ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮ನೆಯ ಪ್ರಕರಣ ನಮ್ಮ ಮನೆ ವಿಶ್ವದಲ್ಲಿ ನಾವು ವಾಸಿಸುವ ಭೂಮಿಯ ಸ್ನಾನವಾವುದು ? ನಮಗೂ ಸೂರ್ಯ ಚಂದ್ರ ನಕ್ಷತ್ರಾದಿಗಳಿಗೂ ಯಾವ ಸಂಬಂಧವಿದೆ? ಇವೆ ಮುಂತಾದ ವಿಷಯಗಳನ್ನು ಕುರಿತು, ಪ್ರತಿಯೊಬ್ಬನಿಗೂ ಜ್ಞಾನವಿರ ಬೇಕಾದುದು ಅವಶ್ಯವಿದೆ. ಸಕೃದ್ದರ್ಶನಕ್ಕೆ ಭೂಮಿಯು ಬಹಳ ದೊಡ್ಡ ದಾಗಿ ಕಾಣುತ್ತದೆ. ಇಡಿಯ ಭೂಮಿಯನ್ನೇ ಏಕೆ, ಭೂಮಿಯ ದೊಡ್ಡ ಭಾಗವನ್ನು ನೋಡಿದವರು ಎಷ್ಟು ಜನರಿರುವರು ? ಭೂಮಿಯು ನಮ್ಮ ವಸತಿ ಸ್ಥಾನವಾಗಿರುವುದಲ್ಲದೆ, ಎಲ್ಲರ ವಿತ್ತವಾಗಿರುವುದರಿಂದಲಂತೂ ಅದಕ್ಕೆ ಹೆಚ್ಚು ಮಹತ್ವ ಬಂದಿದೆ. ಭೂಮಿಯ ಮೊಳ ಉದ್ದ ತುಂಡಿ ಗಾಗಿ ಹಲವರ ತಲೆಗಳು ಉರುಳುವವು. ಯಾವಾಗಲೂ ಬರ್ಫಾಚ್ಛಾದಿತ ವಾಗಿರುವ ನಿರುಪಯುಕ್ತ ಪ್ರದೇಶಗಳಿಗಾಗಿ ಕೂಡ ರಾಷ್ಟ್ರಗಳು ಬಡೆ ದಾಡುವವು. ಆದರೆ ವಿಶ್ವದ ರಚನೆಯಲ್ಲಿ ಭೂಮಿಯ ಮಹತ್ವವು ತೀರ ಕಡಿಮೆಯಾಗಿದೆ. ಸೂರ್ಯವೆಂಬುದೊಂದು ಮಧ್ಯವರ್ಗದ ನಕ್ಷತ್ರ, ಅದರೆ ಸುತ್ತಲೂ ೭-೮ ಗ್ರಹಗಳು ತಿರುಗುತ್ತವೆ. ಅವುಗಳಲ್ಲಿ ಸೃದ್ಧಿಯೆಂಬು ದೊಂದು ಸಣ್ಣ ಗ್ರಹವು. ಊರಿಗೆ ಅರಸನಾದರೂ ತಂದೆಗೆ ಮಗನೆಂಬಂತ ಭೂಮಿಯ ಸ್ಥಿತಿಯಾಗಿದೆ. ಮನುಷ್ಯನ ಉದ್ದಳತೆಯ ಮಾನದಿಂದ ಭೂಮಿಯು ನಿಜವಾಗಿಯೆ ದೊಡ್ಡದಾಗಿದೆ. ಇದೊಂದು ಗೋಲವಿದ್ದು ಇದರ ವ್ಯಾಸವು ಸುಮಾರು ೮,೦೦೦ ಮೈಲುಗಳು. ಎಂದರೆ ಇದರ ಸುತ್ತಲೂ ತಿರುಗಲಿಕ್ಕೆ ಸುಮಾರು ೨೫,೦೦೦ ಮೈಲುಗಳ ಪ್ರವಾಸಮಾಡಬೇಕಾಗುವುದು. ಇಂತಹ ದೊಡ್ಡ ಗೋಲದ ಬಹು ಸಣ್ಣ ಭಾಗವನ್ನು ಮಾತ್ರ ನಾವು ಏಕಕಾಲಕ್ಕೆ ನೋಡ ಬಲ್ಲೆವು. ಆದುದರಿಂದ ಭೂಮಿಯ ವಕ್ರತೆಯು ನಮಗೆ ಕಂಡುಬರುವು ದಿಲ್ಲ, ಸಪಾಟಾಗಿಯೇ ಕಾಣುತ್ತದೆ. ಎಂಟು ಮೈಲುಗಳದೊಂದು ಪಟ್ಟಿಯಲ್ಲಿ ನಡುವಿನ ಭಾಗವು ಎರಡೂ ತುದಿಗಳ ಭಾಗಕ್ಕಿಂತ ೧೦ ಇಂಚು ಮಾತ್ರ ಎತ್ತರವಿರುತ್ತದೆ. ನಮ್ಮ ಸುತ್ತಲೂ ಸಾಧಾರಣವಾಗಿ ೫ ಮೈಲುಗಳ