________________
ಆಕಾಶರಾಜ ಅಥವಾ ಸೂರ್ಯ ಗಿಡಗಂಟಿಗಳೂ ಪ್ರಾಣಿಮಾತ್ರರೂ ಸತ್ತುಹೋಗುವರು. ನಾವು ಭೂಮಿಯ ಮೇಲೆ ಕಾಣುವ ಎಲ್ಲ ಬಗೆಯ ಉಷ್ಣತೆಗೂ ಸೂರ್ಯನೇ ಪ್ರತ್ಯಕ್ಷವಾಗಿ ಯಾಗಲಿ ಅಪ್ರತ್ಯಕ್ಷವಾಗಿಯಾಗಲಿ ಕಾರಣನು. ನಾವು ಉಪಯೋಗಿಸುವ ಕಟ್ಟಿಗೆಯು ಸೂರ್ಯಪ್ರಕಾಶದಿಂದಲೆ ಬೆಳೆದ ಗಿಡಗಳದು. ಕಲ್ಲಿದ್ದಲಿಯು ಲಕ್ಷಾಂತರ ವರ್ಷಗಳ ಹಿಂದೆ ಬೆಳೆದ ಗಿಡಗಳ ಇದ್ದಲಿಯು. ಮಳೆಯಾಗು ವುದು ಸೂರ್ಯನ ಉಷ್ಣತೆಯಿಂದ. ಇಂತಹ ಸೂರ್ಯನು ಇಲ್ಲದಂತಾದರೆ ಸ್ವಲ್ಪಕಾಲದಲ್ಲಿಯೇ ಭೂಮಿಯಮೇಲಿನ ಜೀವಿಗಳೆಲ್ಲವು ನಾಶಹೊಂದುವ ಎಂದು ನಿಃಸಂದೇಹವಾಗಿ ಹೇಳಬಹುದು. - ಸೂರ್ಯನೆಂದರೆ ಎಂತಹ ಪದಾರ್ಧವೊ ನೋಡುವಾ, ಕಾಣಲಿಕ್ಕೆ ಅದೊಂದು ಬೆಂಕೆಯ ತುಂಡೆಂದು ಕಾಣುತ್ತದೆ. ನೋಡಲಿಕ್ಕೇನೊ ಚಿಕ್ಕ ದಾಗಿದೆ. ಆದರೆ ನಿಜವಾಗಿಯೆ ಅದು ಚಿಕ್ಕದೊ ಹೇಗೆ ? ಅದು ಇಲ್ಲಿಂದ ಎಷ್ಟು ದೂರವಿರುವುದು ? ಇಷ್ಟೊಂದು ಬೆಳಕನ್ನೂ ಉಷ್ಣತೆಯನ್ನೂ ಕೊಡುವ ಶಕ್ತಿಯು ಆ ಪದಾರ್ಧಕ್ಕೆ ಎಲ್ಲಿಂದ ಬಂತು? ಎಷ್ಟೋ ಲಕ್ಷಾವಧಿ ವರುಷಗಳಾಗಿದ್ದರೂ ಸೂರ್ಯನು ತಣ್ಣಗಾಗುವುದಿಲ್ಲವೇಕೆ? ಆತನ ಶರೀರ ದಲ್ಲಿ ಯಾವ ಪದಾರ್ಥಗಳಿರುತ್ತವೆ? ಇವೇ ಮುಂತಾದ ಪ್ರಶ್ನೆಗಳು ಮನುಷ್ಯನ ಮನಸ್ಸಿನಲ್ಲಿ ಬರುವುದು ಸಹಜವಿದೆ. ಆದರೆ ಈ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಕೊಡುವುದು ಮಾತ್ರ ಸುಲಭವಲ್ಲ. ಜ್ಯೋತಿಶ್ಯಾಸ್ತ್ರವು ಹುಟ್ಟಿ ಎಷ್ಟೋ ವರ್ಷ ಗಳಾಗಿದ್ದರೂ ಮನುಷ್ಯನ ಮನಸ್ಸಿನಲ್ಲಿ ಸೂರ್ಯನ ವಿಷಯವಾಗಿ ಬಹುಶಃ ಕಗ್ಗತ್ತಲೆಯೇ ಇತ್ತೆಂದು ಹೇಳಬಹುದು. ದೂರದರ್ಶಕ ಯಂತ್ರವು ಹೊರಟಾಗಿನಿಂದ ಆಕಾಶದ ಬಗ್ಗೆ ನಮ್ಮ ಜ್ಞಾನವು ಬಹಳ ಬೆಳೆದಿದೆಯೇನೋ ಸರಿ. ಆದರೆ ಸೂರ್ಯನ ಸಂಬಂಧದಿಂದ ಮಾತ್ರ ನಮ್ಮ ಜ್ಞಾನವು ಬಹಳ ವಾಗಿ ಬೆಳೆಯಲಿಲ್ಲ. ಇದಕ್ಕೆ ಕಾರಣವೇನೆಂದರೆ, ಸೂರ್ಯನು ಅತ್ಯಂತ ಪ್ರಖರವಿರುವುದರಿಂದ ಆತನ ಕಡೆಗೆ ದುರ್ಬಿನನ್ನು ಹಚ್ಚಿ ನೋಡುವುದ ಅಸಾಧ್ಯವಾಗುತ್ತದೆ. ಸೂರ್ಯ ಕಿರಣಗಳನ್ನು ಪ್ರಧಃಕರಣಮಾಡು ವುದೊರಿದು ಯಂತ್ರವು ಹೊರಟಾಗಿನಿಂದ ಇತ್ತೀಚೆಗೆ ೬೦-೭೦ ವರ್ಷಗಳಲ್ಲಿ ಸೂರ್ಯನ ವಿಷಯವಾಗಿ ನಮಗೆ ಅಲ್ಪ ಸ್ವಲ್ಪ ಜ್ಞಾನವಾಗಿದೆ.