ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೨ ಪಂಚಮ, ಹಿಪ್ಪಲಿ, ಸೈಂಧಲವಣ, ಶುಂಠಿ ಇವುಗಳ ಹdರ್ಣ ವನ್ನು ಹುರುಳಿಯ ಕಷಾಯದೊಡನೆ ಕೊಡಬೇಕು. - ೩ ಲೆಕ್ಕಿ, ಗುಗ್ಗಳ, ಸಾಸುವೆ, ಬೇವಿನಎಲಿ, ಬೆಲ್ಲ ಇವುಗಳ ರೂಪವನ್ನು ಕೊಟ್ಟರೆ ಸಂಧಿಕ ಸನ್ನಿಪಾತದ ನಾಶವಾಗುತ್ತದೆ. - ೪ ದೇವದಾರು, ಕಡೂರ, ಅಮೃತಬಳ್ಳಿ, ರಾಸನೆ, ಸುಂತಿ, ಇವುಗಳ ಕಪಾಯದಲ್ಲಿ ಗುಗ್ಗಳದ ಪುಡಿ ಹಾಕಿ ಕೊಟ್ಟರೆ ಸಂಧಿವಾತದ ಶಮನವಾಗುತ್ತದೆ. ೫ ಬಜಿ, ನೆಲಿಂಗಳ, ಅಮೃತಬಳ್ಳಿ, ಗಂಟುಭಾರಂಗಿ, ಗೊರಟಗೆ, ದೇವ ದಾರು, ಜೇಕಿನಗಡ್ಡೆ, ಸುಂಠಿ, ವೃದ್ದ ದಾರು, ರಾಸನೆ, ಗುಗ್ಗಳ, ಅಶ್ವಗಂಧಿ, ಔಡಲಬೇರು, ಶತಾವರಿ ಇವುಗಳ ಕಪಾಯದಿಂದ ಸಂಧಿಕಸನ್ನಿ ವಾತ, ಜಾಡ್ಯ, ಗ್ಲಾನಿ, ಬವಳಿ ಮತ್ತು ಪಕ್ಷ ಘಾತಗಳ ನಾಶವಾಗುತ್ತದೆ. - ೬ ಹಿಪ್ಪಲೇಬೇರು, ತಾರೀಕಾಯಿ, ಅಳಲೇಕಾಯಿ, ಕಕ್ಕೆಕಾಯಿಯಳ ಗಿನ ತಿಳಲು, ನೆಲ್ಲಿಚೆಟ್ಟು, ಅಡಸಾಲ ಇವುಗಳ ಕಷಾಯದಲ್ಲಿ ಔಡಲೆಣ್ಣೆ ಹಾಕಿ ಕಡುವದು. ಇದರಿಂದ ವಾಯುವಿಕಾರದಿಂದುಂಟಾದ ಜಾಡ್ಯದ ನಾಶವು. ೭ ಸಂಧಿಕ ಸ ಪಾಶಕ್ಕೆ ಲಂಘನ ಮಾಡುವದ, ಬೆವರು ಹೊರಡಿ ಸುವದ, ಔಷಧ ಕಟ್ಟುವದೂ ಇವೆಲ್ಲ ಹಿತಕಗಳಾಗಿವೆ, ಈ ಉಪಾಯಗಳಿಂದ ಅವಯವಗಳು ಹಗುರಾಗುತ್ತವೆ. ಈ ರೋಗಿಗೆ ಗಂಜಿ ಮುಂತಾದ ಹಗುರ ಆಹಾರವನ್ನು ಕೊಡಬೇಕು, (೨) ಅಂತಕ ಸನ್ನಿಪಾತ, ಲಕ್ಷಣ:-ದಾಹ, ಸಂತಾಪ, ಮೊಹ, ಕಲೆ ನಡುಗು, ಬೆಕ್ಕು ಮತ್ತು ಕಮು ಇವೇ ಮೊದಲಾದ ಲಕ್ಷಣಗಳಾಗುತ್ತಿದ್ದ ಈ ೬೧ಶಕ ಸನ್ನಿಪಾತವು ಅಸಾಧ್ಯವೆಂದೇ ಹೇಳಬಹುದು, ಅಂತಕ ಸನ್ನಿಪಾತಕ್ಕೆ ಉಪಾಯಗಳು, ೧ ರಾಗಿಹಿಟ್ಟನ್ನು ಬಳೊಳ್ಳಿ ರಸದಲ್ಲಿ ವಾದಿ ಅದರ ರೆಟ್ಟೆಗೆ ಎಣ್ಣೆ ಇಲ್ಲವೆ ತುಪ್ಪ ಹಚ್ಚಿ ಸುಟ್ಟು ಬಿಸಿ ಬಿಸಿಯಾಗಿರುವಾಗಲೆ ತಲೆಗೆ ಕಟ್ಟಬೇಕು. ೨ ಪ್ರಹರಗಳ ನಂತರ ಅದನ್ನು ಬಿಚ್ಚಿ ತೆಗೆದು ಮತ್ತೆ ಹೊಸ ಬಟ್ಟಿ ಸುಟ್ಟು ಕಟ್ಟಬೇಕು. ಈ ಉಪಾಯದಿಂದ ಅಂತಕ ಸನ್ನಿವಾತಕದ ವ್ಯಧೆಯು ಕಡಿಮೆ ಯಾಗುವದು, ನಮ್ಮ ಸ್ವಂತ ಅಭಿಪ್ರಾಯದಂತೆ ಆ ರಾಗಿ ಗಟ್ಟಿಯ ಔಡಲೆಣ್ಣೆ ಹಚ್ಚಿ ಸುಡಬೇಕು, ವೈದ್ಯರು ಈ ಉಪಾಯದ ವಿಶೇಷ ಅಭಿವ ತಕ್ಕ೦ಡು ಹೇಳಿರುತ್ತಾರೆ,