ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಒಂದೇ ಸಾರೆ ಕೆಟ್ಟ ಗುಣ ಬರುತ್ತದೆ. ಈ ಜ್ವರಕ್ಕೆ ಇದು ಎಲ್ಲ ಹಗುರಾದ ಉಪಾಯವಾಗಿರುತ್ತದೆ. ೫ ಪಾರಿವಾಳದ ಮಲವನ್ನು ಒಂದು ವಾಸಿಯಷ್ಟು ವೀಳ್ಯದೆಲೆಯೊಡನೆ ಕೊಡಬೇಕು. ೬ ಬೇವಿನ ೨} ಎಲೆ ಹಾಗು ೬ ಮಾಸಿ ಬೆಲ್ಲ ಇವೆರಡೂ ಕುಟ್ಟಿ ಗುಳಿಗೆ ಮಾಡಿ ಕೆಡಬೇಕು. ಇಲ್ಲವೆ ಅಷ್ಟೇ ಎಲೆಗಳ ಅಷ್ಟ ಮಾಂಶ ಕವಾಯು ಮಾಡಿ ಅದರಲ್ಲಿ ಬೆಲ್ಲ ಹಾಕಿ ಕೊಟ್ಟರೆ ನರಕ ಚಳಿಜ್ವರ ಮತ್ತು ನಾರಹುಣ್ಣು ಇವುಗಳ ನಾಶವಾಗುತ್ತದೆ. ೭ ಕಟುಕರಣಿಯ ಚೂರ್ಣಕ್ಕೆ ಎಳ್ಳಿಹಾಲಿನ ಭಾವನೆ ಕಟ್ಟು ಅವರೇಕಾಳಪು ಗುಳಿಗೆ ಮಾಡಿ, ಜ್ವರ ಬರುವ ಮುಂಚೆ ೧ ತಾಸು ೧ ಗಳಿಗೆ ಯನ್ನು ವೀಳ್ಯದೆಲೆಯೊಡನೆ ಕೆಡಬೇಕು. (೭) ನಾಲ್ಕರ(ನಾಲ್ಕು ದಿನಕ್ಕೊಮ್ಮೆ ಬರುವ ಚಳಿಜ್ವರಗಳು. ಲಕ್ಷಣ:- ಕಫಜನ ಚಾತುರ್ಥಿಕ ಜ್ವರವಿದ್ದರೆ ಕಾಲೆಳಗಿನ ವಿನಗರ ಡದೊಳಗೆ ಹ.ಟಿ ಮೈತುಂಬ ವ್ಯಾಪಿಸುತ್ತವೆ. ವಾತಜನ್ಯವಾಗಿದ್ದರೆ ತಲೆಯಲ್ಲಿ ಹಟ್ಟಿ ಶರೀರವನ್ನು ವ್ಯಾಪಿಸುತ್ತವೆ. ಈ ಜ್ವರದ ಮಧ್ಯಾವಸ್ಥೆಯಲ್ಲಿ ದಾಹ ವುಂಟಾಗುತ್ತದೆ. ಜ್ವರ ಬರುವ ಮೊದಲು ಅಥವಾ ಜ್ವರ ನಿಲ್ಲುವ ಕಾಲಕ್ಕೆ ದಾಹವುಂಟಾಗುವದಿಲ್ಲ. ಮೂರರ ಹಾಗು ನಾಲ್ಕರ ಚಳಿಜ್ವರಗಳು ರೋಗಿಗಳ ಚಿಂತನ ಇಲ್ಲವೆ ಅಂಜಿಕೆಯಿಂದ ಬರುತ್ತವೆ ಆದುದರಿಂದ ಜ್ವರಬರುವ ಕಾಲಕ್ಕೆ ರೋಗಿಯ ಮನಸ್ಸಿಗೆ ಆನಂದ, ಭಯ ಇಲ್ಲವೆ ದುಃಖವುಂಟಾಗುವ ಯಾವು ದೊಂದು ಉಪಾಯ ಮಾಡಿ, ಜ್ವರದ ಅಂಜಿಕಯು ಆ ಕಾಲವನ್ನು ತಪ್ಪಿಸಬೇಕು. ಚಳಿಜ್ವರದ ಸಕತಿಯ ದಿವಸ ವಾಂತಿ ಮಾಡಿಸುವದು ವಿಹಿತವಾಗಿರುತ್ತದೆ ಉಪಾಯಗಳು.:೧ ಅಳಲೇಕಾಯಿ, ನೆಲಗುಳ್ಳ ಬೇರು, ಬಾಳದ ಬೇರು, ಗುಳ್ಳದಬೇಕು, ಹಿರೇಮದ್ದಿನ ಬೇಕು, ಇಪ್ಪಿ ಹೂವು, ಜೇಕಿನಗಡ್ಡೆ, ಶುಂಠಿ, ಅಡಸಾಲ, ಅಮೃತಬಳ್ಳಿ, ಕಲ್ಲುಸಸಿಗಿ ಇವಗಳ ಕಷಾಯವು ಆರಿದ ಬಳಿಕ ಅದರಲ್ಲಿ ಜೇನುತುಪ್ಪ ಮತ್ತು ಹಿಪ್ಪಲಿ ಚ೩ರ್ಣಗಳನ್ನು ಹಾಕಿ ಕೊಡಬೇಕು. ದಿವಸ ೭ ಇಲ್ಲವೆ ೧೪, ಇವುಗಳಿಂದ ದಾಹ, ಬೇವು, ನೀರಡಿಕ, ಜಂತು, ರಕ್ತಪಿ, ಶೀತ, ಶ್ವಾಸ, ಭyo8, ಶಲಿ, ಹಗಲು ಬರುವ ಜ್ವರ, ನಾಲ್ಕರ ಚಳಿಜ್ವರ, ಇವೆಲ್ಲ ಹಗುತ್ತವೆ.