ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82 ವಾದ್ದು ; ನಾವು ಈ ಕೆಲಸವನ್ನು ಮಾಡಲಾರೆವು; ಕ್ಷಮಿಸಬೇಕು.” ಎಂದು ಹೇಳಿ, ಅವನ ಆಜ್ಞೆಯನ್ನು ಉಲ್ಲಂಘಿಸುತ್ತಲಿರುವರು. “ ನಾನು ಪ್ರಭುವಾಗಿದ್ದಾಗ್ಯೂ, ನನ್ನ ಆಜ್ಞೆಯನ್ನು ಇವರು ಉಲ್ಲಂಘಿಸುವರಲ್ಲಾ,' ಎಂದು ಇವನು ಅವರನ್ನು ದ್ವೇಷಿಸುತ್ತಿರುವನು, ಸತ್ಯವನ್ನು ಮೂಲೋತ್ಪಾಟನ ಮಾಡುವುದರಲ್ಲಿ ಇವನು ಬದ್ಧ ಕಂಕಣನಾಗಿರುವನು, ಸತ್ಯವಂತರು ಮಾತ್ರವೇ ಅಲ್ಲದೆ, ದುರ್ಮಾರ್ಗಪ್ಪ ವರ್ತಕರೂ ಕೂಡ ಇವನಲ್ಲಿ ಅನುರಕ್ತರಾಗಿರುವುದಿಲ್ಲ. ಯಾವಾಗ ಏನು ವಿಪತ್ತು ಬರುವುದೋ ಎಂದು ಎಲ್ಲರೂ ಇವನಲ್ಲಿ ಭಯವುಳ್ಳವರಾಗಿರುವರು. ಇವನಿಗೂ ಅವರಲ್ಲಿ ಭಯವು ಇರುವುದು, ತನ್ನ ನೆರಳನ್ನು ನೋಡಿ, ಯಾರೊ ಶತ್ರುಗಳು ಬಂದಂತೆ ಇವನು ಭಯಪಡುವನು, ಇವನಿಗೆ ಸರಿಯಾಗಿ ನಿದ್ದೆ ಯು ಬರುವು ದಿಲ್ಲ. ಕಣ್ಣನ್ನು ಮುಚ್ಚಿದ ಕೂಡಲೇ ಭಯಂಕರವಾದ ಸ್ವಪ್ನಗಳು ಆಗುವುವು. ತಾನು ಯಾರಿಗೆ ಅಪಕಾರ ಮಾಡಿರುವನೋ ಅವರು ತನ್ನನ್ನು ಕೊಲ್ಲುವುದಕ್ಕೆ ಬಂದಂತೆ ತೋರುವುದು, ಕೂಗಿಕೊಂಡು ಏಳುವನು. ಯಾವಾಗೂ ಕತ್ತಿ ಯನ್ನು ಸವಿಾಪದಲ್ಲಿ ಇಟ್ಟುಕೊಂಡಿರುವನು, ಆತ್ಮರಕ್ಷಣೆಯಲ್ಲಿ ಯಾವಾಗ್ಯೂ ಸನ್ನದ್ಧನಾಗಿರುವನು. ಎಲ್ಲರಲ್ಲಿಯೂ ಇವನಿಗೆ ಸಂದೇಹವು ಇರುವುದು, ಅನ್ನ ಪಾನಗಳಲ್ಲಿ ವಿಷವೇನಾದರೂ ಹಾಕಲ್ಪಟ್ಟಿದೆಯೋ ಏನೋ, ಎಂದು ಸಂದೇಹ ದಿಂದ ಆ ಅನ್ನೊದಕಗಳನ್ನು ಅವರು ತಿನ್ನುವಂತೆ ಮಾಡಿ, ಅನಂತರ ತಾನು ತಿನ್ನುವನು, ತನ್ನನ್ನು ಸಂಹರಿಸುವುದಕ್ಕೆ ಯಾರು ಏನು ಉಪಾಯಗಳನ್ನು ಮಾಡಿ ರುವರೋ ಎಂದು ಯಾವಾಗೂ ಸಂದೇಹದಿಂದ ಅವನು ಪೀಡಿತನಾಗಿರುವನು. ಇವನು ಲೋಭಿಗಳಲ್ಲಿ ಅಗ್ರಗಣ್ಯನಾಗಿರುವನು. ದ್ರವ್ಯವನ್ನೂ, ಭೋಗ್ಯವಸ್ತು ಗಳನ್ನೂ ಬೇಕಾದ ಹಾಗೆ ಇಟ್ಟು ಕೊಂಡಿರುವನು. ಅವನ್ನು ನೋಡುತ್ತಾ, ಹಿಗ್ಗು ತ್ಯಾ ಇರುವನು ಕಳವು ಮೊದಲಾದವುಗಳಿಂದ ಅನೇಕ ಪದಾರ್ಥಗಳು ಹೋಗುವುವು. ಆಗ ತುಂಬಾ ವಿಷಾದಪಡುತ್ತಾ, ನೌಕರರನ್ನೆಲ್ಲಾ ದಂಡಿಸು ತ್ಯಾ, ದುರಾಗ್ರಹಪರವಶನಾಗಿರುವನು, ಸಂಗೀತ, ಸಾಹಿತ್ಯ ಮೊದಲಾದವುಗ. ಇಲ್ಲಿ ಇವನಿಗೆ ಅಭಿರುಚಿಯು ಇರುವುದಿಲ್ಲ, ರೂಪಾಯಿಗಳನ್ನು ಎಣಿಸುವಾಗ, ಉಂಟಾಗುವ ಧ್ವನಿಯೆ ಇವನ ಭಾಗಕ್ಕೆ ಸಂಗೀತವಾಗಿರುವುದು, ದೈವಾ ಸೂಯೆಗಳಿಂದ ಜನಗಳನ್ನು ಸುಹರಿಸುವುದೇ ಇವನಿಗೆ ಸಾಹಿತ್ಯವಾಗಿರುವುದು. ಯಾವಾಗೂ ಅರಮನೆಯಲ್ಲಿ ಏಕಾಂತವಾದ ಸ್ಥಳದಲ್ಲಿ ವಿಚಾರಸರನಾಗಿರುವನು. ಇವನ ಸ್ನೇಹಿತರೂ ಕೂಡ ಧಾರಾಳವಾಗಿ ಇವನ ಬಳಿಗೆ ಹೋಗುವುದಕ್ಕೆ ಆಗುವು ದಿಲ್ಲ, ಯಾರು ಬಂದಾಗ್ಯೂ ತನ್ನನ್ನು ಸಂಹರಿಸುವರೋ ಏನೋ, ಎಂಬ ಭಯವು ಇದನಿಗೆ ಇರುವುದು, ಕತ್ತಿಯನ್ನು ಒರೆಯಿಂದ ತೆಗೆದುಕೊಂಡು ಕೆಲವು ಕೃತ್ಯ