಾಣ ಇಲ್ಲಿಯವರೆಗೆ ನಾವು ಆಕಾಶದೊಳಗಿನ ಚಮತ್ಕಾರಗಳನ್ನು ಕುರಿತು ಅನೇಕ ಸಂಗತಿಗಳನ್ನು ಹೇಳಿದೆವು. ಆದರೆ ಮನುಷ್ಯನಿಗೆ ಮುಂದಿನ ಸಂಗತಿ ಯನ್ನು ತಿಳಿದುಕೊಳ್ಳಬೇಕೆಂಬ ಕುತೂಹಲವುಂಟಾಗುತ್ತದೆ. ಜ್ಯೋತಿ ಶ್ಯಾಸ್ತ್ರವು ಕಲ್ಪನೆಯ ಸಾಮ್ರಾಜ್ಯವು, ಆದರೂ ಹುಚ್ಚರ ಸಾಮ್ರಾಜ್ಯವಲ್ಲ. ಕೆಲವೊಂದು ತತ್ವಗಳನ್ನನುಸರಿಸಿ ಸಿದ್ಧಾಂತಗಳನ್ನು ತೆಗೆಯಬೇಕಾಗುತ್ತದೆ. ಆ ರೀತಿಯಿಂದ ವಿಚಾರಮಾಡಿ ಕೆಲವು ಜ್ಯೋತಿಷಿಗಳು ಭವಿಷ್ಯಕಾಲದ ವರ್ಣನೆಯನ್ನು ಮಾಡಿರುವರು. ಅದು ವಾಚಕರಿಗೆ ಕಧೆಗಿಂತಲೂ ಹೆಚ್ಚು ಮನೋರಂಜಕವಾಗಬಹುದು. ಅದರ ಸ್ವಲ್ಪ ಸಾರವನ್ನು ಇಲ್ಲಿ ಕೊಡುವೆವು. ಈ ಪೃಥ್ವಿಯಮೇಲೆ ಮನುಷ್ಯನು ಹುಟ್ಟಿ ೩ ಲಕ್ಷ ವರುಷಗಳಾಗಿರ ಬೇಕೆಂದು ಶಾಸ್ತ್ರಜ್ಞರು ಹೇಳುತ್ತಾರೆ. ಎಂದರೆ ನಮ್ಮ ಪೂರ್ವಜ' ರಾದ ಮಂಗಗಳಿಗೆ ಹೋಗುವುದಾದರೆ ನಾವು ಅದಕ್ಕೂ ಹಿಂದೆ ಹೋಗ ಬೇಕು. ಇರಲಿ, ಈ ಮರುಲಕ್ಷ ವರುಷಗಳಲ್ಲಿ ಸುಮಾರು ೧೦,೦೦೦ ತಲೆ ಗಳಾಗಿ ಹೋಗಿವೆ. ಈ ಹತ್ತು ಸಾವಿರ ತಲೆಗಳಲ್ಲಿ ಮೊದಲಿನ ೯,೯೯೦ ತಲೆಗಳ ಜನರು ಈ ಸೃದ್ಧಿಯೇ ವಿಶ್ವದ ಕೇಂದ್ರವೆಂದು ತಿಳಿದಿದ್ದರು. ಸೂರ್ಯ ಚಂದ್ರಾದಿಗಳೆಲ್ಲರೂ ಈ ಸೃದ್ಧಿಯ ಸುತ್ತಲೂ ತಿರುಗುತ್ತಾರೆಂದು ಅವರ ಗ್ರಹಿಕೆ. ಇತ್ತೀಚೆ ಮಾತ್ರ ಅದು ಬದಲಾಗಿದೆ. ಮನುಷ್ಯನು ಸೃದ್ಧಿಯಮೇಲೆ ಹುಟ್ಟಿ ೩ ಲಕ್ಷ ವರುಷಗಳಾಗಿದ್ದರೆ ಪೃಥ್ವಿಯು ಹುಟ್ಟಿ ೨೦೦ ಕೋಟಿ ವರುಷಗಳಾಗಿರುತ್ತವೆಂದು ಭೂಗರ್ಭ ಶಾಸ್ತ್ರಜ್ಞರು ಹೇಳುತ್ತಾರೆ. ಮುಂದೆ ಸೃದ್ಧಿಯು ಎಷ್ಟು ಕೋಟಿ ವರುಷ ಗಳವರೆಗೆ ಬದುಕುವುದೊ ಏನೊ ಈಗಿನ ಮಾನದಿಂದ ನೋಡಿದರೆ ೧,೦೦೦,೦೦೦,೦೦೦,೦೦೦ ವರುಷಗಳ ನಂತರ ಸಹ ಸೂರ್ಯ ನು ಈಗಿನಂತೆಯೆ ಹೊಳೆಯುವನು. ಸೃಥ್ವಿಯು ಈಗಿನಂತೆ ಆಗಲೂ ತಿರುಗುತ್ತಿರುವುದು. ವರುಷಗಳು ಸ್ವಲ್ಪ ದೊಡ್ಡವಾಗುವವು. ಹವೆಯು