________________
-[ ೭೦ ] () ಶ್ರೀಶಾಂಗಸನ್ನಿಪಾತವು ಲಕ್ಷಣ:-ದೇಹವು ಬಹು ತಣ್ಣಗೆ, ನಡುಗು, ಕ್ಯಾಸ, ಬಿಕ್ಕು, ದೇಹ ಶೈಥಿಲ್ಯ, ದನಿಯ ಕುಗ್ಗು, ಅಂತರ್ದಾಹ, ಅಲ್ಪಾಯಾಸದಿಂದ ಶ್ರಮ, ಸಂತಾನ, ಕವು, ವಾಂತಿ ಮತ್ತು ಅತಿಸಾರ ಇವುಗಳಿಂದ ಕೂಡಿದ ಸನ್ನಿ ಪಾತಜ್ವರಕ್ಕೆ ಶೀತಾಂಗಸನ್ನಿಪಾತವೆನ್ನುವರು. ಶೀತಾಂಗಸನ್ನಿಪಾತಕ್ಕೆ ಉಪಾಯಗಳು, ೧ ಅರ್ಕಾದಿ ಕಷಾಯ:-ಎಕ್ಕ ಬೇರು, ಜೀರಿಗಿ, ಕಟು, ಗಂಟು ಭಾರಂಗಿ, ನೆಲಗುಳ್ಳ ಬೇರು, ದುಷ್ಟಪುಚಟ್ಟು, ತಾವರೆಗಡ್ಡೆ ಇವುಗಳ ಕಷಾಯ ವನ್ನು ಗೋಮೂತ್ರದಲ್ಲಿ ಸಿದ್ಧ ಮಾಡಿಕೊಟ್ಟರೆ ತಾತ್ಕಾಲದಲ್ಲಿ ಶೀತಾಂಗ ಸನ್ನಿ ಪಾತ, ಮೋಹ, ಶ್ವಾಸ ಮತ್ತು ಕಫವೃದ್ಧಿಗಳ ನಾಶವಾಗುತ್ತದೆ. ೨ ಮಾದಾಳ, ನೆಲಬೇವು, ಹಿಪ್ಪಲಿಬೇಕು, ದೇವದಾರು, ದಶಮಲ, ಅಜಮೋದ ಮತ್ತು ಶುಂಠಿ ಇವುಗಳ ಕಷಾಯವು ಶಿತಾಂಗಸನ್ನಿಪಾಶದ ನಾಶಕ ವಾಗಿರುತ್ತದೆ, - & ಒಣಗಿದ ಅಡವೀ ಹಾಗಲಕಾಯಿ, ಹುರಿದ ಹುರುಳಿ, ಕಲ್ಲುಸಬ್ಬ ಸಿಗಿ, ಹಿಪ್ಪಲಿ, ಬಜಿ, ಕಾಶಿವಣಿ, ಜೀರಿಗೆ, ನೆಲಬೇವು, ಚಿತ್ರವಲ, ವಿಷ ಗುಂಬಳ, ಅಳಲೇಕಾಯಿ ಇವುಗಳ ಹಿಟ್ಟಿನಂತಹ ಚdರ್ಣವನ್ನು ಮೈಗೆ ತಿಕ್ಕಿದರೆ ಬೆವರುಂಟಾಗಿ ಶೀತಗಾತ್ರ ಸನ್ನಿಪಾತವು ಗುಣವಾಗುತ್ತದೆ. (೬) ತಂದ್ರಿಕ ಸನ್ನಿಪಾತ. ಅಕ್ಷಣ:- ಮಬ್ಬು, ನಾಲಿಗೆಯ ಮೇಲೆ ಹೆಚ್ಚಾಗಿ ಮುಳ್ಳು ಏಳೋಣ, ಶಲಿ, ಜ್ವರ, ಕಫ, ನೀರಡಿಕೆಗಳಿಂದ ಬಳಲುವದು, ನಾಲಿಗೆ ಕಪ್ಪು-ಬಿರುಸಾ ಗುವದು, ಅತಿಸಾರ, ಶ್ವಾಸ, ಗ್ಲಾನಿ, ಸಂತಾನ, ಕಿವಿಶೂಲಿ, ಹಗಲೆಲ್ಲ ನಿದ್ದೆ, ದನಿ ಕುಗ್ಗು ವದು, ತೀವ್ರ ಜ್ವರ ಬರುವದು ಇವೇ ಮುಂತಾದ ಲಕ್ಷಣಗಳಿಂದ ಯುಕ್ತವಾಗಿರುತ್ತದೆ. ಜ್ವರ ಬರಹತ್ತುತ್ತಲೆ ದೃಷ್ಟಿ ಮಂದವಾಗುತ್ತದೆ. ತಂದ್ರಿಕ ಸನ್ನಿಪಾತಕ್ಕ ಉಪಾಯಗಳು, ೧ ಸೈಂಧಲವಣ, ಕರ್ಪೂರ, ಮನಶಿ, ಹಿಪ್ಪಲಿ ಇವುಗಳನ್ನು ಕುದುರೆಯ ಜೊಲ್ಲು ಮತ್ತು ಜೇನುತುಪ್ಪಗಳಲ್ಲಿ ತೆಯು ಆಂಜನ ಮಾಡುವದು ೨ ಗಂಟುಭಾರಂಗಿ, ಅಮೃತಬಳ್ಳಿ, ಜೇಕಿನಗಡ್ಡೆ, ನೆಲಗುಳ್ಳ ಬೇರು, ಅಳಲೇಕಾಯಿ, ತಾವರೆಗಡೆ, ಶುಂಠಿ ಇವುಗಳ ಕಾಥೆ-ನಿಕಾಥೆಯನ್ನು ೩ ಇಲ್ಲವೆ ೬ ದಿವಸ ಕಡತಕ್ಕದ್ದು.