________________
-{ ೪೯ ]4 ಪಿತ್ತವು ಹೆಚ್ಚಿದ್ದರೆ ೧೦ ದಿನಗಳಿಗೆ, ಕಫವು ಹೆಚ್ಚಾಗಿದ್ದರೆ ೧೨ ದಿನಗಳಿಗೆ, ವಾತವು ಅಧಿಕವಾಗಿದ್ದರೆ ೭ ದಿನಗಳಿಗೆ ಧಾಶುವಾಕವಾದರೆ ರೋಗಿಯನ್ನು ಕೊಲ್ಲುತ್ತದೆ: ಮಲಪಾತವಾದರೆ ಉಳಿಸುತ್ತದೆ. ೪ ೭-೧೦-೧೩ ದಿವಸಗಳಲ್ಲಿ ಸನ್ನಿಪಾತಜ್ವರವು ಹೆಚ್ಚಾಗಿ ಒಮ್ಮೊಮ್ಮೆ ಶಾಂತವಾಗುತ್ತದೆ; ಅಥವಾ ಕೊಲ್ಲುತ್ತದೆ. ೫ ದಾಹ, ಭ್ರಮ, ಬೆವರು, ನೀರಡಿಕೆ, ನಡುಗು, ಮಲ ವೀರಾಗೋಣ, ಸ್ಕೃತಿದತ್ತೋಣ, ನೆರಳುವದು, ಮೈ ಹೊಲಸು ನಾರುವದು ಈ ಲಕ್ಷಣಗಳು ಉಂಟಾದರೆ ಜ್ವರವು ಆಗುತ್ತದೆಂದು ತಿಳಿಯಬೇಕು. ೬ ಸನ್ನಿಪಾತಜ್ವರದಲ್ಲಿ ಮೊದಲಿಗೆ ಆಮು ಮತ್ತು ಕಫಗಳನ್ನು ಕಡಿಮೆ ಮಾಡುವ ಔಷಧಗಳನ್ನು ಕೊಡಬೇಕು, ಅವು ಕಡಿಮೆಯಾದ ಬಳಿಕ ಕಫ ವಾಶಗಳನ್ನು ಕಡಿಮೆ ಮಾಡುವ ಔಷಧ ಕಂಡಬೇಕು, ೭ ಮೊದಲು ಲಂಘನ, ಉಸುಗಿನ ಉಗೆ, ನಸ್ಯ, ವಾಂತಿಯಾಗುವ ಔಷಧ, ಅವಲೋಹ, ಅಂಜನ ಇತ್ಯಾದಿ ಉಪಾಯಗಳನ್ನು ಮಾಡಬೇಕು. ೮ ೩-೫-೧೦ ದಿನಗಳಿಗೆ ಆರೋಗ್ಯವುಂಟಾಗುವ ತನಕ ಲಂಘನ ಮಾರ ಬೇಕು. ಇದು ಸನ್ನಿಪಾತಜ್ವರಕ್ಕೆ ಹಿತಕರವಾಗುವದು, ೯ ಲಂಘನವೆಂದರೆ ಏನೂ ತಿನ್ನದಿರುವದೆಂದಿದ್ದರೂ ಅದು ಇಲ್ಲಿ ತಕ್ಕದ್ದಲ್ಲ. ಯಾಕಂದರೆ ಒಂದೇ ದಿನದ ಲಂಘನದಿಂದ ಪ್ರಾಣವು ವ್ಯಾಕುಲವಾಗುತ್ತಿರಲು, ೯ ದಿವಸಗಳ ಸತತವಾದ ಲಂಘನವು ಸಹನವಾಗುವ ಬಗೆ ಹೇಗೆ? ಆದುದರಿಂದ ಪ್ರಾರಂಭದಲ್ಲಿ ಒಂದು ದಿವಸವನ್ನು ಒರೇ ನೀರಿನ ಅಷ್ಟ ಮಾಂಶ ಕಷಾಯದಿಂದಲೇ ಕಳೆಯಬೇಕು, ಮರುದಿನದಿಂದ ಔಷಧೀಯ ಗಂಜಿ, ಕಾಟಿ, ಯವಾಗು ಮುಂತಾದವುಗಳಲ್ಲಿ ಅನುಕೂಲವಾದುದನ್ನು ಕೊಡತಕ್ಕದ್ದು; ಆದರೆ ಅನ್ನ ವನ್ನು ಸರ್ವಥಾ ಕೆಂಡಕೂಡದು; ಅಂದರೆ ಲಂಘನ ಮಾಡಿದಂತೆಯೇ ಆಗು ಪದು; ಮತ್ತು ಇದರಿಂದ ದೋಷಗಳೂ ಕಡಿಮೆಯಾಗುತ್ತವೆ, - ೧೦ ಪ್ರತಿಯೊಂದು ಪ್ರಕಾರದ ಜ್ವರದಲ್ಲಿಯ ಸನ್ನಿಪಾತದಲ್ಲಿಯa ಏರಂಭದಲ್ಲಿ ಲಂಘನ ಮಾಡಬೇಕೆಂದೇ ತಿಳಿಸಿದ್ದ ಈ ಕ್ಷಯ, ವಾಯು, ಭಯ, ಕಾಮ, ಕ್ರೋಧ, ಶೋಕ, ಶಾಪ, ಶ್ರಮಜನ್ಯ ಜ್ವರಗಳಿಗೆ ಲಂಘನವು ತ್ಯಾಜ್ಯವಾಗಿರುತ್ತದೆ. ಅದರಂತೆ ಬಾಲ, ವೃದ್ಧ, ಗರ್ಭಿಣಿ ರೋಗಿಗಳಿಗೆ ಲಂಘ ನವು ತಕ್ಕದ್ದಲ್ಲ.