ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭o ಜ್ಯೋತಿಶ್ಯಾಸ್ತ್ರ ಗ್ರಹಣವು ಭೂಮಿಯ ಕೆಲವೊಂದು ಭಾಗದಲ್ಲಿ ಮಾತ್ರ ಕಾಣುವುದು. ಚಂದ್ರನು ಸೂರ್ಯನಿಗಿಂತ ಬಹಳೆ ಸಣ್ಣವನು. ಆತನು ಭೂಮಿಗೆ ಹೆಚ್ಚು ಸಮೀಪದಲ್ಲಿರುವುದರಿಂದಲೆ ಸೂರ್ಯನಷ್ಟು ದೊಡ್ಡವನಾಗಿ ಕಾಣುತ್ತಾನೆ. ನಾವು ಒಂದು ದುಡ್ಡನ್ನು ನಮ್ಮಿಂದ ಒಂದು ಮೊಳದಮೇಲೆ ಹಿಡಿದರೂ ಸೂರ್ಯನು ಮರೆಯಾಗುವನು. ಆದರೆ ಬಲಗಣ್ಣಿಗೆ ಮರೆಯಾದರೆ ಎಡ ಗಣ್ಣಿಗೆ ಕಾಣುವನು ; ಎಡಗಣ್ಣಿಗೆ ಮರೆಯಾದರೆ ಬಲಗಣ್ಣಿಗೆ ಕಾಣುವನು. ಚಂದ್ರನು ಹೀಗೆ ೨,೪೦,೦೦೦ ಮೈಲುಗಳಮೇಲೆ ಹರಡಿದ್ದೊಂದು ಮರೆ ಯಂತಿರುವನು. ಇಷ್ಟು ದೂರ ಇರುವುದರಿಂದ ಒಂದು ಕಡೆಗೆ ಸೂರ್ಯನು ಮರೆಯಾಗಿದ್ದರೆ, ಅದರ ಸುತ್ತಲು ಸುಮಾರು ೩೦ ಮೈಲುಗಳವರೆಗಿನ ಎಲ್ಲ ಕಡೆಯಲ್ಲಿಯೂ ಮರೆಯಾಗಿರುವನು. ಈ ಕ್ಷೇತ್ರದ ಮಟ್ಟಿಗೆ ಮಾತ್ರ ಸೂರ್ಯಗ್ರಹಣವಿರುವುದು. ಅದರ ಹೊರಗೆಲ್ಲ ಸೂರ್ಯನು ಕಾಣುತ್ತಿರು ವನು. ಎಂದರೆ ಈ ಅರವತ್ತು ಮೃಲು ವ್ಯಾಸವುಳ್ಳ ಕ್ಷೇತ್ರದಲ್ಲಿ ಮಾತ್ರ ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಿರುವುದೆಂದ ಹೇಳಬಹುದು. ಚಂದ್ರನು ಚಲಿಸಹತ್ತಿದಂತೆ ಈ ನೆರಳೂ ಚಲಿಸುವುದು. ಹೀಗೆ ೬೦ ಮೈಲು ವ್ಯಾಸವುಳ್ಳ ಈ ನೆರಳು ಭೂಮಿಯ ಮೇಲೆ ೫೦೦ ಮೈಲುಗಳವರೆಗೆ ಸಾಗುವುದು. ಈ ಪ್ರದೇಶದ ಎಲ್ಲ ಜನರಿಗೆ ಖಗ್ರಾಸ ಗ್ರಹಣವು ಕಾಣುವುದು. ಇದರ ಹೊರಗೆ ಕೆಲವು ಅಂತರದವರೆಗೆ ಅಂಶ ಗ್ರಹಣವು ಕಾಣುವುದು. ಮುಂದೆ ಏನೂ ಕಾಣುವುದಿಲ್ಲ. ಆದರೆ ಚಂದ್ರಗ್ರಹಣದ ಮಾತು ಹೀಗಲ್ಲ. ಚಂದ್ರನೆ ನಮಗೆ ಎಲ್ಲಕ್ಕೂ ಸಮೀಪದವನಾಗಿರುವುದರಿಂದ ಅವನಿಗೂ ನಮಗೂ ನಡುವೆ ಯಾವ ಪ್ರಕಾರದ ಮರೆಯೂ ಬರಲಾರದು. ಎಂದಮೇಲೆ, ಚಂದ್ರಗ್ರಹಣವು ಹೇಗಾಗುವುದು ? ಪೌರ್ಣಿಮೆಯ ದಿನ ಭೂಮಿಯು ಸೂರ್ಯ ಚಂದ್ರರ ನಡುವೆ ಇರುವುದು. ಆಗ ಈ ಭೂಮಿಯ ನೆರಳು ಚಂದ್ರನಿಗಿಂತ ದೂರದ ವರೆಗೆ ಹಬ್ಬಿರುವುದು. ಈ ನೆರಳಿನಲ್ಲಿ ಚಂದ್ರನು ಬಂದ ಕೂಡಲೆ ಅವನು ಸೂರ್ಯಕಿರಣಗಳಿಗೆ ಎರವಾಗುವನು. ಕಾಂತಿಹೀನನಾಗುವನು. ನಿಜ ವಾಗಿಯೆ ಕಾಂತಿ ಹೀನನಾಗುವುದರಿಂದ ಚಂದ್ರನು ಕಾಣುವೆಡೆಯಲ್ಲೆಲ್ಲ ಚಂದ್ರಗ್ರಹಣವು ಕಾಣಿಸುವುದು. ಆ ಸಮಯದಲ್ಲಿ ಚಂದ್ರನಮೇಲೆ