ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦ನೆಯ ಪ್ರಕರಣ ಗ್ರಹಣಗಳು ದಿನಾಲು ಸಂಭವಿಸುವ ಸಂಗತಿಗಳಿಗಿಂತ ಯಾವಾಗಲೊಮ್ಮೆ ಆಗುವ ಸಂಗತಿಗಳಿಗೆ ಹೆಚ್ಚು ಮಹತ್ವವಿರುತ್ತದೆ. ಸೂರ್ಯ ಚಂದ್ರರ ಮಡುಮುಣುಗುಗಳು, ಚಂದ್ರನ ವೃದ್ಧಿ ಕ್ಷಯಗಳು ಇವೇ ಮುಂತಾದವು ಗಳನ್ನು ನಾವು ನಿತ್ಯ ನೋಡುವುದರಿಂದ ಅವುಗಳ ಕಡೆಗೆ ನಮ್ಮ ಲಕ್ಷ ಹೋಗುವುದಿಲ್ಲ. ಆದರೆ ಯಾವಾಗಲೊಮ್ಮೆ ಕಾಣುವ ಗ್ರಹಣಗಳು, ಧೂಮಕೇತುಗಳು, ಬೀಳುವ ತಾರೆಗಳು-ಇವುಗಳ ಕಡೆಗೆ ಸಣ್ಣವರು ದೊಡ್ಡವರು, ಕಲಿತವರು ಕಲಿಯದವರು ಎಲ್ಲರೂ ಆಶ್ಚರ್ಯಪೂರ್ವಕ ವಾಗಿ ನೋಡುತ್ತಾರೆ. ಹುಣ್ಣಿಮೆಯ ರಾತ್ರಿಯಲ್ಲಿ ಹರಿವಾಣದಂತೆ ಶೋಭಿಸುವ ಚಂದ್ರಬಿಂಬವು ಒಮ್ಮೆಲೆ ಮುಕ್ಕಾಗುತ್ತದೆ. ಒಮ್ಮೊಮ್ಮೆ ಅಮಾವಾಸ್ಯೆಯು ಬಂದಂತೆ ಚಂದ್ರಬಿಂಬವೆಲ್ಲ ಮರೆಯಾಗುತ್ತದೆ. ಈ ಸ್ಥಿತಿಯು ಕೆಲವೇಳೆ ಮಾತ್ರವಿದ್ದು ಚಂದ್ರನು ಮತ್ತೆ ತನ್ನ ಮೊದಲಿನ ಕಾಂತಿಯನ್ನು ಹೊಂದುತ್ತಾನೆ. ಖಗ್ರಾಸ ಸೂರ್ಯಗ್ರಹಣದ ಪರಿಣಾಮ ನನ್ನಂತೂ ಬಣ್ಣಿಸಲಳವಲ್ಲ. ಮಧ್ಯಾಹ್ನ ಸಮಯದಲ್ಲಿ ಸೂರ್ಯಬಿಂಬವು ಕಾಣದಂತಾಗಲು ದನಕರುಗಳೆಲ್ಲವೂ ಹೌಹಾರಿಹೋಗುತ್ತವೆ. ಪಕ್ಷಿಗಳು ಚೀರುತ್ತ ತಮ್ಮ ಗೂಡುಗಳನ್ನು ಸೇರುತ್ತವೆ. ಭೂಮಿಯಮೇಲೆಲ್ಲ ಒಂದು ತರಹದ ಮೃತಕಳೆಯು ಪಸರಿಸುತ್ತದೆ. ಈ ಸ್ಪಿತಿಯು ಒಂದೆರಡು ನಿಮಿಷ ಮಾತ್ರವಿರುವುದು. ಆಮೇಲೆ ಬರುಬರುತ್ತ ಸೂರ್ಯಬಿಂಬವು ಮೊದಲಿನಂತೆ ಹೊಳೆಯಹತ್ತುವುದು. ಸೂರ್ಯಗ್ರಹಣಗಳು ಅಮಾವಾಸ್ಯೆಯಲ್ಲಿ ಮಾತ್ರವೂ, ಚಂದ್ರ ಗ್ರಹಣಗಳು ಪೌರ್ಣಿಮಯ ದಿನ ಮಾತ್ರವೂ ಆಗುವವು. ಅಮಾವಾಸ್ಯೆಯ ದಿನ ಚಂದ್ರನು ಸೂರ್ಯನಿಗೂ ಭೂಮಿಗೂ ನಡುವೆ ಇರುವನು. ಆದುದ ರಿಂದ ಸೂರ್ಯನ ಕಿರಣಗಳಿಗೆ ಆತನು ಗೋಡೆಯಂತೆ ಮರೆಯಾಗುವನು. ಸೂರ್ಯನಿಗಿಂತ ಚಂದ್ರನು ತೀವ್ರವಾಗಿ ಚಲಿಸುವುದರಿಂದ ಆತನು ಸೂರ್ಯನ ಮುಂದೆ ಹೋಗಲು ಗ್ರಹಣವು ತೀರುವುದು. ಸೂರ್ಯ