ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಮೊದಲು ಸೂರ್ಯನ ಅಂತರ ಮತ್ತು ಆಕಾರ ಇವುಗಳ ವಿಷಯ ವಾಗಿ ಹೇಳುವೆವು. ಆತನು ನಮ್ಮಿಂದ ಸರಾಸರಿ ಒಂಬತ್ತು ಕೋಟಿ ಮುವ್ವತ್ತು ಲಕ್ಷ ಮೈಲುಗಳಾಚೆಗೆ ಇರುವನು. ಅಂಕಿಯಲ್ಲಿ ಇದನ್ನು ಬರೆಯುವುದೇನೊ ಸುಲಭ; ೯೩,೦೦೦,೦೦೦ ಎಂಬುದಾಗಿ ೯೩ರ ಮುಂದೆ ೬ ಪೂಜೆಗಳನ್ನಿಟ್ಟರೆ ತೀರಿತು. ಆದರೆ ಇದರಿಂದ ಆತನು ಎಷ್ಟು ದೂರ ಇರುವ ನೆಂಬುದರ ಆಧಾರ್ಧಕಲ್ಪನೆಯು ನಿಮ್ಮ ಮನಸಿನಲ್ಲಿ ಬರಲಾರದು. ಕೆಲವು ಉದಾಹರಣೆಗಳಿಂದ ಅದನ್ನು ತಿಳಿಸಲು ಯತ್ನಿ ಸುವೆವು. ಒಬ್ಬ ಮನುಷ್ಯನು ಒಂದು ಗಂಟೆಗೆ ನಾಲ್ಕು ಮೈಲಿನಂತೆ ಹಗಲೂ ರಾತ್ರಿ ಒಂದೇ ಸವನೆ ಸೂರ್ಯನ ಕಡೆಗೆ ನಡೆಯುತ್ತಾನೆಂದು ತಿಳಿಯುವ, ಆತನು ಸೂರ್ಯನನ್ನು ತಲುಪಬೇಕಾದರೆ ೩,೦೦೦ ವರ್ಷಗಳು ಬೇಕಾಗುವವು. ಗಂಟೆಗೆ ನಾಲ್ವತ್ತು ಮೈಲಿನಂತೆ ನಡೆಯುವ ಉಗಿಬಂಡಿಯಲ್ಲಿ ಕುಳಿತು ಹಗಲಿರುಳೂ ಪ್ರವಾಸಮಾಡಿದರೆ, ಸೂರ್ಯನನ್ನು ತಲುಪುವುದಕ್ಕೆ ಸುಮಾರು ೩೫ ವರುಷಗಳು ಹಿಡಿಯುವವು. ಎಂದರೆ ಶಿವಾಜಿಯ ಕಾಲಕ್ಕೆ ನಾವು ಉಗಿಬಂಡಿಯಲ್ಲಿ ಹೊರಟಿದ್ದರೆ, ಇದೀಗ ನಾವು ಆತನ ಬಳಿಗೆ ಹೋಗಿ ಸೇರುತ್ತಿದ್ದೆವ! ಇನ್ನು ಆತನ ಆಕಾರವನ್ನು ನೋಡಿರಿ. ಈ ಸೃದ್ಧಿಯ ಆಕಾರದಂತಹ ಒಂದುನೂರೊಂಬತ್ತು ಗೋಲಗಳನ್ನು ಒಂದರಮೇಲೊಂದಿ ಟ್ಟರೆ ಸೂರ್ಯಗೋಲದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಮುಟ್ಟುವವು. ಆದರೆ ಇದರಿಂದ ಆತನ ಆಕೃತಿಯು ಎಷ್ಟು ವಿಸ್ತಾರ ವಾದುದೆಂಬ ಕಲ್ಪನೆಯು ನಿಮಗೆ ಚೆನ್ನಾಗಿ ಆಗಲಾರದು. ಏಕೆಂದರೆ ಯಾವುದೊಂದು ಪದಾರ್ಧದ ಉದ್ದಳತೆಯನ್ನಷ್ಟೇ ನೋಡಿದರೆ, ಅದು ಎಷ್ಟು ಲಭ್ಯವಿರುತ್ತದೆಂಬುದರ ಕಲ್ಪನೆಯು ನಿಮಗೆ ಬರಲಾರದು. ಸೂರ್ಯನು ಪೃಥ್ವಿಗಿಂತ ೧೨ ಲಕ್ಷ ಪಟ್ಟು ಲಗ್ಧನಿದ್ದಾನೆ. ಸೂರ್ಯಮಾಲೆಯಲ್ಲಿರುವ ಎಲ್ಲ ಗ್ರಹಗಳನ್ನೂ ಉಪಗ್ರಹಗಳನ್ನೂ ಧೂಮಕೇತುಗಳನ್ನೂ ಉಲ್ಕೆ ಗಳನ್ನೂ ಒಟ್ಟುಗೂಡಿಸಿ ಉಂಡೆಮಾಡಿದೆವೆಂದು ತಿಳಿಯಿರಿ. ಅಂತಹ ಏಳುನೂರೈವತ್ತು, ಉಂಡೆಗಳಾದರೆ ಒಬ್ಬ ಸೂರ್ಯನಾಗುವನು. ಆದರೆ ಸೂರ್ಯನ ಭಾರವು ಮಾತ್ರ ಆತನ ಆಕೃತಿಯ ಮಾನದಿಂದ ಬಹಳ ಕಡಿಮೆ ಇರುತ್ತದೆ. ಎಂದರೆ ಭೂಮಿಗಿಂತ ಅದು ಮೂರು ಲಕ್ಷ ಮುವ್ವತ್ತು ಸಾವಿರ