ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ನೆಯ ಪ್ರಕರಣ-ಸು೦ದರ. ಭವನ. \rvyyyyy

  • # \4 vy

೩ ನೆಯ ಪ್ರಕರಣ. ಸುಂದರ--ಭವನ, ನಿಜ ನಾಯಕನನ್ನು ಹಾಕಿಕೊಳ್ಳುವದಕ್ಕಾಗಿ ಮೋಟಾರವು ಸ್ವಲ್ಪ ಹೊತ್ತು ನಿಂತದ್ದರಿಂದ ಹಿಂದಿನ ಎರಡು ಮೋಟಾರಗಳು ಸಹಜವೇ ಅವರ 'ಆ ಹತ್ತರ ಬಂದವು, ಅನಂತರ ಆ ಮೂರೂ ಮೋಟಾರಗಳು ಒಂದರ ಹಿಂದೊಂದು ಭರದಿಂದ ತಾಡದೇವಿಯ ಬೀದಿಯಿಂದ ಮಹಾಲಕ್ಷ್ಮಿಯ ಭಾಗಕ್ಕೆ ಹೋಗಹತ್ತಿದವು, ಒಂದು ಪ್ರಚಂಡ ಮತ್ತು ಅತ್ಯಂತ ಸುಂದರವಾದ ಬಂಗಲೆಯ ಹತ್ತರ ಮೂರೂ ಮೋಟಾರಗಾಡಿಗಳು ಬಂದ ಕೂಡಲೆ ಅಲ್ಪಸ್ವಲ್ಪ ಹೊಳೆಯುತ್ತಿದ್ದ ಆ ಬಂಗಲೆಯು ಒಮ್ಮೆಲೇ ವಿದ್ಯುಲ್ಲತೆಯ ಬೆಳಕಿನಿಂದ ಝಗಝಗಿಸಹತ್ತಿತು. ಬಂಗೆ ಲೆಯ ಸುತ್ತುಮುತ್ತಲು ಇದ್ದ ವಿಶಾಲವಾದ ತೋಟದ ಹೊರಗಿನ ಒಂದು ಬಾಗಿಲನ್ನು ತೆರೆದು, ೫-೬ ಮಂದಿ ಸೇವಕರು ಮೋಟಾರದೊಳಗಿನ ಜನರಿಗೆ ವಂದನೆಯನ್ನು ಸಮ ರ್ಪಿಸುವದಕ್ಕಾಗಿ ಮರ್ಯಾದೆಯಿಂದ ನಿಂತಿದ್ದರು. ಮೆಲ್ಲಮೆಲ್ಲನೆ ಮೋಟಾರವ ಆ ಸುಂದರವಾದ ತೋಟದೊಳಗೆ ಹಾಯ್ದು ಬಂಗಲೆಯ ಮಂಟಪದ್ವಾರದ ಹತ್ತರ ನಿಂತಿತು. ಒಳಗೆ ಕುಳಿತಿದ್ದ ಇಬ್ಬರು ಸ್ತ್ರೀಯರು ನವಕರರಿಗೆ ಕರಿಸಿ, ವಿನಾಯಕನನ್ನು ಒಂದು ವಿವಕ್ಷಿತ ಮಹಾಲಿನಲ್ಲಿ ಒಯ್ದು ಮಲಗಿಸಬೇಕೆಂದು ಆಜ್ಞಾಪಿಸಿ, ಅದೇ ಮೋಟಾರನ್ನು ಡಾಕ್ಟರನಿಗೆ ಕರಕೊಂಡು ಬರುವದಕ್ಕಾಗಿ ಕಳಿಸಿದರು. ಅನಂತರ | ಮೂರೂ ಮೋಟಾರದೊಳಗಿನ ಜನರು ಮುಂಚೆ ತಮ್ಮ ತಮ್ಮ ದಿವಾಣಖಾನೆಗೆ ಹೋಗದೆ, ವಿನಾಯಕನನ್ನು ಮಲಗಿಸಿದ ದಿವಾಣಖಾನೆಗೆ ಹೋಗಿ ಅವನನ್ನು ದಿಟ್ಟಿಸಿ ನೋಡಹತ್ತಿದರು. ಅವರಲ್ಲಿ ಇಬ್ಬರು ಸ್ತ್ರೀಯರೂ, ಇಬ್ಬರು ಪುರುಷರೂ ಪೋಷಾಕು ಮೊದಲಾದವುಗಳಿಂದ ವಿಶೇಷ ಐಶ್ವರ್ಯಸಂಷನ ರಂತೆ ಕಾಣಿಸುತ್ತಿದ್ದುದ ರಿಂದ ಅವರು ರಾಜವಾಡೆಯಂತಿರುವ ಈ ಬಂಗಲೆಯ ಯಜಮಾನರಾಗಿದ್ದಾರೆಂದೂ, ಉಳಿದವರು ಅವರ ನವಕರರಾಗಿದ್ದಾರೆಂದೂ ಸಹಜ ಗುರ್ತು ಹಿಡಿಯಲಿಕ್ಕೆ ಬರುವಂತಿ ದ್ವಿತು. ವಿನಾಯಕನ ಮೈಬಣ್ಣವು ಗೌರವರ್ಣವುಳ್ಳದ್ದಾಗಿದ್ದಿತು. ಅವನ ಕಣ್ಣು, ಮೂಗು, ಹಣೆ ಮೊದಲಾದವು ಅವನ ಸೌಂದರ್ಯವನ್ನು ಹೆಚ್ಚಿಸುತ್ತಿದ್ದವು; ಅಗಲ