ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮ ಜ್ಯೋತಿಶ್ಯಾಸ್ತ್ರ ಸೂರ್ಯೊದಯವಾದ ಬಳಿಕ ಉದಯಿಸಿ ಸೂರ್ಯಾಸ್ತವಾದ ಮೇಲೆ ಮುಳುಗುವನು. ಆಗ ಪೂರ್ವ ರಾತ್ರಿಯಲ್ಲಿ ಮಾತ್ರ ಕಾಣುವನು. ಇದಕ್ಕೆ ನಾವು ಶುಕ್ಲ ಪಕ್ಷವನ್ನು ವೆವು. ಹುಣ್ಣಿಮೆಯ ದಿವಸ ಸೂರ್ಯಾಸ್ತಕ್ಕೆ ಉದಯಿಸಿ ರಾತ್ರಿಯೆಲ್ಲ ಪೂರ್ಣಕಾಂತಿಯಿಂದ ತೊಳಗುವನು. ಮುಂದೆ ಕೃಷ್ಣ ಪಕ್ಷದಲ್ಲಿ ಸೂರ್ಯಾಸ್ತದ ನಂತರ ಉದಯಿಸುವುದರಿಂದ ಆಗ ಮುಂಗಾಳಿನ ರಾತ್ರಿಗಳಾಗುವುವ, ಬರಿಯ ಕಣ್ಣಿಗೆ ಸಹ ಚಂದ್ರಬಿಂಬದಮೇಲೆ ಕಪ್ಪು ಕಲೆಗಳು ಕಾಣು ಇವೆ. ವರ್ಷಾನುವರ್ಷ ಈ ಕಲೆಗಳ ರೂಪರೇಖೆಯು ಒಂದೆ ಸಮನೆ ಇರುವುದು. ಆದುದರಿಂದ ನಾವು ಯಾವಾಗಲೂ ಚಂದ್ರನ ಒಂದೇ ಅರ್ಧ ಭಾಗವನ್ನು ನೋಡುತ್ತಿರಬೇಕೆಂಬುದು ಸ್ಪಷ್ಟವಿದೆ. ಇದಕ್ಕೆ ಕಾರಣ ವೇನೆಂದರೆ ಚಂದ್ರನು ತನ್ನ ಸುತ್ತಲು ಪ್ರದಕ್ಷಿಣೆಹಾಕಿಕೊಳ್ಳುವ ಕಾಲವೂ ಆತನು ಸೃದ್ಧಿಯ ಸುತ್ತಲೂ ಒಂದು ಪ್ರದಕ್ಷಿಣೆಯನ್ನು ಹಾಕುವ ಕಾಲವೂ ಅಷ್ಟೆ ಎಂದರೆ ೨೭ ದಿವಸಗಳು ಇರುತ್ತವೆ. ದೇವರ ಕಡೆಗೆಯೆ ಮೊರೆ ಮಾಡಿ ಪ್ರದಕ್ಷಿಣೆ ಹಾಕುವ ಭಕ್ತನಂತೆ ಚಂದ್ರನ ಸ್ಥಿತಿಯು ಇರುತ್ತದೆ. ಆ ಭಕ್ತನು ಒಂದು ಸುತ್ತು ದೇವರ ಗುಡಿಯ ಸುತ್ತಲೂ ತಿರುಗುವುದರಲ್ಲಿಯೆ ತನ್ನ ಸುತ್ತಲೂ ಒಂದು ಪ್ರದಕ್ಷಿಣೆಯನ್ನು ಮುಗಿಸುವನು. ಚಂದ್ರನಿಂದ ಭೂಮಿಯಮೇಲೆ ಉಂಟಾಗುವ ದೊಡ್ಡ ಪರಿಣಾಮ ವೆಂದರೆ ಸಮುದ್ರದ ಏರಿಳಿತಗಳು, ಸಮುದ್ರವು ಭೂಮಿಯನ್ನು ಸುತ್ತು ಹಾಕಿರುವುದಷ್ಟೆ, ಇದರ ಆಳವು ೫ ಮೈಲುಗಳವರೆಗೆ ಇರುವುದರಿಂದ ನೀರಿನ ಮೇಲ್ಬಾಗವು ಉಳಿದ ಭಾಗಕ್ಕಿಂತ ಚಂದ್ರನಿಗೆ ಸಮೀಪವಿರುವು ದೆಂಬುದು ಸ್ಪಷ್ಟವಿದೆ. ಇಂತಹ ಜಲಸಮೂಹದಮೇಲೆ ಚಂದ್ರನ ಆಕರ್ಷ ಣವು ಹೆಚ್ಚು ಆಗುವುದರಿಂದ ಅದು ಉಬ್ಬಿ ಮೇಲಕ್ಕೇರುವುದು. ಆಗ ಸಮುದ್ರವು ಉಕ್ಕೇರಿದಂತೆ ಕಾಣುವುದು. ಹೀಗೆ ಉಕ್ಕೇರಿದ ಸ್ಥಳದಲ್ಲಿ ಆಗ ಚಂದ್ರನು ತಲೆಯಮೇಲಿರುವುದರಿಂದ ಸಮುದ್ರವು ತನ್ನ ಮಗನಾದ ಚಂದ್ರನನ್ನು ನೋಡಿ, ಹರುಷದಿಂದ ಉಕ್ಕೇರುವನೆಂದು ಕವಿಗಳು ಬಣ್ಣಿಸಿ ದುದು ಸಹಜವಿದೆ. ಹೀಗೆ ಭರತಿಯಾಗುವ ಪ್ರದೇಶದಿಂದ ನೆಟ್ಟಗೆ ವಿರುದ್ದ ದಿಕ್ಕಿನಲ್ಲಿರುವ ಭೂಭಾಗದಲ್ಲಿಯೂ ನೀರು ಉಕ್ಕೇರುವುದನ್ನು ನಾವು ಆದರೆ ಸಮುದ್ರದ ಇದರ ಅಕ್ಕಿಂತ