ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫ನೆಯ ಪ್ರಕರಣ ಆಕಾಶರಾಜ ಪಟ್ಟಣ ಅಥವಾ ಖಗೋಲ ಆಕಾಶದಲ್ಲಿ ನಮಗೆ ಕಾಣುವ ಪದಾರ್ಥಗಳು ಯಾವವು? ಅವುಗಳ ಸ್ಥಿತಿ ಗತಿಯೇನು ? ಜ್ಯೋತಿಶ್ಯಾಸ್ತ್ರವು ಅವುಗಳ ಕಡೆಗೆ ಯಾವ ದೃಷ್ಟಿ ಯಿಂದ ನೋಡುತ್ತದೆ? ಇವೇ ಮುಂತಾದವುಗಳ ಬಗ್ಗೆ ವಿಚಾರಮಾಡುವ. ಆಕಾಶದಲ್ಲಿ ನಮ್ಮ ಕಣ್ಣಿಗೆ ಕಾಣುವ ಮುಖ್ಯ ಪದಾರ್ಥಗಳೆಂದರೆ ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳು ಮತ್ತು ಆಕಾಶಗಂಗೆ; ಕಣ್ಣಿಗೆ ನಿಚ್ಚಳವಾಗಿ ಕಾಣದಿದ್ದರೂ ದುರ್ಬಿನಿಗೆ ಕಾಣುವ ಪದಾರ್ಧಗಳೆಂದರೆ ತೇಜೋ ಮೇಘಗಳು ; ಇನ್ನೂ ಎಷ್ಟೋ ನಕ್ಷತ್ರಗಳು. ಯಾವಾಗಲೊಮ್ಮೆ ಕಾಣುವ ಪದಾರ್ಥಗಳೆಂದರೆ, ಉಲ್ಕೆಗಳು, ಧೂಮಕೇತುಗಳು. ಮೊದಲು ಆಕಾಶವೆಂದರೇನೆಂಬುದನ್ನು ತಿಳಿದುಕೊಳ್ಳುವುದು ಅವಶ್ಯವಿದೆ. ಕಣ್ಣಿ ಗೇನೋ ಅದು ನಮ್ಮ ಮೇಲ್ಬಾಗದಲ್ಲಿ ಡಬ್ಬುಹಾಕಲ್ಪಟ್ಟ ಒಂದು ನೀಲಿಯ ಬಣ್ಣದ ಕೊಪ್ಪರಿಗೆಯಂತೆ ಕಾಣುತ್ತದೆ. ಆಕಾಶದಲ್ಲಿಯ ಜ್ಯೋತಿಗಳೆಲ್ಲ ಈ ಕೊಪ್ಪರಿಗೆಯ ಒಳಬದಿಗೆ ಇದ್ದಂತೆ ಕಾಣುತ್ತವೆ. ಈ ಕೊಪ್ಪರಿಗೆಯ ಆಕಾರವು ಎರಡು ಹೋಳಾಗಿ ಮಾಡಿದ ನಿಂಬೆಯ ಹಣ್ಣಿನಂತೆ ಅರ್ಧ ಗೋಲಾಕೃತಿಯಾಗಿರುವುದು. ಕ್ಷಣಕ್ಷಣಕ್ಕೆ ಹೊಸ ತಾರೆಗಳು ಉದಯಿಸಿ ಹಳೆಯವು ಮುಳುಗುತ್ತಿರುವುದರಿಂದ, ನಮಗೆ ಕಾಣಿಸದೆ ಇರುವುದೊಂದು ಇಂಧದೆ ಅರ್ಧಗೋಲವು ನಮ್ಮ ಕಾಲಕೆಳಗೆ ಇರಬೇಕೆಂದು ತಿಳಿಯಬೇಕಾ ಗುತ್ತದೆ. ಈ ಇಡೀ ಗೋಲಕ್ಕೆ ಖಗೋಲವೆನ್ನುವರು. ಊರಲ್ಲಿ ಮನೆ ಗಳು ಇದ್ದಂತೆ ಈ ಗೊಲದ ತುಂಬೆಲ್ಲ ನಕ್ಷತ್ರಾದಿಗಳು ಹರಡಿರುವವು. ಆದುದರಿಂದ ಇದೊಂದು ದೊಡ್ಡ ಪಟ್ಟಣವೆ ಎನ್ನಬಹುದು. ಈ ಪಟ್ಟಣಕ್ಕೆ ಸೂರ್ಯನ ರಾಜನಾಗಿರುವಂತೆ ನಮಗೆ ತೋರುತ್ತಾನೆ. ಆದರೆ ಈ ಆಕಾಶರಾಜ ಪಟ್ಟಣವು ವಿಲಕ್ಷಣವಾದ ಪಟ್ಟಣವು, ಊರಲ್ಲಿಯಂತೆ ಸರಳ ವಾದ ಬೀದಿಗಳಿಲ್ಲ. ಮನೆಗಳು ಈ ದುಂಡಗಿನ ಪಟ್ಟಣದಲ್ಲಿ ಒಳಮಗ್ಗಲಿಗೆ ಅಲ್ಲೊಂದು ಇಲ್ಲೊಂದು ಜೋತಾಡುತ್ತಿರುತ್ತವೆ. ಈ ಪಟ್ಟಣದ ಸ್ಥಿತಿಯನ್ನು ತಿಳಿದುಕೊಳ್ಳಬೇಕಾದರೆ ನಾವು ಓಣಿ, ಸಂದಿ, ಕೂಟಗಳು ಮುಂತಾದವು