ಈ ಪುಟವನ್ನು ಪರಿಶೀಲಿಸಲಾಗಿಲ್ಲ.

83 ರೂ, ಭರ್ಜಿಗಳನ್ನು ಸಿದ್ಧವಾಗಿಟ್ಟುಕೊಂಡು ಕೆಲವು ನೃತ್ಯರೂ, ಅರಮನೆಯ ಸುತ್ತಲೂ ಇರುವರು. ಇವನ ಸಮಿಾಪದಲ್ಲಿಯೂ ಬಿತ್ತು ಕತ್ತಿ ಪಹರೆಯು ಇರು ವುದು, ಇವನ ವಾಸಸ್ಥಾನವು ಮುವ್ವತ್ತು ಕೊರಡಿಗಳುಳ್ಳದ್ದಾ ರುವುದು, ಇವು ಗಳಿಗೆಲ್ಲಾ ಕಬ್ಬಿಣದ ಬಾಗಿಲುಗಳೂ, ಲಾಳಮುಂಡಿಗೆಗಳೂ ಇರುವುವು, ಈ ಮುತ್ತು ಕೊಠಡಿಗಳಿಗೂ ಒಂದರಿಂದ ಒಂದಕ್ಕೆ ಹೋಗುವುದಕ್ಕೆ ಬಾಗಿ ಲುಗಳು ಇರುವವು. ಈ ಕೊರಡಿಗಳ ಇವನು ಯಾವುದರಲ್ಲಿ ವಾಸಮಾಡು ತಾನೋ ಗೊತ್ತಾಗುವುದಿಲ್ಲ, ತನ್ನ ಶತ್ರುಗಳು ತನ್ನನ್ನು ಸಂಹರಿಸದೆ ಇರುವಂತೆ ಮಾಡಿಕೊಳ್ಳಬೇಕೆಂದು ಒಂದೊಂದು ಕೊಠಡಿಯಲ್ಲಿ ಒಂದೊಂದು ದಿನವನ್ನು ಕಳೆಯುವನು, ಪ್ರಪಂಚದಲ್ಲಿ ಸ್ನೇಹವೂ, ಪ್ರೀತಿಯೂ ಇರುವುದೆಂದು ಇವನು ತಿಳಿದುಕೊಂಡಿರುವುದಿಲ್ಲ, ಮಿತ್ರರಿರುವರೆಂಬ ಭಾವನೆಯು ಇವನಿಗೆ ಇರುವು ದಿಲ್ಲ. ಇವನ ಕಣ್ಣುಗಳು ಹಳ್ಳದಲ್ಲಿರುವಂತೆ ಕಾಣುತ್ತವೆ. ಯಾವಾಗ್ಯೂ ದಶದಿ ಕುಗಳಿಗೂ ದೃಷ್ಟಿಯನ್ನು ಪ್ರಸರಿಸುತ್ತಲಿರುತ್ತಾನೆ, ಅಲ್ಪ ಸ್ವಲ್ಪ ಶಬ್ದವಾದಾ ಗ್ರೂ, ಬೆಚ್ಚಿ ಬಿದ್ದು ನಡುಗುತ್ತಾನೆ, ಇವನ ಮುಖವು ಬಿಳತುಕೊಂಡಿರುತ್ತದೆ? ದೇಹವು ಕೃಶವಾಗಿರುತ್ತದೆ. ಮುಖದಲ್ಲಿ ವಿಚಾರವು ಪ್ರಜ್ವಲಿಸುತ್ತದೆ. ಯ ವಾಗೂ ಹುಬ್ಬುಗಳನ್ನು ಗಂಟುಹಾಕಿಕೊಂಡಿರುತ್ತಾನೆ, ಇವನು ಮಾತನಾ ಡುವುದೇ ಅಪೂರ್ವ. ಆಗಾಗ್ಗೆ ನಿಟ್ಟು ಸುರು ಬಿಡುತ್ತಾನೆ. ಅಯ್ಯೋ ! ಅಪ್ಪಾ! ಎಂಬದಾಗಿ ಆಗಾಗ್ಗೆ ಎಂದುಕೊಳ್ಳುತ್ತಾನೆ, ಅದರಿಂದ ಇವನ ಮನೋವಿಕಲ್ಪ ಗಳು ಗೊತ್ತಾಗಬೇಕಾಗಿದೆ, ಇವನ ಪರಿಪಚಾರಕರು ಅತ್ಯಂತ ರುಚಿಯಾದ ಭಕ್ಷ್ಯ ಭೋಜ್ಯಗಳನ್ನು ಭೋಜನಕ್ಕೆ ಸಿದ್ಧ ಮಾಡುತ್ತಾರೆ. ಅವುಗಳಲ್ಲಿ ಇವನಿಗೆ ಯಾವು ದೂ ರುಚಿಸುವುದಿಲ್ಲ, ತನಗೆ ಏನು ವಿಪತ್ತು ಬರುವುದೋ ಎಂದು ಪ್ರತಿ ನಿಮಿಷದಲ್ಲಿ ಯೂ ಯೋಚಿಸುತ್ತಾನೆ. ಯಾರಿಂದ ವಿಪತ್ತು ಉಂಟಾಗಬಹುದೆಂದು ತೋರುತ್ತ ದೋ ಅವರನ್ನು ನಿರ್ದಯೆಯಿಂದ ಸಂಹರಿಸುತ್ತಾನೆ, ಇಂಥಾ ಸಂಹಾರಗಳು ನನಗೆ ಕ್ಷೇಮಕರವಾದುವೆಂಬದಾಗಿ ತಿಳಿದುಕೊಂಡು ಇದಾನೆ, ಪ್ರೀತಿಯಿಂದ ಪ್ರೀತಿಯೂ, ದ್ವೇಷದಿಂದ ದ್ವೇಷವೂ ಹುಟ್ಟುವುವೆಂಬ ಭಾವನೆಯೇ ಇವನಿಗೆ ಇರುವುದಿಲ್ಲ, ನಮ್ಮ ದೊರೆಯು ಇಂಥಾ ಸ್ವಭಾವವುಳ್ಳವನು, ಇವನ ಅರಮನ ಯಲ್ಲಿರತಕ್ಕ ಊಳಿಗದವರೂ, ಬಿತ್ತು ಕತ್ತಿ ಪಹರೆಯವರೂ ಯಾವಾಗ ತನನ್ನು ಸಂಹರಿಸುವರೋ ಎಂಬ ಭಯವು ಇವನಿಗೆ ಇರುತ್ತದೆ, ಹಾಗೆ ಅವರು ಅವನನ್ನು ಸಂಹರಿಸಿದರೆ ಅದೇನೂ ಆಶ್ಚರೈವಲ್ಲ, ಇಂಥಾ ಧೋರೆಯಲ್ಲಿ ನಾನು ನೌಕರಿ ಮಾಡಬೇಕಾಗಿರುವುದು, ಅವನ ಸ್ವಭಾವವು ಹೇಗಾದರೂ ಇರಲಿ, ಅವನು ನನ್ನನ್ನು ಸಂಹರಿಸಲಿ ಅಥವಾ ರಕ್ಷಿಸಲಿ, ಅವನನ್ನು ರಕ್ಷಿಸುವ ಉಪಾಯ