ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ, s a/AAAAAAAfshAfshh fs fs/shahrshhhhh AAAAAAAA# ವಾಗಿದ್ದ ಹಣೆಯು ಅವನ ಬುದ್ದಿವಂತಿಕೆಗೆ ಸಾಕ್ಷಿಯಾಗಿದ್ದಿತು; ಶಕ್ತಿ, ತೇಜ, ಸೌಜನ್ಯ, ಸುಶೀಲ ಮೊದಲಾದವುಗಳು ಮುಖದ ಮೇಲೆ ಸ್ಪಷ್ಟವಾಗಿ ಕಾಣುತ್ತಿದ್ದವು; ಅವನ ಜೋಷಾಕು ತೀರ ಸಾದಾ ತರಹದಿದ್ದಿತು; ಆದರೂ ಅದು ಅವನಿಗೆ ಚನ್ನಾಗಿ ಒಪ್ಪಿ ದ್ವಿತು. ಅವನು ಮೂಕಾವಸ್ಥೆಯಲ್ಲಿದ್ದರೂ ತೇಜಃಪುಂಜವಾದ ಮುಖಲಕ್ಷಣದಿಂದ ಸರ್ವರ ಆದರಕ್ಕೂ ಪಾತ್ರನಾಗಿದ್ದನು. ಕೂಡಲೆ ಒಬ್ಬ ಡಾಕ್ಟರನು ಬಂದು ವಿನಾಯ ಕನ ಪ್ರಕೃತಿಯನ್ನು ನೋಡಿ ಇವರ ಹೊಟ್ಟೆಯಲ್ಲಿ ಸ್ವಲ್ಪ ಮಾದಕ ಪದಾರ್ಥವು ಸೇರಿರ ಬಹುದೆಂದು ಹೇಳಿ, ಅದಕ್ಕೆ ತಕ್ಕ ಔಷಧವನ್ನು ಕುಡಿಸಿ, ಗಾಬರಿಯಾಗುವ ಕಾರಣ ವಿತ್ತೆಂದು ಹೇಳಿ ಹೊರಟುಹೋದನು. ಡಾಕ್ಟರನ ಹಿಂದೆ ಮೆಲ್ಲಮೆಲ್ಲನೆ ಎಲ್ಲರೂ ದಿವಾಣಖಾನೆಯಿಂದ ಹೊರಟುಹೋಗಿ ತಂತಮ್ಮ ದಿವಾಣಖಾನೆಯಲ್ಲಿ ಮಲಗಿದರು. ಮೆಲ್ಲಮೆಲ್ಲನೆ ರಾತ್ರಿಯು ಮುಗಿದು ಮೂಡಣದಿಕ್ಕಿನ ಮುಗಿಲಿನಲ್ಲಿ ಕೆಂಪು ಬಣ್ಣವು ಕಾಣಿಸಹತ್ತಿತು. ಬೆಳಗಿನ ಶೀತಲವಾದ ಉತ್ಸಾಹಕ ಮಂದವಾಯುವ ಬೀಸಹತ್ತಿತು. ಪಕ್ಷಿಗಳು ತಮ್ಮ ಗೂಡಿನೊಳಗಿಂದಲೇ ವಸುಂಧರೆಯನ್ನು ನಿರೀಕ್ಷಿಸಿ ಮಧುರಾಲಾಪದಿಂದ ಹಾಡಹತ್ತಿದವು. ಮುಂಬಾಪುರಿಯ ಬೀದಿಗಳಲ್ಲಿ ಮನುಷ್ಯರ ಗದ್ದಲವು ಪ್ರಾರಂಭವಾಯಿತು. ಮೆಲ್ಲಮೆಲ್ಲನೆ ಸೃಥ್ವಿಯು ಹೆಚ್ಚು ಪ್ರಕಾಶಮಾನವಾಗ ಹತ್ತಿತು. ಕೂಡಲೆ ಬಾಲಸೂರ್ಯನ ಆಗಮನವಾಯಿತು. ಪ್ರಾತಃಕಾಲದ ಬಿಸಿಲಿ ನಿಂದ ಎಲ್ಲ ಮುಂಬಾಪುರಿಯ ಬಿಳೇ ಜರತಾರೀ ಶಾಲನ್ನು ಇಟ್ಟು ಕೊಂಡಂತೆ ಕಾಣಿಸ ಹತ್ತಿತು, ಇನ್ನೂ ವಿನಾಯಕನು ಮೆತ್ತನ್ನ ಹಾಸಿಗೆಯ ಮೇಲೆ ಮಲಗಿದ್ದನು. ಇಷ್ಟ ರಲ್ಲಿ ಬಂಗಲೆಯೊಳಗಿನ ದೊಡ್ಡ ಗಡಿಯಾಳದಲ್ಲಿ ಎಂಟು ಹೊಡೆಯಿತು. ಕೂಡಲೆ ವಿನಾಯಕನಿಗೆ ಬಡಿದು ಎಬ್ಬಿಸಿದಂತಾಗಲು ಅವನು ಹಾಸಿಗೆಯ ಮೇಲಿಂದ ಎದ್ದು ಕುಳಿತು ಅತ್ತಿತ್ತ ಹುಚ್ಚನಂತೆ ನೋಡಹತ್ತಿದನು. ತಾನು ಎಲ್ಲಿದ್ದೇನೆ, ತನ್ನ ಅವಸ್ಥೆಯು ಈಗ ಹೇಗದೆ, ಮೊದಲಾದದ್ದು ಅವನಿಗೆ ಮೊದಲು ಏನೂ ತಿಳಿಯಲಿಲ್ಲ. ಆ ವೇಳೆ ಯಲ್ಲಿ ಆ ದಿವಾಣಖಾನೆಯ ಕಿಡಕಿಗಳು ತೆರೆದದ್ದರಿಂದ ಅಲ್ಪಸ್ವಲ್ಪ ಬಿಸಿಲು ಒಳಗೆ ಬಿದ್ದಿದ್ದಿತು, ಕಿಡಿಕಿಯೊಳಗಿಂದ ತೋಟದೊಳಗಿನ ಗಿಡ- ಹೂಗಳು ಸ್ಪಷ್ಟವಾಗಿ ಕಾಣಿ ಸುತ್ತಿದ್ದವು. ಆ ಸ್ಥಿತಿಯನ್ನು ನೋಡಿ ತಾನು ನಿಶ್ಚಯವಾಗಿ ಶರೆಮನೆಯಲ್ಲಿ ಇಲ್ಲವೆಂದು ವಿನಾಯಕನಿಗೆ ದೃಢವಾಯಿತು. ತಾನು ಇಲ್ಲಿಗೆ ಹೇಗೆ ಬಂದೆನೆಂಬ ಬಗ್ಗೆ ಅವನು ಆಲೋಚನೆ ಮಾಡಹತ್ತಿದನು. ಗಡಿಯಾಲದ ಸರಪಳಿಯನ್ನು ಅಲ್ಲಾಡಿಸುತ್ತ ಶರೆಮನೆ ಯಿಂದ ಓಡಿಬಂದಾಗಿನಿಂದ ಅವನು ನೆನಪುಮಾಡಹತ್ತಿದನು. ಆಗ ಅವನಿಗೆ ಮೋಟಾ ರದ ನೆನಪು ಬಂದಿತು. ಅದೇ ಮೋಟಾರದ ಯಜಮಾನನು ತನ್ನ ನ್ನು ಇಲ್ಲಿಗೆ ತಂದಿರ ಬಹುದೆಂದು ಅವನಿಗೆ ತೋರಹತ್ತಿತು. ಅವನು ತನ್ನ ಸ್ಥಿತ್ಯಂತರದ ಬಗ್ಗೆ ಆಲೋಚನೆ ಮಾಡುತ್ತಿರುವಷ್ಟರಲ್ಲಿ ಅವನಿಗಿಂತ ೩-೪ ವರ್ಷ ಹೆಚ್ಚು ವಯಸ್ಸಾದ ಒಬ್ಬ ಗೃಹ ಸ್ಥನು ಅಲ್ಲಿಗೆ ಬಂದನು. ಅವನು ನಿಃಸಂಕೋಚವೃತ್ತಿಯಿಂದ ಪಲಂಗದ ಮೇಲೆ