ಈ ಪುಟವನ್ನು ಪರಿಶೀಲಿಸಲಾಗಿದೆ

 ಶಂಕರಕಥಾಸಾರ ೧೭ ಹೆಚ್ಚಾಗಿ, ಚಾತುರ್ಮಾಸ್ಯಸಂಕಲ್ಪವಂ ಕೈಗೊಂಡಿದ್ದ ಯತಿಗಳ ಬ್ರಹ್ಮಸತ್ರಶಾಲೆಗಳ ಕಡೆಗೂ, ವೇದಪಾರಾಯಣ ಮಾಡುತ್ತಿದ್ದ ಬ್ರಹ್ಮಬೃಂದಗಳ ಕಡೆಗೂ ಬಹಳ ರಭಸದಿಂದ ಬರುತ್ತಿತ್ತು.

    ಅದನ್ನುಕಂಡು ಯತಿಗಳು ಓಡಿಹೋಗುವುದಕ್ಕೂ ಅವಕಾಶವಿಲ್ಲದೇ ಕೂಗಿ ಕೊಳ್ಳಲಾರಂಭಿಸಲು ಯೋಗಾರೂಢರಾಗಿದ್ದ ಶಂಕರದೇಶಿಕರು, ಸಮಾಧಿನಿಷ್ಠರಾಗಿರುವ ಗುರುಗಳಿಗೆ ಅರಿಕೆಮಾಡುವುದರಲ್ಲಿ ಕಾಲಾತಿಕ್ರಮಣವಾಗುವುದೆಂದರಿತು, ತಮ್ಮಕಮಂ ಡಲುವನ್ನು ಅಭಿಮಂತ್ರಿಸಿ ಪ್ರವಾಹಕ್ಕಡ್ಡಲಾಗಿಡಲು ಹೆಚ್ಚುನೀರೆಲ್ಲಾ ಆಕಮಂಡಲುವಿನಲ್ಲಿ ಅಡಗಿಹೋಯಿತು.
    ಇದನ್ನು ನೋಡಿ ಅಲ್ಲಿದ್ದ ಬ್ರಾಹ್ಮಣರೆಲ್ಲರೂ 'ಆಗಸ್ತಸ್ಯನೇನಾದರೂ ಈ ರೂಪದಿಂದ ಬಂದಿದಾನೆಯೋ' ಎಂದು ಶಂಕರರನ್ನು ಸ್ತುತಿಸಿದರು.
   ಮತ್ತೊಂದುಕಾಲದಲ್ಲಿ, ನದಿಯಲ್ಲಿ ನ್ನಾನಾಹ್ನಿಕಗಳಂ ಮಾಡಿಕೊಂಡು ಸಿದ್ಧಾ ಶ್ರಮಕ್ಕೆ ಹೋಗುತ್ತಿದ್ದಾಗ ಮಧ್ಯಾಹ್ನ ಭಾನುವಿನ ಚಂಡಕಿರಣಗಳಿಂದ ತಪ್ತರಾಗು ತ್ತಲಿರುವ ಗುರುಗಳಂಕಂಡೇ ಶಂಕರದೇಶಿಕರು ತಮ್ಮ ಶಾಟಿ(ವಸ್ತ್ರ)ಯನ್ನು ಮೇಲ ಕ್ಕೆಸೆಯಲು ಅದು ಛತ್ರದಂತೆ ಗುರುಗಳಿಗೆ ನೆರಳುಮಾಡುತ್ತಾ ಬರುತ್ತಿತ್ತು.
  ಅದನ್ನು ನೋಡಿ ಅಲ್ಲಿದ್ದವರೆಲ್ಲರೂ ಬಹಳ ಆಶ್ವರ್ಯಪಟ್ಟರು.
  ಗೋವಿಂದಭಗವತ್ಪಾದರು, ವ್ಯಾಸರು ತಮಗೆ ಅಪ್ಪಣೆಕೊಡಿಸಿದ ಶಿಷ್ಯನು ಇವನೇ ಎಂತಲೂ, ಮತ್ತು ಇವನು ಬ್ರಹ್ಮಸೂತ್ರಗಳಿಗೆ ಸಿದ್ಧಾಂತಾರ್ಥವಾದ ಭಾಷ್ಯ ಮಾಡುವನೆಂದೂ ಸಂತೋಷಿಸುತ್ತಿದ್ದರು.
  ಅನಂತರ ಗೋವಿಂದಭಗವತ್ಪಾದರು ಶಿಷ್ಯನನ್ನು ಕುರಿತು "ಯತಿಯೇ! ನಾನು ಅತ್ರಿಮಹರ್ಷಿಯು ಮಾಡಿದ ಯಜ್ಞಕ್ಕೆ ಹೋಗಿದ್ದಾಗ ವ್ಯಾಸರನ್ನು ಕುರಿತು 'ಬ್ರಹ್ಮಸೂತ್ರಗಳಿಗೆ ಭಾಷ್ಯವಿದ್ದರೆ ಚೆನ್ನಾಗಿತ್ತು' ಎಂದು ಕೇಳಲು ಅವರು 'ಈಶ್ವರನೇ ಮನುಷ್ಯಾವತಾರವಂಗೈದು ನಿನ್ನಿಂದ ಉಪದಿಷ್ಟನಾಗಿ ಭಾಷ್ಯವಂ ರಚಿಸಿ ಧರ್ಮ ಪ್ರತಿಷ್ಠಾಪನೆಯಂ ಗೈಯುತ್ತಾನೆ' ಎಂದು ಹೇಳಲು, ನಾನು' ಆ ಮನುಷ್ಯರೂಪಿಯಾದ ಶಂಕರನನ್ನು ಕಂಡು ಹಿಡಿಯಲು ಕುರುಹೇನು' ಎನ್ನಲವರು 'ಮಹಾನದೀಪ್ರವಾಹವನ್ನು ಯಾವ ಬಾಲಸನ್ಯಾಸಿಯು ಕಮಂಡಲುವಿನಲ್ಲಿ ಅಡಗಿಸುವನೋ ಅವನೇ ಈಶ್ವರನು' ಎಂದು ಹೇಳಿದರು.ಅದರಂತೆ ನಿನ್ನಲ್ಲಿ ಆ ಲಕ್ಷಣಗಳು ತೋರ್ಪಟ್ಟಕಾರಣ, ನೀನು ಭಾಷ್ಯರಚನೆಯಂಗೈದು ದಿಗ್ವಿಜಯವಂ ಮಾಡಿಕೊಂಡು ಧರ್ಮಸಂಸ್ಥಾಪನೆಯಂಮಾಡಿ ನಮಗೆಲ್ಲಾ ಕೀರ್ತಿಯನ್ನು ತರಬೇಕು" ಎಂದರು.
                                      3