ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಕಾಶರಾಜ ಅಥವಾ ಸೂರ್ಯ ಸೋಡಿಯಮ್ ದ್ರವ್ಯವಿರುವುದು. ಇಂಧದೊಂದು ಉಪ್ಪಿನ ಹಳಕನ್ನು ಉರಿಯುವ ದೀಪದ ಜ್ವಾಲೆಯಲ್ಲಿಟ್ಟರೆ ಆ ಜ್ವಾಲೆಯು ಕೂಡಲೆ ಹಳದಿಯ ಬಣ್ಣದ್ದಾಗುವುದು. ಏಕೆಂದರೆ ಅಲ್ಲಿ ಸೋಡಿಯಮ್ ದ್ರವ್ಯದ ವಾಯುವು ಕಾಯ್ದು ಹೊಳೆಯಹತ್ತುವುದು. ಅದೇ, ಬಿಳಿಯ ಪ್ರಕಾಶದ ಮುಂದೆ ಈ ಸೋಡಿಯಮ್ ದ್ರವ್ಯದ ವಾಯುವನ್ನು ಹಿಡಿದರೆ ಇನ್ನೊಂದು ಸೋಜಿಗವಾಗುವುದು. ಬಿಳಿಯ ಬಣ್ಣವೆಂದರೆ ಒಂದು ಬಣ್ಣವಲ್ಲ. ಕಾಮನ ಬಿಲ್ಲಿನಲ್ಲಿ ಕಾಣುವ ಎಲ್ಲ ಬಣ್ಣಗಳ ಸಮ್ಮಿಶ್ರಣವು. ಸೂರ್ಯನಿಂದ ಬರುವ ಬಿಳಿಯ ಕಿರಣಗಳು ನೀರಿನ ಹನಿಗಳಿಂದ ಒಡೆಯಲ್ಪಡುವುದರಿಂದಲೆ ಕಾಮನ ಬಿಲ್ಲು ಮೂಡುವುದು. ಸೂರ್ಯನಂತೆ ಬಹಳ ಕಾಯ್ದ ಪದಾರ್ಧದಿಂದ ಬರುವ ಬಿಳಿಯ ಬಣ್ಣದ ಕಿರಣಗಳು ಇ೦ಧ ವಾಯುವಿನ ಪರದೆಯೊಳಗಿಂದ ಹಾಯುವಾಗ ಅವುಗಳೊಳಗಿನ ಹಳದಿಯ ಕಿರಣಗಳು ಮಾತ್ರ ನುಂಗಲ್ಪಡು ವವು. ಎಂದರೆ ಸೋಡಿಯಮ್ ದ್ರವ್ಯದ ವಾಯುವಿನಲ್ಲಿ ಹಳದಿಯ ಕಿರಣ ಗಳನ್ನು ಬಿಡುವ ಗುಣವಿದ್ದಂತೆ ಅವುಗಳನ್ನು ನುಂಗುವ ಗುಣವೂ ಇರುವುದು. ಇದೇ ಆ ಸೋಜಿಗವು. ಸೂರ್ಯನ ಕಿರಣಗಳನ್ನು ವರ್ಣವಿಭಜನ ಯಂತ್ರ ದಿಂದ ಒಡೆದು ದೊಡ್ಡದೊಂದು ಕಾಮನಬಿಲ್ಲನ್ನು ಮಾಡಿದರೆ, ಅದರಲ್ಲಿ ನಾವು ಇಷ್ಟೆಲ್ಲ ಕಪ್ಪು ಗೆರೆಗಳನ್ನು ಕಾಣುವೆವು. ಸೋಡಿಯಮ್ ದ್ರವ್ಯದ ಹಳದಿಯ ಕಿರಣಗಳು ಇರಬೇಕಾದ ಸ್ಥಳದಲ್ಲಿ ಕಪ್ಪು ಗೆರೆಗಳು, ಕಬ್ಬಿಣದ ವಾಯುವು ಎರಡುಸಾವಿರ ತರಹದ ಕಿರಣಗಳನ್ನು ಹೊರಪಡಿಸಬಲ್ಲುದು; ನುಂಗಬಲ್ಲದು. ಈ ಎರಡುಸಾವಿರ ಕಿರಣಗಳಿರಬೇಕಾದ ಸ್ಥಳದಲ್ಲಿಯೂ ನಾವು ಮೇಲಿನ ಕಾಮನಬಿಲ್ಲಿನಲ್ಲಿ ಕಪ್ಪು ಗೆರೆಗಳನ್ನು ಕಾಣುವೆವು. ಆದುದರಿಂದ ಸೋಡಿಯಮ್ ದ್ರವ್ಯವೂ ಕಬ್ಬಿಣವೂ ಇನ್ನೂ ಅನೇಕ ದ್ರವ್ಯ ಗಳೂ ಸೂರ್ಯನ ಜ್ವಾಲೆಗಳಲ್ಲಿಯೂ ಮುಖ್ಯ ಗೋಲದಲ್ಲಿಯೂ ವಾಯು ರೂಪವಾಗಿರಬೇಕೆಂದು ಹೇಳಬಲ್ಲೆವು. ಖಗ್ರಾಸ ಗ್ರಹಣದ ವೇಳೆಯಲ್ಲಿ ಸೂರ್ಯನ ಪ್ರಕಾಶವು ಇಲ್ಲದಾಗುವುದರಿಂದ ಈ ಕಾಮನಬಿಲ್ಲು ಅದೃಶ್ಯ ವಾಗುವುದು. ಆಗ ಜ್ವಾಲೆಗಳಲ್ಲಿಯ ವಾಯುಗಳಿಗೆ ನುಂಗಲಿಕ್ಕೆ ಯಾವ ಕಿರಣಗಳೂ ಸಿಕ್ಕುವುದಿಲ್ಲ. ಆದರೆ ಅವು ಕಾಯ್ದಿರುವುದರಿಂದ ತಮ್ಮ ಕಿರಣಗಳನ್ನೆ ಬಿಡಹತ್ತುವವು. ಕಾಮನಬಿಲ್ಲ ಹೋಗುವುದು, ಅದರಲ್ಲಿಯ