ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • ೬೮ }೨ ಅಳಲೇಕಾಯಿ, ಅಡಸಾಲ, ಫಲಸಾ, ದೇವದಾರು, ಕಟುಕತೊAಣಿ, ರಾಸನೆ, ಅಮೃತಬಳ್ಳಿ ಮತ್ತು ಕಪ್ಪ ಕಳಂಜನ ಇವುಗಳ ಕಷಾಯದಿಂದ ಜ್ವರ ಮತ್ತು ವ್ಯಥೆಗಳಿಂದ ಮುಕ್ತವಾದ ಅಂಶಕಸನ್ನಿಪಾತವು ನಾಶವಾಗುತ್ತ ದೆಂಬದಕ್ಕೆ ಸಂದೇಹವಿಲ್ಲ,

೩ ಆನಂದಭೈರವ ಮಾತ್ರ ಇಲ್ಲವೆ ಶಂಕರ ವೃತಸಂಜೀವಿನೀ ರಸ (ಮಾತೆ) ಕೊಡಬೇಕು. (4) ರುಗ್ತಾಹ ಸನ್ನಿಪಾತ. ಲಕ್ಷಣ:- ನೀರಡಿಕೆಯಿಂದ ಯುಕ್ತವಾದ ವಿಶೇಷ ಜ್ವರ, ವಿಶೇಷ ಸಂತಾಪದಿಂದ ಶರೀರದ ಗಾನಿ, ತಲೆ ನಡುಗು, ಇದರಿಂದ ಗಂಟಲು, ಕುತ್ತಿಗೆ, ಗದ್ದಗಳಲ್ಲಿ ವ್ಯಧೆ; ಉಬ್ಬಸ, ಒಣಕೆಮ್ಮು ಮತ್ತು ಬಿಕ್ಕು ಈ ಲಕ್ಷಣಗಳಿಂದ ಯುಕ್ತವಾದ ಈ ತುಣ್ಣಾಹ ಸನ್ನಿಪಾತವು ಕಷ್ಟಸಾಧ್ಯವೂ, ಮಾರಕವೂ ಆಗಿರು ಇದೆ. ರುಗ್ತಾಹ ಸನ್ನಿಪಾತಕ್ಕೆ ಉಪಾಯಗಳು. ೧ ಬೇಕೆನಗರಿ, ರಕ್ತಚಂದನ, ಶುಂಠಿ, ಬಾಳದಬೇರು, ಕರೇಬಾಳದ ಬೇರು, ಕಲ್ಲುಸಸಿಗಿ ಇವುಗಳ ಕಪಾಯ ವನ್ನು ಆರಿಸಿ ಕೊಟ್ಟರೆ, ಈ ಸನ್ನಿಪಾ ತವನ್ನು ಶಮನ ಮಾಡುತ್ತದೆ. ೨ ಅಳಲೇಕಾಯಿ, ಜೇಕಿನಗಡ್ಡೆ, ಕಲ್ಲುಸಬ್ಬಸಿಗಿ, ಕಟುಕರಣಿ, ಕಕ್ಕಿ ಕಾಯೊಳಗಿನ ತಿಳಲು, ಕರೇದಾಕ್ಷಿ ಇವುಗಳ ಕಷಾಯದಿಂದ ಈ ಸನ್ನಿಪಾತದ ನಾಶವಾಗುತ್ತದೆ, ೩ ಒಂದೆಲಗ, ದೀಪದ್ರಾಕ್ಷಿ, ಬೇಕಿನಗಡ್ಡೆ, ಬಾಳದಬೇರು, ಕಕ್ಕಿ ಕಾಮಿ, ಕಟುಕರೋಣಿ, ಬಜೆ, Fಳ, ಕಾಡಮೆಣಸಿನ ಬೇರು, ಜೀವ, ಕಹಿ ಹೀರಿಕಾಯಿ, ದಶಮುಲ, ನೆಲಬೇವು ಇವುಗಳ ಕಷಾಯದಿಂದ ಸಕಲ ಪ್ರಕಾ ರದ ವಾಶವ್ಯಾಧಿಗಳ ರುಗ್ವಾಹ ಸನ್ನಿ ವಾಳವೂ ಗುಣವಾಗುತ್ತವೆ. ೪ ಕರೀಗರು, ಕರ್ಪೂರ, ತದಕನ ಗಿಡ (ಆನೆಬೇ), ನಖಲ, ತಗರ, ಬಾಳದಬೇಕು, ಚಂದನ ಮತ್ತು ರಾಳ ಇವುಗಳ ರೂಪವನ್ನು ಈ ಸನ್ನಿ ಪಾಶದ ರೋಗಿಯ ಕೋಣೆಯಲ್ಲಿ ಕೊಡುವದು ಹಿತಕರವಾಗಿದೆ. ೫ ಹವೀಜ ಮತ್ತು ಅಕ್ಕಿಗಳನ್ನು ರಾತ್ರಿ ನೀರಲ್ಲಿ ನೆನೆ ಹಾಕಿ ಬೆಳಿಗ್ಗೆ ಅದರ ಗಂಜೀ ಮಾಡಿ ಆರಿಸಿ ಕೊಟ್ಟರೆ ಅಂತರ್ದಾಹ ಮತ್ತು ಪಿತ್ತ ಜ್ವರಗಳ ಶಮನವಾಗುವದು.