೪ ಕಾದಂಬರೀ ಸಂಗ್ರಹ
ದ್ದರೂ ನಮ್ಮ ತಾತನು ಒಂದುದಿನವಾದರೂ ಅವರನ್ನು ಗದರಿಸಿಕೊಳ್ಳುತಲಿರಲಿಲ್ಲ. ಏಕಂದರೆ ಅವರು ಸಂಸಾರದಲ್ಲಿ ಬಲು ನೊಂದುಹೋಗಿದ್ದರಲ್ಲದೆ ಈ ಒಬ್ಬ ಮಗನಿಗಾಗಿ ಪ್ರಾಣವನ್ನಿಟ್ಟು ಕೊಂಡಿದ್ದರು. ಆದುದರಿಂದ, ಅವನು ಹೇಗೆ ಬೇಕಾದರೂ ಇದ್ದು ಕೊಳ್ಳಲಿ ! ಜೀವಗೊರಸೆ ಇದ್ದರೆ ಸಾಕೆಂದು ಹೇಳಿಬಿಡುತ್ತಿದ್ದರು. ನಮ್ಮ ತಾತನಿಗೆ ಪಿತ್ರಾರ್ಜಿತವಾದ ನಾಲ್ಕು ಎಕರೆ ತರೀಜಮಿನಿನಲ್ಲಿ ನಾಲ್ವತ್ತು ಖಂಡುಗ ಭತ್ತವು ಬರುತ್ತಿದ್ದುದರಿ೦ದ ನಮ್ಮ ಸಂಸಾರ ನಿರ್ವಹಣಕ್ಕಾಗಿ ಅಷ್ಟೇನೂ ಶ್ರಮಪಡಬೇಕಾದ ಅಗತ್ಯವಿರಲಿಲ್ಲ. ನಮ್ಮ ತಾತನಿಗೆ ಸಾಲಗಾರರ ಬಾಧೆ ಹೆಚ್ಚಾದುದರಿಂದ ತಮ್ಮ ಪೂರ್ವಪಿತ್ಶ ಗಳಿ೦ದಾಜಿ೯ಸಲ್ಪಟ್ಟ ಭೂಧನದಲ್ಲಿ ಎರಡು ಎಕರೆಗಳನ್ನು ಮಾರಿ ಸಾಲವನ್ನು ತೀರಿಸಿ ಬಿಟ್ಟರು. ಸಾಲತೀರದ ಮೇಲೆ ನಮ್ಮ ತಾತನಿಗೆ ಮನಸ್ಸಿಗೆ ಒಂದು ಬಗೆಯಾದ ಶಾಂತಿಯುಂಟಾಯಿತು. ಇದು ನಡೆವ ಕಾಲದಲ್ಲಿ ನಮ್ಮ ತಾತನಿಗೆ ಐವತ್ತು ವರ್ಷವಯಸ್ಸು, ನಮ್ಮ ತಾತನಿಗೆ ದಿನೇದಿನೆ ವೈರಾಗ್ಯವು ಹೆಚ್ಚುತ್ತಬರಲು ತಮ್ಮ ಉದ್ಯೋಗಕಾಲದಿನದ ಕಡಮೆ ಸಮಯಗಳನ್ನೆಲ್ಲಾ ಸಾಧು ಸತ್ಪುರುಷ ಸಂಭಾಷನಾದಿಗಳಿ೦ದಲೂ ಈಶ್ವರ ನಾಮಸ್ಮರಣದಿಂದಲೂ ನೂಕುತ್ತಿದ್ದರು. ಕೇವಲರಸಿಕರಾದ ನಮ್ಮ ತಂದೆಯವರಿಗೆ ನಮ್ಮ ತಾತನ ಈ ನಡತೆಯು ಸರಿದೊರಲಿಲ್ಲ. ನಿಕರಣವಾಗಿ ನಮ್ಮ ತಾತನನ್ನು ಏನಾದರೊಂದು ನೆವದಿಂದ ಜಗಳಕ್ಕೆ ಕರೆಯುತ್ತಲೇ ಇದ್ದರು. ನಮ ತಾತನು ಒಂದನ್ನೂ ಮನಸ್ಸಿಗೆ ಹಚ್ಛಿ ಕೊಳ್ಳದೆ ತಮಗೆ ಬಂದ ಸಂಬಳವನ್ನು ಮಗನವಶಕ್ಕೆ ಕೊಟ್ಟೂಬಿಟ್ಟು ತಾವು ಅಡಿಗೆಯಾಗುವ ಹೊತ್ತಿಗೆ ಸ್ಮಾನಾಸ್ಪಿ ಕ, ದೇವತಾ ರ್ಚನ ವೈಶ ದೇವಗಳನ್ನು ಭಕ್ತಿಯಿಂದ ಆಚರಿಸಿ ಎಲ್ಲರೊಡನೆ ತಾವು ಭೋಜನಮಾಡಿ ಪುನಃ ತಮ್ಮ ವ್ಯಾ ಸಂಗದಲ್ಲಿ ನಿರತರಾಗುತ್ತಿದ್ದರು. ಈ ಮಧ್ಯ ದಲ್ಲಿ ನಮ್ಮ ತಾಯಿಯು ಗರ್ಭಿಣಿಯಾಗಿ, ಏಕಾದಶಮಾಸ ಪರಿಪೂರ್ಣವಾದ ಬಳಿಕ ಒಂದು ಗಂಡು ಕೂಸನ್ನು ಪ್ರಸುವಿಸಿದ್ದರು. ಆ ಮಗುವಿಗೆ ಈಗ ಒಂದು ವರ್ಷ ತುಂಬುತ್ತಿದ್ದಾಗ್ಯೂ ನಮ್ಮ ತಾಯಿಗೆ ಬಾಣಂತಿತನ ಮಾತ್ರ ಸಂಪೂರ್ಣವಾಗಿರಲಿಲ್ಲ, ಮನೆಯಲ್ಲಿ ಮಾಡುವವ ರಾರೂದಿಕ್ಕಿಲ್ಲದ್ದರಿಂದ ಸಮಸ್ತ ಗೃಹಕೃತ್ಯವನ್ನೂ ನಾನೇ ನಡಿಸಿಕೊಂಡು ಹೋಗಬೇಕಾಗಿ ಬಂದಿತು. ಮನೆಯಲ್ಲಿ ಅನ್ನಕ್ಕೆ ಇಷ್ಟು ಕಷ್ಟವಾದುದನ್ನೂ ಗೃಹಕೃತ್ಯದ ತೊಂದ ರೆಯನ್ನೂ ನೋಡಿ ನಮ್ಮ ತಾತನು ಬೇರೆ ಒಂದು ಕಡೆಯಲ್ಲಿ ಊಟಮಾಡುತ್ತಿದ್ದರು. ನಮ್ಮ ತಂದೆಯಂತೂ ಮನೆಗೇ ಬರುತ್ತಿರಲಿಲ್ಲ, ನಮ್ಮ ತಾತನು ಆಗಾಗ್ಗೆ ಗೃಹಕೃತ್ಯಕ್ಕೆ ಬೇಕಾಗುವ ಸಾಮಾನುಗಳನ್ನು ತಂದು ಹಾಕುತ್ತ ಮನೆ ಯೋಗಕ್ಷೇಮವನ್ನು ವಿಚಾರಿಸಿ ಕೊಂಡು ಹೋಗುತ್ತಾ ಇದ್ದರು. ನಾನಾದರೋ ಗೊಣಗುಟ್ಟಿ ಕೊಂಡು, ಮೂಗಿಗೆ ಕವಡೆ