೨ ಕಾದಂಬರೀ ಸಂಗ್ರಹ ಆಗಣ ವೈಭವವನ್ನೂ ಅಟ್ಟಹಾಸವನ್ನೂ ನನ್ನೊಡನೆ ಕಥಾರೂಪವಾಗಿ ಹೇಳಿಕೊಡುತ್ತಾ ಕಣ್ಣಿನಲ್ಲಿ ನೀರು ತಂದುಕೊಳ್ಳುತ್ತಿದ್ದರು. ನಾನು ಆಗ, ಅಜ್ಜಯ್ಯ ! ನೀನೇಕೆ ಅಳುತ್ತಿಯಪ್ಪಾ ! ನಿನಗೇನಾದರೂ ತಿಂಡಿಕೊಡಲೇ ? ಎಂದು ಹೇಳಿ ಕೂಡಲೇ ನಮ್ಮ ಅಜ್ಜಿಯ ಒಳಿಗೆಹೋಗಿ, ಅಜ್ಜಿ ! ಅಜ್ಜಯ್ಯನು ಆಳುತಿದ್ದಾನೆ ! ಪಾಪ! ಅವನಿಗೇನಾದರೂ ತಿಂಡಿಇದ್ದರೆ ಕೊಡೆ, ಎಂದು ಪೀಡಿಸಿ ಒಂದಿಷ್ಟು ಹುರಿಟ್ಟನ್ನೋ, ಅರಳನ್ನೋ, ಅವಲಕ್ಕಿಯನ್ನೋ ಈಸಿತಂದು ಅವನ ಮಡುಲಿಗೆ ಕಟ್ಟಿ, ಅಜ್ಜಯ್ಯ! ಅಳಬೇಡಪ್ಪ ! ಇದನ್ನು ತಿನ್ನು. ಎಂದುಹೇಳಿಬಿಡುತಿದ್ದೆನು. ನನ್ನ ಈ ವಿಚಿತ್ರವಾದ ಆಟವನ್ನು ನೋಡಿ ಮನೆಯವರೆಲ್ಲರೂ ನಗುತ್ತಿದ್ದರಲ್ಲದೆ ನನ್ನನ್ನು ವಿಶೇಷವಾಗಿ ಮುದ್ದಿಸತ್ತಲೂ ಇದ್ದರು. ಅಜ್ಜಯ್ಯನಾದರೋ ಕಥೆಯನ್ನು ಅಷ್ಟಕ್ಕೆ ಸಾಕುಮಾಡಿ ನನ್ನ ಆಟಕ್ಕಾಗಿ ಸಂತೋಷಿಸಿ, ನನ್ನನ್ನು ಮುದ್ದಿಸಿ ಪುನಃ ಬಾಯಿ ಪಾಠ ಹೇಳಿಕೊಡುವುದಕ್ಕೆ ಆರಂಭಿಸುತ್ತಿದ್ದನು. ನಾನೂಬೇಜಾರಾಗುವವರಿಗೆ ಹೇಳಿಸಿಕೊಳ್ಳುತ್ತ ಇದ್ದು ಬೇಜಾರಾದ ಮೇಲೆ ಅಜ್ಜಯ್ಯನನ್ನು ಲಕ್ಷಿಸದೆ ಅಡಿಗೆ ಮನೆಯಕಡೆ ಓಡಿಹೋಗಿ ನನ್ನ ಅಮ್ಮನನ್ನು ಹಿಂಸೆ ಮಾಡಲಾರಂಭಿಸಿ ಏನಾದರೂ ಹಟದಿಂದ ಚುಡಿಹಿಡಿದು ಆಳುತ್ತಿದ್ದೆನು. ಆಗ ನಮ್ಮ ಮನೆಯಲ್ಲಿ ಮಗುವೆಂದರೆ ನಾನೇ.