ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚಂದ್ರ ನೋಡಬಹುದು. ಇದರ ಕಾರಣವು ತುಸು ಭಿನ್ನವಿರುತ್ತದೆ. ಅಲ್ಲಿ ನೀರಿ ಗಿಂತ ನೆಲವು ಚಂದ್ರನ ಹತ್ತಿರಕ್ಕಾಗುವುದರಿಂದ ನೆಲವು ಚಂದ್ರನಿಂದ ಆಕರ್ಷಿಸಲ್ಪಟ್ಟು ನೀರು ಇದ್ದಲ್ಲಿಯೇ ಉಳಿಯುತ್ತದೆ. ಅದರಿಂದ ಅಲ್ಲಿಯ ನೀರು ಉಕ್ಕೇರಿದಂತೆ ಕಾಣುತ್ತದೆ. ಸೂರ್ಯನಿಂದಲೂ ಏರಿಳಿತಗಳಾಗು ವವು. ಆದರೆ ಸೂರ್ಯನು ದೊಡ್ಡವನಿದ್ದರೂ ಬಹಳೆ ದೂರದಲ್ಲಿರುವುದರಿಂದ, ಆತನ ಆಕರ್ಷಣವು ಬಹಳ ಕಡಿಮೆಯಿದ್ದು ಈ ಏರಿಳಿತಗಳು ಅಷ್ಟು ಒಡೆದು ಕಾಣುವುದಿಲ್ಲ. ಗ್ರಹಣಗಳ ವಿಷಯವಾಗಿ ೧೦ನೆಯ ಪ್ರಕರಣದಲ್ಲಿ ವಿವರಿಸುವೆವು.