ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
೭೪ ಜ್ಯೋತಿಶ್ಯಾಸ್ತ್ರ ಚಂದ್ರನು ಸೂರ್ಯಬಿಂಬವನ್ನು ಮರೆಮಾಡುವಂತೆ ಅನೇಕ ನಕ್ಷತ್ರ ಗಳನ್ನೂ ಮರೆಮಾಡುವನು. ಯಾವಾಗಲೂ ಚಂದ್ರನ ಹಿಂದೆ ಎಷ್ಟೋ ಸಣ್ಣ ದೊಡ್ಡ ನಕ್ಷತ್ರಗಳು ಮರೆಯಾಗುತ್ತಲೆ ಇರುವವು. ಇವುಗಳಿಗೆ ನಕ್ಷತ್ರ ಗ್ರಹಣಗಳೆನ್ನಬಹುದು. ಇವುಗಳಿಗೆ ಜ್ಯೋತಿಶ್ಯಾಸ್ತ್ರದಲ್ಲಿ ಈಗ ಯಾವ ತರಹದ ಮಹತ್ವವೂ ಇರುವುದಿಲ್ಲ. ಉಚ್ಚತರಗತಿಯ ಗಡಿಯಾರಗಳು ತಯಾರಾಗುವ ಮುಂಚೆ ಇಂತಹ ಗ್ರಹಣಗಳ ಮೇಲಿಂದ ನಾವಿಕರು ಸಮುದ್ರದಲ್ಲಿ ತಾವಿರುವ ಸ್ನಾನವನ್ನು ನಿರ್ಣಯಿಸುತ್ತಿದ್ದರು.