ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ದಲ್ಲಿಯೇ ತೊಡಗಿದ್ದು ೮೪ ವರುಷದ ಮುದುಕನಾಗಿ ೧೭೨೭ರಲ್ಲಿ ಮರಣ ಹೊಂದಿದನು. ಹರ್ಶೆಲ್‌ನ ಚರಿತ್ರೆಯ ಮನನೀಯವಾಗಿದೆ. ಇವನು ೧೭೩೮ನೆಯ ಇಸವಿಯಲ್ಲಿ ಜರ್ಮನಿಯಲ್ಲಿ ಹುಟ್ಟಿದನು. ಹೊಟ್ಟೆ ತುಂಬಿಕೊಳ್ಳುವುದಕ್ಕಾಗಿ ಇಂಗ್ಲಂಡಿಗೆ ಬಂದನು. ಜನರಿಗೆ ವಾದ್ಯಗಳನ್ನು ಬಾರಿಸಲಿಕ್ಕೆ ಕಲಿಸು ತಿದ್ದನು. ಇವನಿಗೆ ಜ್ಯೋತಿಶ್ಯಾಸ್ತ್ರದ ಹುಚ್ಚು ಬಹಳ, ಉದರಂಭರಣವೆ ದುರಾಪಾಸ್ತ್ರವಾಗಿರಲು ಯಂತ್ರಗಳನ್ನು ಕೊಳ್ಳಲಿಕ್ಕೆ ದ್ರವ್ಯವೆಲ್ಲಿ? ತಾನೇ ಹಗಲು ರಾತ್ರಿ ದುಡಿದು ಒಂದು ಯಂತ್ರವನ್ನು ಮಾಡಿಕೊಂಡನು. ಒಂದೆ ಸವನೆ ಯಂತ್ರಕ್ಕೆ ಬೇಕಾಗುವ ಕಾಜನ್ನು ಮಸೆದು ನುಣುಪುಮಾಡುತ್ತ ೧೬ ಗಂಟೆಗಳವರೆಗೆ ಕುಳಿತುಕೊಳ್ಳುತ್ತಿದ್ದನು. ನಕ್ಷತ್ರಗಳ ವಿಷಯವಾಗಿ ಮೊದಲಿಗೆ ಬಹಳ ಶೋಧಮಾಡಿದವನು ಇವನೆ. ರಾತ್ರಿಯೆಲ್ಲ ನಕ್ಷತ್ರಗಳನ್ನು ಎಣಿಸುತ್ತ ಕುಳಿತುಕೊಳ್ಳುವನು. ಊಟದ ಪರಿವೆ ಸಹ ಈತನಿಗೆ ಇರುತ್ತಿರ ಲಿಲ್ಲ! ಇವನ ತಂಗಿಯು ಇವನ ಹತ್ತಿರವೆ ಕುಳಿತುಕೊಂಡು ತುತ್ತುಮಾಡಿ ಇವನ ಬಾಯಲ್ಲಿ ಹಾಕುವಳು. ಇವನು ೧೮೨೨ನೆಯ ಇಸವಿಯಲ್ಲಿ ಸತ್ತನು. ಇಂಧವರ ಜನ್ಮವು ನಿಜವಾಗಿ ಸಾರ್ಧಕವು. ಈತನ ತರುವಾಯದಲ್ಲಿಯೂ ಅನೇಕ ಜ್ಯೋತಿಷಿಗಳು ಆ ಖಂಡದಲ್ಲಿ ಇಂದಿನವರೆಗೆ ಈ ತರಹದ ತಪಶ್ಚರ ವನ್ನು ನಡೆಯಿಸಿಯೆ ಇರುವರು.