ನನ್ನನ್ನು ಎತ್ತಿಕೊಳ್ಳುವುದಕ್ಕೆ ಯಾರಾದರೊಬ್ಬರು ಸಿದ್ಧವಾಗಿಯೇ ಇರುತ್ತಿದ್ದರು. ನಮ್ಮ ಅಪ್ಪನಂತೂ ನನ್ನನ್ನು ದಿನದಿನದಲ್ಲೂ ಬೆಳಿಗ್ಗೆ ಎಂಟುಗಂಟೆಗೆ ಎತ್ತಿಕೊಂಡುಹೋಗಿ ನಮ್ಮ ಊರಿನಲ್ಲಿನ ಪ್ರಸಿದ್ಧವಾದ ಅಪ್ಪಯ್ಯನ ಹೋಟಲಿನಲ್ಲಿ ಒಂದು ರವೆ ದೋಸೆಯನ್ನೂ ಅರ್ಧಲೋಟ ಕಾಪಿಯನ್ನೂ ಕೊಡಿಸುತ್ತಿದ್ದನು. ಇದಲ್ಲದೆ ನನ್ನನ್ನು ಯಾರು ಎತ್ತಿಕೊಂಡಾಗೂ ಏನಾದರೂ ಒಂದಿಷ್ಟು ರುಚಿಯಾದ ತಿಂಡಿಯನ್ನು ತಿನ್ನಿಸುತ್ತಿದ್ದರು. ನಾನಂತೂ ತಂಗೂಳನ್ನು ತಿಂದವಳೇಅಲ್ಲ.ಈ ರೀತಿ ಮೇಲೆಮೇಲೆ ನಾನು ತಿಂಡಿ ತಿಂದುಬಿಡು ತ್ತಿದ್ದುದರಿಂದ ಬೆಳೀಗೆದ್ದರೆ ನನಗೆ ಅಜೀರ್ಣವೂ, ಜ್ವರವೂ, ಆಮಶಂಕೆಯೂ, ಭೇದಿಯೂ ಪ್ರಾಪ್ತವಾಗಿ ಬದುಕುವುದೇ ಕಷ್ಟವಾಗಿ ಹೋಗುತ್ತಿತ್ತು. ಅಂತಹ ಸಮಯದಲ್ಲೆಲ್ಲಾ ನಮ್ಮ ತಾಯಿಯು ನನಗೆ ಚಿಟಿಕಿ ಹಾಕಬೇಕೆಂದು ಮುಷ್ಕರಮಾಡಿ (ಎಕ್ಕಡದ ಬಾರನ್ನು ಬೆಂಕಿಯಲ್ಲಿ ಚನ್ನಾಗಿ ಕಾಯಿಸಿ ಹುಬ್ಬು ಗಳ ನಡುವೆ, ತಲೆಗಳ ಎರಡುಪಕ್ಕ, ಇನ್ನೆಲ್ಲಾದರೂ ಒಂದೆರಡು ಕಡೆ ರಕ್ಷೆಯನ್ನು ಹಾಕುವುದಕ್ಕೆ ಚಿಟಿಕಿಎಂದು ಹೆಸರು.) ಈ ಚಿಟಿಕಿ ಚಿಕಿತ್ಸೆಯನ್ನು ತಪ್ಪದೆ ಮಾಡುತ್ತಿದ್ದರು, ಹೀಗೆ ಪದೇ ಪದೇ ಪ್ರಾಪ್ತವಾಗುತ್ತಿದ್ದುದರಿ೦ದ ನನಗೆ ಔಷಧಸೇವನ ಚಿಟಿಕಿಚಿಕಿತ್ಸೆ,ಇವುಗಳ ಪ್ರಯೋಗದಿಂದ ಕ್ರಮಕ್ರಮವಾಗಿ ನಿಶ್ಶಕ್ತಿಯಾಗುತ್ತ ಬಂದಿತಲ್ಲದೆ ನಾನು ನಿತ್ಯ ರೋಗಿಯಾಗಿ ನರಳು
ಪುಟ:ನನ್ನ ಸಂಸಾರ.djvu/೧೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.