________________
ಚಂದ್ರ ೪೭ ಈ ಬಿಂಬದಮೇಲೆ ಅನೇಕ ಜ್ವಾಲಾಮುಖಿ ಪರ್ವತಗಳೂ ಗುಡ್ಡ ಗಳೂ ಸಮುದ್ರಗಳಂಥ ದೊಡ್ಡ ದೊಡ್ಡ ತಗ್ಗಿನ ಪ್ರದೇಶಗಳೂ ಇರುವವು. ಚಂದ್ರನ ವಿಷಯವಾಗಿ ನಾವು ತಿಳಿದುಕೊಳ್ಳಬೇಕಾಗಿರುವ ವಿಷಯ ಗಳಾವುವೆಂದರೆ:-(೧) ಆತನ ಕಲೆಗಳು, (೨) ಆತನಿಂದುಂಟಾಗುವ ಸಮು ದ್ರದ ಏರಿಳಿತಗಳು, (೩) ಗ್ರಹಣಗಳು. ಚಂದ್ರನು ಪರಪ್ರಕಾಶನಾಗಿರು ವುದರಿಂದಲೆ ಅವನ ಕಲೆಗಳುಂಟಾಗುವುವು. ಎಂದರೆ ಅವನು ಕೆಲವು ದಿವಸ ವೃದ್ಧಿ ಹೊಂದುತ್ತ ಹೋಗುವನು; ಕೆಲವು ದಿವಸ ಕ್ಷಯಹೊಂದುತ್ತ ಹೋಗುವನು. ಅವನು ಪೃಥ್ವಿಯ ಸುತ್ತಲೂ ೨೭ ದಿವಸಗಳಲ್ಲಿ ಸಂಚರಿ ಸುವನು. ಹೀಗೆ ಚಲಿಸುವಾಗ ಒಮ್ಮೊಮ್ಮೆ ಆತನು ನಮಗೂ ಸೂರ್ಯ ನಿಗೂ ನಡುವೆ ಬರುವನು. ಆಗ ಸೂರ್ಯಪ್ರಕಾಶವು ಆತನಮೇಲೆ ಬಿದ್ದ ಭಾಗವು ನಮಗೆ ಮರೆಯಾಗಿ ಉಳಿದ ಭಾಗವಷ್ಟೆ ನಮ್ಮ ಕಡೆಗೆ ತಿರುಗಿರು ವದರಿಂದ ಚಂದ್ರನು ನಮಗೆ ಕಾಣದಂತಾಗುವನು. ಇದಕ್ಕೆ ಅವಾವಾಸ್ಯೆ ಯನ್ನು ವರು. ಮುಂದೆ ಸುಮಾರು ೧೫ ದಿವಸಗಳ ನಂತರ ಭೂಮಿಯು ಸೂರ್ಯ ಚಂದ್ರರ ನಡುವೆ ಬರುವುದು. ಆಗ ಸೂರ್ಯನ ಕಡೆಗೆ ತಿರುಗಿದ ಆತನ ಭಾಗವೇ ನಮ್ಮ ಕಡೆಗೆ ತಿರುಗಿರುವುದರಿಂದ ಚಂದ್ರನು ಪೂರ್ಣಬಿಂಬ ನಾಗಿ ಕಾಣುವನು. ಇದಕ್ಕೆ ನಾವು ಹುಣ್ಣಿಮೆಯೆಂದೆನ್ನು ನೆವ, ಅಮಾ ವಾಸ್ಯೆಯಿಂದ ಹುಣ್ಣಿಮೆಯವರೆಗೆ ಚಂದ್ರನು ವೃದ್ಧಿ ಹೊಂದುತ್ತ ಹೋಗಿ, ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ ಕ್ಷಯಹೊಂದುತ್ತ ಹೋಗುವನು. ಚಂದ್ರನು ಸುಮಾರು ೨೭ ದಿವಸಗಳಲ್ಲಿ ಭೂಮಿಯ ಸುತ್ತಲೂ ಚಲಿಸುವುದ ರಿಂದ ಆತನು ಈ ಅವಧಿಯಲ್ಲಿ ಕ್ರಾಂತಿವೃತ್ತದ ಎಲ್ಲ ನಕ್ಷತ್ರಗಳೊಳಗಿಂದ ಹಾಯುವನು. ಇದೇ ಮಾರ್ಗವನ್ನು ಗಮಿಸುವುದಕ್ಕೆ ಸೂರ್ಯನಿಗೆ ಒಂದು ವರ್ಷವು ಬೇಕಾಗುವುದರಿಂದ ಅಮಾವಾಸ್ಯೆಯ ದಿವಸ ಆಕಾಶದ ಒಂದೇ ಭಾಗದಲ್ಲಿ ಕಾಣಿಸುವ ಸೂರ್ಯ ಚಂದ್ರರಲ್ಲಿ, ಚಂದ್ರನು ಮರು ದಿವಸ ೧೩ ಅಂಶ (ಎಂದರೆ ಇಡೀ ಆಕಾಶದ ಸುಮಾರು ೩ ಭಾಗ) ಮುಂದೆ ಹೋಗುವನು; ಎಂದರೆ ಪೂರ್ವಕ್ಕೆ ಹೋಗುವನು. ಆದುದರಿಂದ ಚಂದ್ರನು ದಿನಾಲು ಸುಮಾರು ೫೧ ಮಿನಿಟು ತಡವಾಗಿ ಉದಯಿಸುವನು. ಅಮಾ ವಾಸ್ಯೆಯ ದಿನ ಸೂರ್ಯನ ಸಂಗಡಲೆ ಉದಯಿಸುವನು. ಮುಂದೆ