ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶಂಕರಕಥಾಸಾರ ೫೧

ಸುಮಾರು ಅರ್ಧರಾತ್ರೆಯ ಸಮಯದಲ್ಲಿ ದೇವಿಯು ಬಹಳ ಆರ್ಭಟವನ್ನು ಮಾಡಿ ಕೊಂಡು ಬಂದು ಜಗುಲಿಯಮೇಲಿದ್ದ ಆಚಾರರನ್ನು ನೋಡದೆ ಹೊರಟಳು, ಆಗ ಆಚಾರರು ಅವಳ ಹಿಂದೆಯೇ ಹೊರಟರು.

     ದೇವಿಯು ಊರನ್ನೆಲ್ಲಾ ಸುತ್ತಿ ಎಲ್ಲಿಯೂ ಯಾರನ್ನೂ ಕಾಣದೆ ದೇವಾಲ ಯದ 
   ಹೊರಬಾಗಿಲಿನಲ್ಲಿ ನಿಂತಳು.
 
   ಆಗ ಶಂಕರರು ಆಕೆಗೆ ನಮಸ್ಕರಿಸಿ ನಿಲ್ಲಲು ಆಕೆಯು ಆಚಾರರನ್ನು " ನೀನು ಯಾರು ? ಏಕೆಬಂದೆ ? ನಿನ್ನನ್ನಾರುಬರಹೇಳಿದರು? ” ಎನ್ನಲು ದೇಶಿಕರು "' ಮಾತಃ ! ನಾನು ನಿನ್ನ ಮಗನು ; ಇಲ್ಲಿಗೆ ನಾನಾಗಿಯೇ ಬಂದೆನು ; ಲೋಕರಕ್ಷಕಳಾದ ನಿನಗೆ ಪ್ರಜಾಹಿಂಸೆಯು ಯುಕ್ತವಲ್ಲ ;” ಎಂದರು.
  
      ಅದಕ್ಕೆ ದೇವಿಯು ಸ್ವಲ್ಪ ಶಾಂತಳಾಗಿ " ಎಲೈ, ನೀನು ಹೇಳುವುದು ಸತ್ಯ; ಆದರೆ ಈ ಊರಿನವರು ನನಗೆ ಸಂಪೂರ್ಣಾಹಾರವನ್ನು ಕೊಡರು” ಎನ್ನಲು, ಶಂಕ ರರು : ಅಮ್ಮಾ ! ನೀನು ಜನಗಳಿಂದ ಬೇಕಾದಷ್ಟು ಆಹಾರವನ್ನು ತರಿಸಿಕೊಂಡು ತೃಪ್ತಳಾಗಬೇಕೇ ವಿನಹಾ ಹೀಗೆ ಪ್ರಜಾ ಹಿಂಸೆಮಾಡಕೂಡದು” ಎಂದು ಹೇಳಿ, ಪೀಠ ದಮೇಲೆ ಹೋಗಿ ..ತ ದೇವಿಯ ಪಾದದ ಸಮಿಪದಲ್ಲಿದ್ದ ಕುಂಕುಮವನ್ನು ಚೆಲ್ಲಿ ಶ್ರೀ ಚಕ್ರವಂ ಬರೆದು ಹಿಂತಿರಿಗಿ ಬಂದರು. ಮರುದಿನ ಆ ಅಗ್ರಹಾರಿಕರು ಆಚಾರರಿಗೆ ವಂದಿಸಿ ರಾತ್ರಿ ನಡೆದ ವಿಷಯವನ್ನು ತಿಳಿದು ಆಚಾರರಿಗೆ ವಂದಿಸಿದರು. ಅನಂತರ ಆಚಾರರು ಒಂದು ಶಿಲೆಯಮೇಲೆ ಶ್ರೀ ಚಕ್ರವನ್ನು ಕೆತ್ತಿಸಿ ಅದನ್ನು ದೇವಿಯ ಪಾದದ ಕೆಳಗೆ ಸ್ಥಾಪಿಸಿದರು.
                  ಶೈವಮತಖಂಡನವು.
  ಕಾಂಚಿಯಲ್ಲಿ ಆಚಾರರು ಎರಡು ತಿಂಗಳು ಇರುತ್ತಿರಲು ಅವರ ಸವಿಾಪಕ್ಕೆ ಅದ್ವೈತದ್ರೋಹಿಗಳೂ, ಲಿಂಗಾಂಕಿತಭುಜದ್ವಯರೂ ಆದ ಶೈವರು ತಲೆಯಲ್ಲಿ ತ್ರಿಶೂ ಲವನ್ನೂ, ಲಿಂಗವನ್ನೂ ಇಟ್ಟು ಕೊಂಡು ಹೃದಯ, ನಾಭಿ ಮುಂತಾದ ಸ್ಥಳಗಳಲ್ಲೆಲ್ಲಾ ಲಿಂಗದಿಂದ ಚಿಹ್ನಿತರಾಗಿಬಂದು " ಸ್ವಾಮೀಾ ! ,ಋತಂಸತ್ಯಂ ಪರಂಬ್ರಹ್ಮ......... ವಿಶ್ವರೂಪಾಯವೈನಮಃ ' ಮತ್ತು : ದೌರೂದೂನಂ..........ಶರಣಮಹಂ ಪ್ರಪದ್ಯೆ ' ಇತ್ಯಾದಿ ಶ್ರುತಿವಾಕ್ಯಗಳಲ್ಲಿ ಹೇಳಿರುವಂತೆ ಈಶ್ವರನಲ್ಲಿ ಭಕ್ತಿಯುಳ್ಳವರಾಗಿ ದ್ದರೆ, ಅವರಿಗೆ ಶಿವಲೋಕಪಾಪ್ತಿಯಾಗುತ್ತದೆ ; ಮತ್ತು ಎಲೈ ಯತಿಯೇ ! ಈಶ್ವ ರನು ದೂರ್ವಾಸರನ್ನು ಕುರಿತು ಪರಾತ್ಪರನೂ, ಏಕಾಕ್ಷರರೂಪಿಯೂ ಆದ ನಾನೊ