ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗ್ರಹಣಗಳು ಖಗ್ರಾಸ ಗ್ರಹಣಗಳಿಗೆ ಜ್ಯೋತಿಶ್ಯಾಸ್ತ್ರದ ದೃಷ್ಟಿಯಿಂದ ಇಷ್ಟು ಮಹತ್ವವಿರುವುದರಿಂದ ಎಲ್ಲ ರಾಷ್ಟ್ರಗಳಲ್ಲಿ ಶಾಸ್ತ್ರಜ್ಞರು ಇಂಧವುಗಳ ವೇಧಗಳನ್ನು ತೆಗೆದುಕೊಳ್ಳುವುದಕ್ಕಾಗಿ ಸಾವಿರಾರು ಮೈಲುಗಳ ಪ್ರವಾಸ ಮಾಡಿ ತಿಂಗಳುಗಟ್ಟಲೆ ವೇಳೆಯನ್ನೂ ಲಕ್ಷಗಟ್ಟಲೆ ರೂಪಾಯಿಗಳನ್ನೂ ವೆಚ್ಚ ಮಾಡುತ್ತಾರೆ. ಖಗ್ರಾಸ ಗ್ರಹಣವು ಕಾಣುವೆಡೆಯಲ್ಲಿ ತಾತ್ತೂರ್ತಿಕ ವೇಧಶಾಲೆಗಳನ್ನೆ ಕಟ್ಟುವರು. ಈ ಖಗ್ರಾಸ ಗ್ರಹಣವು ಬಹಳವಾದರೆ ಎಂಟು ಮಿನಿಟು ಮಾತ್ರ ಇರುವುದು. ಒಂದೆರಡು ಮಿನಿಟುಗಳವರೆಗೆ ಇರುವವೇ ಬಹಳ. ಆದುದರಿಂದ ಇಷ್ಟು ಸ್ವಲ್ಪ ಕಾಲದಲ್ಲಿಯೆ ಅನೇಕ ವೇಧಗಳನ್ನೂ ಛಾಯಾಚಿತ್ರಗಳನ್ನೂ ತೆಗೆದುಕೊಳ್ಳಬೇಕಾಗುವುದು. ಇದಕ್ಕೆ ಬೇಕಾಗುವ ವೆಚ್ಚವನ್ನು ಆಯಾ ರಾಷ್ಟ್ರದ ಸರಕಾರಗಳು ಪೂರೈಸುವವು. ಇಲ್ಲವೆ ಧನಿಕರು ಕೊಡುವರು. ೧೮೯೯ನೆಯ ಇಸವಿಯಲ್ಲಿ ಪುಣೆಯ ಹತ್ತರ ಜೇವೂರು ಎಂಬಲ್ಲಿ ಖಗ್ರಾಸವು ಕಾಣಿಸಿದಾಗ ಮುಂಬೈ ಸರಕಾರದವರು ಡಾ|| ನೈಗಮ್‌ವಾಲಾ ಎಂಬವರ ನೇತೃತ್ವದಲ್ಲಿ ಇಂತಹ ದೊಂದು ಪಧಕವನ್ನು ಕಳುಹಿದ್ದರು. ಅದೇ ಕಾಲಕ್ಕೆ ಅಮೆರಿಕೆಯಿಂದಲೂ ಒಂದು ಪಧಕವು ಬಂದಿತ್ತು. ಒಮ್ಮೊಮ್ಮೆ ಆ ಹೊತ್ತಿಗೆ ಮೋಡಗಳು ಕವಿದಿದ್ದರೆ ಶ್ರಮವೆಲ್ಲವೂ ನಿಷ್ಪಲವಾಗುತ್ತದೆ. ಸೂರ್ಯಗ್ರಹಣಗಳಂತಹ ಇನ್ನೂ ಕೆಲವು ಪ್ರಸಂಗಗಳು ಇರುತ್ತವೆ. ಚಂದ್ರನು ಸೂರ್ಯನ ಮುಂದೆ ಬರುವಂತೆ, ಒಮ್ಮೊಮ್ಮೆ ಬುಧ ಶುಕ್ರರೂ ಬರುವರು. ಆಗ ಕೂಡ ಗ್ರಹಣಗಳಾಗುವವು. ಆದರೆ ಅವರು ಬಿಂದು ಪ್ರಾಯರಾಗಿರುವುದರಿಂದ ಬರಿಯ ಕಣ್ಣಿಗೆ ಆ ಗ್ರಹಣಗಳು ಕಾಣಿಸು ವುದಿಲ್ಲ. ದೂರದರ್ಶಕ ಯಂತ್ರಗಳಲ್ಲಿ ಸೂರ್ಯಬಿಂಬದ ಮೇಲೆ ಕಪ್ಪು ಚುಕ್ಕೆಗಳಂತೆ ಕಾಣುವರು. ಬುಧನು ಹೀಗೆ ಮೇಲಿಂದಮೇಲೆ ಸೂರ್ಯ ನಿಗೂ ನಮಗೂ ನಡುವೆ ಹಾಯುವನು. ಆದರೆ ಶುಕ್ರನು ನೂರು ವರ್ಷ ಗಳಿಗೊಮ್ಮೆ, ಎರಡುಸಾರೆ ಮಾತ್ರ ಹೀಗೆ ಹೋಗುವನು. ೧೮೮೨ನೆಯ ಇಸವಿಯಲ್ಲಿ ಇಂತಹ ದೃಶ್ಯವು ಕಂಡಿತ್ತು. ೨೦೦೪ನೆಯ ಇಸ್ವಿಯವರೆಗೆ ಕಾಣುವುದಿಲ್ಲ. ಇಂತಹ ಪ್ರಸಂಗಗಳು ಭೂಮಿಯಿಂದ ಸೂರ್ಯನ ಅಂತರವನ್ನಳೆಯುವುದಕ್ಕೆ ಅನುಕೂಲವಾಗಿರುವವು.