________________
1 [ ೬೯ ]೬ ಕುಗಹ ಸನ್ನಿಪಾತಕ್ಕೆ ಲೇಪ:-ಬರೀಸಪ್ಪ, ಚಂದನ, ಬೇವಿನ ಸೊಪ್ಪು ಇವುಗಳನ್ನು ಒಟ್ಟಾಗಿ ನುಣ್ಣಗೆ ಅರೆದು, ಅಂಗಾಲಿಗೆ ಬಡಿದರೆ ಕುಗ್ಗಾ ಹವು ಶಾಂತವಾಗುವದು, ದಾಹ-ವಾಂತಿಗಳಿಂದ ಬಳಲುವ, ಅನ್ನ ಸೇರದಿರುವ, ನೀರಡಿಕೆ ಯಿಂದ ಪೀಡಿತನಾದ ರೋಗಿಗೆ ಭತ್ತದ ಅರಳಿನ ಹಿಟ್ಟಿನಲ್ಲಿ ಸಕ್ಕರೆ ಮತ್ತು ಜೇನ ತುಪ್ಪ ಹಾಕಿ ತಿನಿಸಬೇಕು. ಶಾಂತವಾಗುವದು, (೪) ಚಿತ್ರವಿಭ್ರಮ ಸನ್ನಿಪಾತ. ಲಕ್ಷಣ:-ಯಾವುದೊಂದು ಬಗೆಯಿಂದ ದೇಹಕ್ಕೆ ಪೀಡೆ, ಭ್ರಮೆ, ಉನ್ಮಾದ, ಸಂತಾಪ, ಮೋಹ, ವೈಕಲ್ಯ, ಕಣ್ಣಿಗೆ ಹಬ್ಬ, ನಗುವದು, ಹಾಡುವದು, ಕುಣಿಯುವದು, ಬಡಬಡಿಸುವದು ಇವೇ ಮೊದಲಾದ ವಿಕಾರ ಗಳಾದರೆ ಅದಕ್ಕೆ ಚಿತ್ರ ವಿಭ್ರಮಸನ್ನಿ ವಾತವೆನ್ನುವರು, ಇದು ಅಸಾಧ್ಯವೇ ಸರಿ. ಈ ಚಿತ್ರ ವಿಭ್ರಮ ಸನ್ನಿಪಾತಕ್ಕ ಉಪಾಯಗಳು, ೧ ದೀಪದ್ರಾಕ್ಷಿ, ದೇವದಾರು, ಕಟುಕರೋಣಿ, ಜೇಕಿನಗಡ್ಡೆ, ನೆಲ್ಲಿ ಚೆಟ್ಟು, ಅಮೃತಬಳ್ಳಿ, ಅಳಲೇಕಾಯಿ, ಕಕ್ಕಿಕಾಳಗಿನ ತಿಳಲು, ನೆಲಬೇವು, ಕಲ್ಲುಸಬ್ಬಸಗಿ, ಕಹಿಪಡುವಲು ಇವುಗಳ ಇಲ್ಲವೆ ಒಂದೆಲಗ, ದೀಪದ್ರಾಕ್ಷಿ, ಕಹಿ ಪಡುವಲ, ಬಾಳದಬೇಕು, ಅಳಲೇಕಾಯಿ, ಕಳಸಬ್ಬಸಿಗಿ, ಕಕ್ಕಿಕಾಯೊಳಗಿನ ತಿಳು, ಕಟುಕರೋಣಿ, ಕಡುವಾಳ ಇವುಗಳ ಕಷಾಯದಿಂದ ಈ ಸನ್ನಿವಾಳದ ಶಮನವಾಗುತ್ತದೆ, ೨ ಇಪ್ಪಿತೊಗಟೆ, ನಬಲ, ಬುರುಲ, ಹಿಪ್ಪಲಿ, ಕೆಂಪು (ತೆರೆ) ಮತ್ತೆ ತೊಗಟೆ, ಅಳಲೇಕಾಯಿ, ತಾಲಕರ್ಣಿ, ರಕ್ತಚಂದನ ಅವುಗಳ ಕಷಾಯವು ಈ ರೋಗಕ್ಕೆ ಹಿತಕರವಾಗಿದೆ. ೩ ಒಂದೆಲಗ, ಬಜಿ, ಶತಾವರಿ, ತ್ರಿಫಳ, ಕಕ್ಕಿ, ನೆಲಬೇವು, ಬೇವು, ಕಹಿ ಪಡುವಲ, ಕರೇದ್ರಾಕ್ಷಿ ಮತ್ತು ದಶಮ ಇವುಗಳ ಕಷಾಯವು ಚಿತ್ರವಿಭ್ರವು ಹಾಗು ಕುಗ್ಗಾ ಹಸನ್ನಿಪಾತಕಗಳನ್ನು ನಾಶಮಾಡುತ್ತದೆ. ೪ ಅಳಲೇಕಾಯಿ, ಕಲ್ಲುಸಬ್ಬಸಿಗಿ, ಕದ್ರಾಕ್ಷಿ, ಕಡುವಾಳ, ಕಟುಕ ರೋಣಿ, ಜೇಕಿನಗಡ್ಡೆ, ದೇವದಾರು, ಕಕ್ಕೆಕಾಯಿ ತಿಳಲು, ಒಂದೆಲಗ ಇವು ಗಳ ಕಷಾಯವು ಚಿತ್ರ ವಿಭ್ರವು ಸನ್ನಿಪಾತವನ್ನು ಶಮನಗೊಳಿಸುತ್ತದೆ. ೫ ಚೊಗಚಿಸಪ್ಪಿನ ರಸದಲ್ಲಿ ಶುಂಠಿ-ಬೆಲ್ಲಗಳನ್ನು ಕೆಯು, ನಸ್ಯ ಮಾಡಿಸಿದರೆ ಮುಗಿನಲ್ಲಿ ಹಾಕಿದರೆ) ಚಿತ್ರವಿಭ್ರವಸನ್ನಿ ಪಾತದ ನಾಶವಾಗುವದು.