ಈ ಪುಟವನ್ನು ಪರಿಶೀಲಿಸಲಾಗಿದೆ
ಕಾದಂಬರೀಸಗ್ರಹ ೧೬. ತಗಳನ್ನೂ, ಗ್ರಾಮಗಳನ್ನೂ, ಜನಗಳನ್ನೂ, ಪಶುಗಳನ್ನೂ, ನೋಡುತ್ತಾ ಉಪನಿಷತ್ಸವ್ಟ ರೂಪಿಣಿಯಾದ ಗೋವನ್ನು ಎಳೆಯುತ್ತಿರುವ ವಾದಿಗಳ ದೆಸೆಯಿಂದ ಸಂರಕ್ಷಿಸಲು ಕೋಲು ಬೇಕಾಗಲು, ಈ ದಂಡವನ್ನು ಧರಿಸಿರುವರೋ ಎಂಬಂತೆ ದಂಡಧಾರಿಗಳಾಗಿ ಹೊರಟು ಗೋವಿಂದಭಗವತ್ಪಾದರ ತಪೋವನವನ್ನು ಸಾಯಂಕಾಲಕ್ಕೆ ಸರಿಯಾಗಿ ಸೇರಿ, ಚಂದ್ರಪ್ರಭವಾನದಿಯ ತೀರದಲ್ಲಿ ನಿಂತರು.
ಆಚಾರ್ಯರು, ಸಮೀಪದಲ್ಲಿ ಒಂದು ಗುಹೆಯೊಳಗೆ ಯೋಗಾರೂಢರಾಗಿ ಕುಳಿತಿರುವ ಗೋವಿಂದಭಗವತ್ಪಾದರನ್ನು ಕಂಡು, ಅಲ್ಲಿಗೆ ಹೋಗಿ ಗೋವಿಂದಭಗತ್ಪಾದರನ್ನು ಬಹಳವಾಗಿ ಸ್ತುತಿಸಲು, ಅವರು ಬಹಿರ್ಮುಖರಾದಮೇಲೆ ಶಂಕರಯತಿಯಂ ಕುರಿತು"ನೀನು ಯಾರು" ಎನ್ನಲು ಶಂಕರರು "ಸ್ವಾಮಿ ! ನಾನು ಪೃಥಿವಿಯಲ್ಲ; ಜಲವಲ್ಲ; ತೇಜಸ್ಸಲ್ಲ; ವಾಯುವಲ್ಲ; ಆಕಾಶವಲ್ಲ; ತದ್ಗುಣೇಂದ್ರಿಯಗಳೂ ಅಲ್ಲ; ಆನಂದಸ್ವರೂಪಿಯಾದ ಪರಶಿವನೇ ನಾನಾಗಿದ್ಧೆನೆ ”ಎಂದುತ್ತರವಿತ್ತರು. ಅದನ್ನು ಕೇಳಿ ಗೋವಿಂದಭಗತ್ಪಾದರು "ಶಂಕರಯತಿಯೇ ! ನಿನ್ನನ್ನು ಶಂಕರನೆಂಬದಾಗಿ ತಿಳಿದಿರುವೆನು; ನೀನು ಲೋಕಾನುಗ್ರಹಕ್ಕಾಗಿ ಅವತರಿಸಿರುವಿ ಎಂಬುದನ್ನೂ ತಿಳಿದಿರುವೆನು; ನಾನೇ ನೀನಾಗಿರುವಲ್ಲಿ ಹೇಳಬೇಕಾದ್ದೇನೂ ಇರುವುದಿಲ್ಲ. ಆದರೂ, ಶುಕ್ರಾಚಾರ್ಯರ ಶಿಷ್ಯರಾದ ಗೌಡಪಾದಮಹರ್ಷಿಗಳಿಂದ ನನಗೆ ಉಪದೇಶಿಸಲ್ಪಟ್ವಿರುವ ಬ್ರಹ್ಮವಿದ್ಯಾರಹಸ್ಯವನ್ನು ನಿನಗೆ ಉಪದೇಶಿಸುತ್ತೆನೆ” ಎಂದು ಹೇಳಲು ಶಂಕರದೇಶಿಕರು ಓಂಕಾರವನ್ನುಚ್ಚರಿಸಿ ಗುರುಪಾದನ್ಯಸ್ತಮಸ್ತಕರಾದರು. ಆಗ ಗುರುಗಳು ಶಿಷ್ಯನನ್ನು ಮೇಲಕ್ಕೆತ್ತಿ, ಕ್ರಮಸನ್ಯಾಸವಿತ್ತು, ಚತುರ್ವೆದ ಸಾರಗಳಾದ ಅನೇಕ ಮಹಾಮಂತ್ರಗಳನ್ನೂ ಬ್ರಹ್ಮವಿದ್ಯಾರಹಸ್ಯವನ್ನೂ, ರಾಜ ಯೋಗವಿದ್ಯಾರಹಸ್ಯವನ್ನೂ ಉಪದೇಶಿಸಿದರು. ಶಂಕರರು ಗುರುಗಳ ಸಮಿಾಪದಲ್ಲೆ ಸೇವೆ ಮಾಡಿಕೊಂಡು ಬಹಳಕಾಲ ವಿದ್ದರು. ಅಲ್ಲಿದ್ದ ಇತರ ಮಹರ್ಷಿಗಳು ಶಂಕರರನ್ನು 'ಪರಮಹಂಸ' ರೆಂದು ಸ್ತುತಿಸುತಿದ್ದರು. ಒಂದಾನೊಂದು ಕಾಲದಲ್ಲಿ ಮಹರ್ಷಿಗಳೆಲ್ಲರೂ ಚಾತುರ್ಮಾಸ್ಯವ್ರತವಂ ಕೈಕೊಂಡು ಸಮಾಧಿನಿಷ್ಠರಾಗಿರುವ ಕಾಲದಲ್ಲಿ ಚಂದ್ರಪ್ರಭವಾ (ನರ್ಮಬಾ) ನದಿಯು ಪೂರ್ಣಪ್ರವಾಹದೊಡನೆ ದಡಮಿಾರಿ ಹರಿಯುತ್ತಿದ್ದಿತು. ಪ್ರವಾಹವು ಕ್ರಮೇಣ