ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗ್ರಹಣಗಳು ೭೧ ಯಾರಾದರೂ ಇದ್ದರೆ ಅವರಿಗೆ ಸೂರ್ಯನು ಭೂಮಿಯಿಂದ ಮುಚ್ಚಲ್ಪಡು ವನು. ಎಂದರೆ ನಮಗೆ ಚಂದ್ರಗ್ರಹಣವಿದ್ದಾಗ ಚಂದ್ರಲೋಕದವರಿಗೆ ಸೂರ್ಯಗ್ರಹಣ. ಹಾಗಾದರೆ ಪ್ರತಿ ಅಮಾವಾಸ್ಯೆಯ ದಿನ ಸೂರ್ಯಗ್ರಹಣವೂ ಪ್ರತಿ ಪೌರ್ಣಿಮೆಯ ದಿನ ಚಂದ್ರಗ್ರಹಣವೂ ಆಗಬೇಕಾಯಿತಲ್ಲವೆ? ಹಾಗೆ ಏಕೆ ಆಗುವುದಿಲ್ಲ? ಚಂದ್ರನೂ ಸೂರ್ಯನಂತೆ ಕ್ರಾಂತಿವೃತ್ತದಲ್ಲಿಯೆ ಚಲಿಸು ತಿದ್ದರೆ ಹೀಗೆ ಆಗದೆ ಗತ್ಯಂತರವಿರುತ್ತಿರಲಿಲ್ಲ. ಆದರೆ ಚಂದ್ರನ ಮಾರ್ಗಕ್ಕೂ ಕ್ರಾಂತಿವೃತ್ತಕ್ಕೂ ಐದು ಅಂಶಗಳದೊಂದು ಕೋನವಿರುವುದು. ಆದುದ ರಿಂದ ಚಂದ್ರನು ಒಮ್ಮೊಮ್ಮೆ ಕ್ರಾಂತಿವೃತ್ತದ ಮೇಲಿರುವನು. ಒಮ್ಮೆ ಕ್ರಾಂತಿವೃತ್ತದಿಂದ ಐದು ಅಂಶಗಳವರೆಗೆ ಕೆಳಗಿರುವನು. ಚಂದ್ರನು ಕ್ರಾಂತಿವೃತ್ತದ ಮೇಲಿರುವಾಗ ಪೌರ್ಣಿಮಾ ಅಮಾವಾಸ್ಯೆಗಳ ಬಂದರೆ ನಿಶ್ಚಯವಾಗಿ ಗ್ರಹಣಗಳಾಗುವವು. ಆದರೆ ಅಮಾವಾಸ್ಯೆಯ ದಿನ ಚಂದ್ರನು ಕ್ರಾಂತಿವೃತ್ತದಿಂದ ೧1 ಅಂಶಗಳಿಗಿಂತ ದೂರದಲ್ಲಿದ್ದರೆ ಯಾವ ಸೂರ್ಯ ಗ್ರಹಣಗಳೂ ಆಗವ್ರ, ಪೌರ್ಣಿಮೆಯ ದಿನ ೧ ಅಂಶಗಿಂತ ಹೆಚ್ಚಿದ್ದರೆ ಚಂದ್ರಗ್ರಹಣವೂ ಆಗುವುದಿಲ್ಲ. ಚಂದ್ರನ ಮಾರ್ಗವೂ ಕ್ರಾಂತಿವೃತ್ಯವೂ ರಾಹು ಕೇತುಗಳೆಂಬ ಎರಡು ಬಿಂದುಗಳಲ್ಲಿ ಒಂದನ್ನೊಂದು ಛೇದಿಸುವವು. ಪೌರ್ಣಿಮೆ ಅಮಾವಾಸ್ಯೆಗಳ ದಿನ, ಚಂದ್ರನು ರಾಹುವಿನ ಹತ್ತಿರವಾಗಲಿ ಕೇತುವಿನ ಹತ್ತಿರವಾಗಲಿ ಇದ್ದರೆ ಗ್ರಹಣಗಳಾಗುವವ, ಹೀಗೆ ಒಂದು ವರ್ಷದಲ್ಲಿ ೭ಕ್ಕಿಂತ ಹೆಚ್ಚು ಗ್ರಹಣಗಳು ಆಗಲಾರವು. ಅವುಗಳಲ್ಲಿ ೫ ಸೂರ್ಯನವು, ೨ ಚಂದ್ರನವು ; ಇಲ್ಲವೆ ನಾಲ್ಕು ಸೂರ್ಯನವಿದ್ದು, ೩ ಚಂದ್ರನವಿರುವವು. ಎಲ್ಲಕ್ಕೂ ಕಡಿಮೆಯೆಂದರೆ ಎರಡು ಗ್ರಹಣಗಳಿದ್ದು ಎರಡೂ ಸೂರ್ಯನವಿರುವವು. ಚಂದ್ರಗ್ರಹಣಗಳಿಗಿಂತ ಒಟ್ಟಿನಮೇಲೆ ಸೂರ್ಯಗ್ರಹಣಗಳು ಬಹಳ. ಆದರೆ ಸೂರ್ಯಗ್ರಹಣಗಳು ಎಲ್ಲ ಕಡೆ ಯಲ್ಲಿಯೂ ಕಾಣದಿರುವುದರಿಂದ ಯಾವುದೊಂದು ಊರಿನಲ್ಲಿ ಕಾಣುವ ಗ್ರಹಣಗಳಲ್ಲಿ, ಸೂರ್ಯಗ್ರಹಣಗಳಿಗಿಂತ ಚಂದ್ರಗ್ರಹಣಗಳು ಹೆಚ್ಚು. ಈ ಗ್ರಹಣಗಳ ವೇಳೆಯನ್ನು ಗೊತ್ತುಪಡಿಸುವುದೂ ಅವುಗಳಲ್ಲಿ ಚಂದ್ರ ಸೂರ್ಯರ ಬಿಂಬಗಳ ಎಷ್ಟು ಭಾಗವು ಗ್ರಸ್ತವಾಗಿರುವುದೆಂಬುದನ್ನು