ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನನ್ನ ಸಂಸಾರ ಹಾಗೆಯೇ ಪ್ರೇಗಿನಿಂದ ಒಬ್ಬೊಬ್ಬರು ಸಾಯುವದಕ್ಕೂ ಆರಂಭವಾಗಿತ್ತು. ವಿನಾ ಯಕಶಾಸ್ತ್ರಿಗಳು ಸ್ನೇಗಿಗೆ ಹೆದು ಭಾದ್ರಪದ ಶುದ್ಧ ಬಿದಿಗೆದಿನ ಸಾಯಂಕಾಲ ಹರಪು ರಕ್ಕೆ ಆರು ಮೈಲಿ ದೂರದಲ್ಲಿದ್ದ ತಮ್ಮ ಗ್ರಾಮವಾದ ಕ್ಷೀರಪುರಕ್ಕೆ ಪ್ರಯಾಣಮಾಡಿ ಕೊಂಡು ಹೊರಟುಹೋದರು. ಇವರು ಪ್ರಯಾಣಮಾಡುವುದಕ್ಕೆ ಮರುದಿನಮುಂ ಜೆಯೇ ಮದುವೆಯಾದ ಮನೆಯಲ್ಲಿ ಎರಡು ಇಲಿಗಳು ಸತ್ತುಹೋಗಿದ್ದವು. ಆದುದ ರಿಂದಲೇ ಅವರು ಅಷ್ಟು ತ್ವರೆಯಾಗಿಯೇ ಊರುಬಿಟ್ಟು ಹೋದರು, ಭಾದ್ರಪದ ಶುದ್ಧ ತದಿಗೆ ಚೌತಿ ಇವೆರಡುದಿನವೂ ಊರಿನಲ್ಲೆಲ್ಲರ ಮನೆಯಲ್ಲೂ ಗೌರಿ-ಗಣೇಶ ಹಬ್ಬದ ಸಮಾರಂಭ, ಗಣಪತಿಯನ್ನು ಕೂರಿಸಿದ ವೆಲೆ ವಿಚ್ಛೇಶ್ವರಸಿಗೆ ಮಂಗಳಾರತಿ ಮಾಡಿ ಬಿಟ್ಟ ಹೊರತು ಮನೆಟ್ಟು ಹೋಗುವಹಾಗಿಲ್ಲ, ಊನಲ್ಲಾದರೋ ಪ್ರೇಗು ದಿನೇ ದಿನೇ ಹೆಚ್ಚುತ್ತ ಬಂದು ಬಿಕ್ಕಣಕೇರಿಯಲ್ಲೇ ದಿನವೊಂದಕ್ಕೆ ಎರಡು ಮೂರು ಹೆಣ ಗಳು ಹೋಗಲಾರಂಭವಾಯಿತು. ಜನಗಳಿಗೆ ಬಹು ಗಾಬರಿಯಾದ್ದರಿಂದ ಎಲ್ಲರೂ ಊರ ಹೊರಗೆ ಎರಡು ವೆಲ ದೂರದಲ್ಲಿ ವಟೈ ಜೋಪಡಿಗಳನ್ನು ಕಟ್ಟಿಕೊಂಡು ಅಲ್ಲಿಗೆ ವಾಸಕ್ಕೆ ಹೊರಟುಹೋದರು, ಭಾದ್ರಪದ ಶುದ್ಧ ದಶಮಿಯೋಗೆಊರೆಲ್ಲವೂ ಖಾಲ'ರುವ, ನೀಲಕಂಠಶಾಸ್ತ್ರಿಗಳ ಮನೆ ಯವರೂ ತಮ್ಮ ಮನೆಗೆ ಬೀಗ ಹಾಕಿ ಕೊಂಡು ಗ ಡಿಸಲಿಗೇ ವಾಸಕ್ಕೆ ಹೊರಟುಹೋದರು. ವಿನಾಯಕ ಶಾಸ್ತ್ರಿಗಳ ಮನೆಯವರು ಕ್ಷೀರಪ್ರರಕ್ಕೆ ಪ್ರಯಾಣ ಮಾಡಿದ ವಿಷಯವನ್ನು ಹಿಂದೆಯೇ ಬರೆದಿದೆಯಷ್ಟೆ? ಅವರು ಅಲ್ಲಿಗೆ ಹೋದ ಮೇಲೆ ಒಂದು ತಿಂಗಳಮಗೆ ಕ್ಷೇಮವಾಗಿಯೇ ಇದ್ದರು. ಇಷ್ಟು ಹೊತ್ತಿಗೆ ನವರಾತ್ರಿ ಹಬ್ಬ ಬಂದಿದ್ದಿತು. ನವರಾತ್ರಿ ಪಾದದಿನ ರಾತ್ರಿಯೇ ಏನಾಯಕ ಶಾಸ್ತ್ರಿಗಳು ಒಕ್ಕಲಿದ್ದ ಮನೆಯಲ್ಲಿ ಒಂದು ಇಲಿ ಸತ್ತು ಹೋಯಿತು, ಮನೆಯಮರೆ ಇದನ್ನು ನೋಡಿ ಬಹುಗಾಬರಿಯಾಗಿ ಹೋಯಿತು. ಮಾರನೇ ದಿನವೇ ಬೇರೊಂದು ಮನೆಗೆ ವಾಸ ಹೊರಟು ಹೋದರು. ಅದೇ ದಿನ ಸಾಯಂಕಾಲ ಐದು ಗಂಟೆ ಸಮಯದಲ್ಲಿ ಹೊಸ ಮದವಣಗಿತ್ತಿ ಲಕ್ಷ್ಮೀದೇವಮ್ಮ ನಿಗೆ ಜ್ವರವೂ ತಲೆನೋವೂ ಕಾಣಿಸಿ ಕೊಂಡಿತು, ಮನೆಯವರ ಹೆದರಿ ಕೆಯನ್ನು ಕೇಳಬೇಕೆ ? ವಿನಾಯಕ ಶಾಸ್ತ್ರಿಗಳು ಪೂರ್ವಭಾವಿಯಾಗಿಯೇ ಪ್ರೇಗಿನ ಔಷಧಗಳನ್ನು ಬೇಕಾದಹಾಗೆ ಏರಿಸಿಟ್ಟು ಕೊಂಡಿದ್ದರು, ಅದನ್ನೆಲ್ಲಾ ಜ್ವರ ಬಂದ ಹುಡು ಗಿಗೆ ಕೊಟ್ಟು ದಾಯಿತು. ಮಾರನೇದಿ ಲಕ್ಷ್ಮೀದೇವಮ್ಮನಿಗೆ ಕಂಕುಳು ಸಂದಿಯಲ್ಲಿ ಎರಡು ಗೆಡ್ಡೆಗಳು ಕಾಣಿಸಿಕೊಂಡವು, ಆ ಗ್ರಾಮದವರು ಇದನ್ನು ತಿಳಿದು ಒಟ್ಟು ಗೂಡಿ ಒಂದು ಕ್ಷಣವೂ ತಮ್ಮ ಲನಲ್ಲಿರಲಾಗದೆಂದು ವಿನಾಯಕ ಶಾಸ್ತ್ರಿಗಳ ಮನೆಯ