ನನ್ನ ಸ೦ಸ್ತಾರ ೩
ತ್ತಲೇ ಇದ್ದೆನು. ಹೀಗೆಯೇ ನನಗೆ ಎಂಟುವರ್ಷ ಕಳೆದು ಹೋಯಿತು. ಇಷ್ಟು ಹೊತ್ತಿಗೆ ನನಗೆ ಸ್ವಬುದ್ಥಿಯು. ಸ್ವಲ್ಪಸ್ವಲ್ಪವಾಗಿ ತಿಳಿಯುತ್ತ ಬಂತ. ನಮ್ಮ ತಾತನು ನನ್ನನ್ನು ವಿದ್ಯಾಭ್ಯಾಸಕ್ಕಾಗಿ ಪಾಠಶಾಲೆಗೆ ಒಂದೆರಡು ವರ್ಷಕಾಲಕಳುಹಿಸುತ್ತಿದ್ದರು. ಹತ್ತು ವರ್ಷ ತುಂಬಿದೊಡನೆಯೇ ನನ್ನನ್ನು ಆ ಪಾಠಶಾಲೆಯಿಂದಲೂ ತಪ್ಪಿಸಿಬಿಟ್ಟರು. ಇಷ್ಟು ಹೊತ್ತಿಗೆಸರಿಯಾಗಿ ನಮ್ಮ ಗೃಹಕೃತ್ಯದಲ್ಲಿ ಅನೇಕ ಸಂಕಟಗಳು ಪ್ರಾಪ್ತವಾದುವು. ಮೊದಲು ನಮ್ಮ ಅಜ್ಜಿ ಹೋಗಿಬಿಟ್ಟಳು. ಅದಾದ ಎರಡು ತಿಂಗಳ ಮೇಲೆ ನಮ್ಮ ಸೋದರತ್ತೆಯೊಬ್ಬಳು ಗತಿಸಿಹೋದರು. ಇದು ಆದ ಆರುತಿಂಗಳಿಗೆ ನನ್ನ ಚಿಕ್ಕಪ್ಪನೂ ಅದು ಕಳೆದ ಎಂಟು ತಿಂಗಳಿಗೆ ನನ್ನ ದೊಡ್ಡಪ್ಪನೂ ಪರಲೋಕಕ್ಕೆ ಪ್ರಯಾಣ ಬೆಳಸಿಬಿಟ್ಟರು. ಈ ಸಮಯದಲ್ಲಿ ನಮ್ಮ ತಾತನಿಗೆ ಎಷ್ಟು ಮಟ್ಟಿನ ಮನಶ್ಯಾ೦ತಿ ಯಿರಬಹುದೋ ವಾಚಕಿಯರೇ ಭಾವಿಸಿ ನೋಡಬೇಕು. ಸತ್ತವರಿಗೆ ಕರ್ಮಾಂತರಗಳನ್ನು ಮಾಡಿ ನಮ್ಮ ತಾತನು ಚೇತರಿಸಿಕೊಳ್ಳುವ ಹೊತ್ತಿಗೆ ಎರಡುವರ್ಷಕಾಲ ಕಳೆದುಹೋಯಿತು. ಮನಸ್ಸಂತಾಪದಿಂದಲೂ, ದಾರಿದ್ರ್ಯದಿ೦ದಲೂ, ಅವಶ್ಯಕವಾಗಿ ಆಗಬೇಕಾಗಿದ್ದ ಕೆಲಸಗಳಿಗಾಗಿ ವಿಶೇಷ ಸಾಲಮಾಡಿದುದರಿಂದಲೂ ನಮ್ಮ ತಾತನು ಕೊರಗಿಕೊರಗಿ ಅರ್ಧವಾಗಿ ಹೋದನು.
ಈಗ ನಮ್ಮ ಮನೆಯಲ್ಲುಳಿದವರು, ನಾನು, ನಮ್ಮ ತಂದೆ, ನಮ್ಮ ತಾಯಿ, ನಮ್ಮ ತಾತ, ಈ ನಾಲ್ಕು ಮಂದಿ ಮಾತ್ರ. ಈ ಮಧ್ಯದಲ್ಲಿ ನಮ್ಮ ತಾಯಿಯು ನನ್ನ ಹಿಂದೆ ಎರಡು ಮೂರು ಮಕ್ಕಳನ್ನು ಪ್ರಸುವಿಸಿ, ಅವು ಒಂದೊಂದು ವರ್ಷಜೀವಿಸಿದ್ದು ಮೃತವಾಗಿ ಹೋಗಿದ್ದುವು. ಈ ಕಾರಣಗಳಿಂದ ನಮ್ಮ ತಂದೆಗೂ ತಾತನಿಗೂ ವಿಶೇಷ ದುಃಖಪ್ರಾಪ್ತಿಯಾದುದಲ್ಲದೆ ಕ್ರಮವಾಗಿ ವೈರಾಗ್ಯವು ತಲೆದೋರಲಾರಂಭಿಸಿತು. ಆ ಸಮಯದಲ್ಲಿ ನಮ್ಮ ತಾತನು ಕೋರ್ಟಿನಲ್ಲಿ ಹನ್ನೆರಡು ರೂಪಾಯಿ ತಲಬುಳ್ಳ ಒಂದು ನೌಕರಿಯಲ್ಲಿದ್ದನು, ನಮ್ಮ ತಂದೆಗೂ ಹದಿನೈದು ರೂಪಾಯಿ ತಲಬುಳ್ಳ ಒಂದು ಹುದ್ದೆ ಇದ್ದಿತು. ನಮ್ಮ ತಂದೆಗೆ ಬರುತ್ತಿದ್ದುದು ಹದಿನೈದೇ ರೂಪಾಯಿಗಳಾದರೂ ಅವರ ತಿಂಗಳುಗಟ್ಲೆ ವೆಚ್ಚವು ಮೂವತ್ತು ರೂಪಾಯಿಗಳಿಗೆ ಮೀರಿ ಹೋಗುತ್ತಿತ್ತು, ಇವುಗಳಲ್ಲಿ ಮುಕ್ಕಾಲು ಪಾಲು ಹಣವು ಅವರ ಉಡುಪಿಗೂ ತಿಂಡಿಗೂ ಖರ್ಚಾಗುತ್ತಿತ್ತು. ಉಳಿದ ಕಾಲುಪಾಲು ಹಣವನ್ನು ಅವರು ಮನೆಗೆ ಗೃಹಕೃತ್ಯಕ್ಕೆಂದು ನಾಲ್ಕು ತಿಂಗಳೀಗೊಮ್ಮೆ ಯಾವಾಗಲೋ ಒಂದು ಬಾರಿ ತಂದು ಕೊಡುತ್ತಿದ್ದರು.
ಈ ಕಾರಣದಿಂದ ಕುಟುಂಬ ರಕ್ಷಣಭಾರವು ನಮ್ಮ ತಾತನ ತಲೆಯ ಮೇಲೆಯೇ ವಿಶೇಷವಾಗಿ ಬೀಳುತ್ತಿತ್ತು, ನಮ್ಮ ತಂದೆಯು ಇಷ್ಟು ದುಂದುವೆಚ್ಚವನ್ನು ಮಾಡುತ್ತಿ