________________
ಜ್ಯೋತಿಶ್ಯಾಸ್ತ್ರ ರಿಂದ ಅಲ್ಲಿ ಪ್ರಚಂಡವಾದ ಬಿರುಗಾಳಿಗಳು ಬೀಸುತ್ತಿರಬೇಕೆಂದೂ, ಅವು ಗಳಿಂದ ಎಬ್ಬಿಸಲ್ಪಟ್ಟ ವಾಯುಗಳು ಸ್ವಲ್ಪ ತಣ್ಣಗಾಗಿ ಮೋಡಗಳಂತೆ ಆಗಲು ಅವೇ ನಮಗೆ ಈ ಕಲೆಗಳಾಗಿ ಕಾಣುತ್ತಿರಬೇಕೆಂದೂ ಬಲ್ಲವರ ಮತವಿದೆ. ೧೧ ವರುಷಕ್ಕೊಮ್ಮೆ ಇಂತಹ ಕಲೆಗಳು ವಿಶೇಷವಾಗಿ ಕಂಡು ಬರುವವು. ಆಗ ಭೂಮಿಯಮೇಲಿನ ಲೋಹಚುಂಬಕಗಳು ಬಹಳ ವಾಗಿ ಅಗಳಾಡುವವು. ಅದರಿಂದ ಈ ಕಲೆಗಳಲ್ಲಿ ವಿದ್ಯುಚ್ಛಕ್ತಿಯು ವಿಶೇಷವಾಗಿರಬೇಕೆಂದು ಊಹಿಸಬಹುದಾಗಿದೆ. ಅಂತು, ಸೂರ್ಯನಂತಹ ತೇಜೋಮಯ ವಿಶುದ್ದ ಮೂರ್ತಿಯನ್ನು ಕೂಡ ಈ ಕಲೆಗಳು ಕಣ್ಮ ಮಾಡದೆ ಬಿಟ್ಟಿಲ್ಲ ! ಸೂರ್ಯನಮೇಲೆ ಕೆಂಪು ಬಣ್ಣದ ದೊಡ್ಡ ದೊಡ್ಡ ಜ್ವಾಲೆಗಳು ಕಂಗೊಳಿಸುತ್ತವೆ. ಇವು ಪ್ರಚಂಡ ವೇಗದಿಂದ ಮೇಲಕ್ಕೇಳುತ್ತವೆ. ಕೆಲವು ನಿಮಿಷಗಳಲ್ಲಿ ೫೦ ಸಾವಿರ ಮೈಲುಗಳವರೆಗೆ ಈ ಉರಿಗಳು ಏಳುತ್ತವೆ. ಅಷ್ಟೇ ವೇಗದಿಂದ ಪುನಃ ಕುಸಿಬೀಳುತ್ತವೆ. ಇಂತಹ ಜ್ವಾಲೆಗಳು ಸೂರ್ಯನಮೇಲೆಲ್ಲ ಇರುವವು. ಆದರೆ ಸೂರ್ಯನ ಪ್ರಕಾಶವು, ಇವುಗಳ ಪ್ರಕಾಶಕ್ಕಿಂತ ಹೆಚ್ಚಿಗೆ ಇರುವುದರಿಂದ ಇವುಗಳನ್ನು ನಾವು ನೋಡಲಾರೆವು. ಖಗ್ರಾಸ ಸೂರ್ಯಗ್ರಹಣದಲ್ಲಿ ಸೂರ್ಯಬಿಂಬವು ಚಂದ್ರನಿಂದ ಆಚ್ಛಾದಿತವಾಗಲು ಅದರ ಅಂಚಿನ ಸುತ್ತಲು ಇವು ಕಾಣ ತೊಡಗುವವು. ಸೂರ್ಯನ ಸುತ್ತಲೊಂದು ಕೆಂಪುಬಣ್ಣದ ವಾಯುರೂಪ ಹೊದಿಕೆಯಿರಬೇಕೆಂದೂ, ಅಲ್ಲಿ ಈ ಜ್ವಾಲೆಗಳು ಹುಟ್ಟುತ್ತಿರಬೇಕೆಂದೂ ತರ್ಕಿಸುತ್ತಾರೆ. ಹೀಗೆ ಸೂರ್ಯದೇವನು ಹೊಂಬಣ್ಣದ ಶಾಲೊಂದನ್ನು ಹೊತ್ತುಕೊಂಡು ಕುಳಿತಿದ್ದಾನೆ ! ಆದುದರಿಂದಲೇ ಅವನು ಸ್ವಲ್ಪ ಕೆಂಪು ತೇಜದವನಾಗಿ ಕಾಣುವನು. ಈ ಜ್ವಾಲೆಗಳು ಬಣ್ಣದ ಕಾಜಿನ ಪರದೆ ಯಂತಿರುವುವು. ಇವುಗಳಲ್ಲಿ ಭೂಮಿಯಮೇಲಿನ ಅನೇಕ ಪದಾರ್ಥಗಳು ವಾಯುರೂಪವಾಗಿರುವವು. ಬೇರೆ ಬೇರೆ ಪದಾರ್ಥಗಳು ಕಾಯು ವಾಯುರೂಪವಾಗಿದ್ದಾಗ ಬೇರೆ ಬೇರೆ ಬಣ್ಣದ ಕಿರಣಗಳನ್ನು ಬಿಡುವವು. ಸೋಡಿಯಮ್ ಧಾತುವಿನ ವಾಯುವು ಎರಡು ತರಹದ ಹಳದಿಯ ಬಣ್ಣದ ಕಿರಣಗಳನ್ನು ಮಾತ್ರ ಬಿಡುವುದು. ನಾವು ದಿನಾಲು ಉಣ್ಣುವ ಉಪ್ಪಿನಲ್ಲಿ