ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನನ್ನ ಸಂಸಾರ 5 ಕಟ್ಟಿಕೊಂಡು ದುಡಿವ ಎತ್ತಿನಂತೆ ದುಡಿಯುತ್ತಿದ್ದೆನು, ನಮ್ಮ ತಾಯಿಗೆ ದೇಹಸ್ಥಿತಿಯೇ ಸರಿಯಾಗಿರಲಿಲ್ಲ. ಈ ಕಾರಣದಿಂದ ನನ್ನ ತಾಯಿಯನ್ನು ನನ್ನ ಮಾತಾಮಹನು ತಮ್ಮ ಊರಾದ "ಸರ್ವಂಸಹಾಗ್ರಾಮ ” ಕ್ಕೆಕರದುಕೊಂಡು ಹೋದನು. ಅಲ್ಲಿಗೆ ಹೋದ 2-3 ತಿಂಗಳಲ್ಲೇ ನಮ್ಮ ತಾಯಿಗೆ ಸಂಪೂರ್ಣವಾಗಿ ಆರೋಗ್ಯವುಂಟಾಯಿತು. ಇಷ್ಟು ಹೊತ್ತಿಗೆ ಸರಿಯಾಗಿ ನಾನು ಖಾಯಿಲೆ ಬಿದ್ದು ಕೊಂಡೆನು. ನನಗೆ ವಾಸಿಯಾಗ ವುದೂ ಆರುತಿಂಗಳು ಹಿಡಿಯಿತು. ಈ ವಿಧವಾದ ನಿತ್ಯ ರೋಗದಿಂದ ನಾನು ದಿನೇದಿನೇ ಕಂಗೆಟ್ಟು ಕೃಶಳಾಗುತ್ತೆ ಬಂದೆನು. ವಾಚಕಿಯರೆ ! ಇನ್ನು ನಾನು ಈ ರಗತಿಗಳನ್ನೇ ಮುಂದೆಯೂ ಬರೆಯುತ್ತ ಹೋದರೆ ನಿಮಗೆ ಬಹುವಾಗಿ ಬೇಸರವುಂಟಾಗಬಹುದು, ಆದುದರಿಂದ ಮುಂದೆ ನನ್ನ ವಿವಾಹಕ್ಕಾಗಿ ನಡೆದ ಪ್ರಯತ್ನಗಳನ್ನು ಸ್ವಲ್ಪ ಪ್ರಸ್ತಾಪಿಸುವೆನು. ನನಗೆ ಈಗ ಹನ್ನೆರಡು ವರ್ಷತುಂಬಿ ಮೇಲೆ ಆರು ತಿಂಗಳು ಕಳೆದು ಹೋಗಿ ದ್ದಿತು. ನಮ್ಮ ಹಿಂದೂ ನಮಾಜದಲ್ಲಿ ಅದರಲ್ಲೂ - ಬ್ರಾಹ್ಮಣವೃಂದದಲ್ಲಿ, ಹೆಣ್ಣು ಮಕ್ಕಳಿಗೆ ಎಂಟು ವರ್ಷಕ್ಕೆ ಸರಿಯಾಗಿ ವಿವಾಹಮಾಡದಿದ್ದರೇ ಅಂತಹ ಕನ್ಯಾವಿತನು ಕಂಡವರ ಬಾಯಿಗೆ ಬೀಳಬೇಕಾಗುವುದೆಂಬ ವಿಷಯವು ನಿಮಗೆಲ್ಲಾ ತಿಳಿದೇ ಇದೆ. ಇದಿರಲಿ, ಈಗಣ ಕಾಲದಲ್ಲಿ ಪುರುಷ ಸಂಖ್ಯೆಗಿಂತಲೂ ಸ್ತ್ತ್ರೀಸಂಖ್ಯೆಯೂ ನಾಲ್ಕರಷ್ಟು ಹೆಚ್ಚಾಗುತ್ತಾ ಬಂದಿದೆ ಅದರಲ್ಲೂ, ನಮ್ಮ ಬ್ರಾಹ್ಮಣ ವೃಂದದಲ್ಲಿ ವಿವಾಹಕ್ಕೆ ನೆರೆ ದಿರುವ ಕನ್ಯಾಸಂಖ್ಯೆ ಅತ್ಯಧಿಕ. ಈ ಕನ್ಯೆಯ ರಿಗೆಲ್ಲಾ ಅನುರೂಪರೂ, ಶ್ರೇಷ್ಟರೂಆದ, ಪತಿಗಳು ದೊರೆವುದು ತುಂಬಾ ಅಸಂಭವ. ಭಾಗ್ಯವಂತರ ಮನೆ ಹೆಣ್ಣುಮಕ್ಕಳ ಗತಿಯೇ ಹೀಗಾದಮೇಲೆ ಗರ್ಭದರಿದ್ರರಾದವರ ಮನೆಯ ಹೆಣ್ಣುಗಳನ್ನು ಕೇಳುವರಾರು ? ಅವರ ಮನೆಯ ಕಡೆ ಸುಳಿವುದು ಸಹ ಇಲ್ಲ. ಈ ವಿಧವಾದ ವರಾಭಾವದಿಂದಲೇ ವೃದ್ಧ ವಿವಾಹವು ವಿಶೇಷತ: ಬಾರಿಯಲ್ಲಿ ಬರಲು ಕಾರಣವಾಯಿತು. ಸರಿಯಾದ ವರನು ಸಿಕ್ಕಲಿಲ್ಲವಲ್ಲಾ, ಎಂಬ ಚಿಂತೆಯಿಂದಲೂ, ಹುಡುಗಿಯು ಎಲ್ಲಿ ಬೇಗ ದೊಡ್ಡ ವಳಾಗಿಬಿಡುವಳೋ ಎಂಬ ಭಯದಿಂದಲೂ, ಯಾವನಾದರೂ ಒಬ್ಬ ಪರುಷಮಾತ್ರನು ಸಿಕ್ಕಿದರೆ ಸಾಕೆಂದು ಹೀನವರನಿಗೋ ವೃದ್ದವರನಿಗೋ ಕನ್ಯೆಯರನ್ನು ಕೊಟ್ಟು ಮದುವೆ ಮಾಡುವುದು ಪ್ರಚಾರಕ್ಕೆ ಬರಬೇಕಾಯಿತು. ಉಪಪನ್ನರಾದವರ, ಯೊಗ್ಯರಾದವರ, ವಿದ್ಯಾವಂತರ ಮನೆಗೆ ಕೊಡೋಣವೆಂದರೆ ಅವರ ಜಂಭವು ಆ ಸಮಯದಲ್ಲಿ ವಿವರಿಸ ಲಸದಳ.ಒಂದು ಸಾವಿರವೋ-ಎರಡು ಸಾವಿರವೋ ವರದಕ್ಷಣೆಯನ್ನು ಕೊಟ್ಟರೆ ತಾವು ತಮ್ಮ ಹುಡುಗನಿಗೆ ತಂದುಕೊಳ್ಳುವೆನೆಂದೂ ಇಲ್ಲವಾದರೆ ಆ ಮಾತೇ ಬೇಡ