ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶಂಕರಕಥಾಸಾರ ೫೫ ವೈಷ್ಣವಮತಖಂಡನವು.
ಅನಂತರ ಶಂಕರಭಗವತ್ಪಾದರು ಅನಂತಶಯನಕ್ಕೆ ಹೋಗಿ, ಅಲ್ಲಿದ್ದ ರಾಮ ರಾಜನಿಂದ ವಂದಿಸಲ್ಪಟ್ಟು, ಅಲ್ಲಿ ತಮ್ಮ ಗ್ರಂಥಗಳನ್ನು ಪ್ರಚಾರಮಾಡುತ್ತಿರಲು, ವೈಷ್ಣ ವಾಚಾರತತ್ಪರರೂ, ಶಂಖ, ಚಕ್ರ, ಗದಾ, ಶಾರ್ಬಚಿಹ್ನೆಗಳಿಂದ ಪರಿಚಿಹ್ನಿತರೂ, ತುಲಸೀ ಮತ್ತು ತುಲಸೀಮಣಿಗಳ ಮಾಲೆಗಳನ್ನು ಧರಿಸಿರುವವರೂ, ಹರಿನಾಮಗಳನ್ನು ಜಪಿಸುತ್ತಲಿರುವರೂ, ಗೋಪೀಚಂದನದಿಂದ ಲೇಪಿಸಲ್ಪಟ್ಟ ದೇಹವುಳ್ಳವರೂ, ಕರ್ಣಗಳಲ್ಲಿ ತುಳಸೀಪತ್ರವನ್ನು ಧರಿಸಿ ಅಂಗಾರತಿಲಕವನ್ನು ಇಟ್ಟು ಕೊಂಡವರೂ ಆದ ವಿಷ್ಣು ಶರ್ಮ, ಪದ್ಮನಾಭ, ಕೃಷ್ಣದ್ವೈಪಾಯನ , ವ್ಯಾಸದಾಸ, ವರಾಹಾಚಾರ್ಯ ಎಂಬ ವೈಖಾನಸಾಗಮದಕ್ಷರೂ, ಪಾಂಚರಾತ್ರಾಗಮತತ್ಪರರೂ, ವೇದಮಾರ್ಗವನ್ನು ಅಪಲಾ ಪಿಸುವುದರಲ್ಲಿ ಸಮರ್ಥರೂ ಆದವರಾಗಿ ಬಂದು ದೇಶಿಕೇಂದ್ರರನ್ನು ಕುರಿತು " ಎಲೈ ಯತಿಗಳೇ ! ಪ್ರಪಂಚದಲ್ಲಿ ಭೇದವೇಸತ್ತ್ವವು; ವಿಷ್ಣುವೆ ಶ್ರೇಷ್ಠನಾದ ಸ್ವಾಮಿಯು; ವೈಷ್ಣವಮತವಿನಾ ಉಳಿದ ಮತಗಳೆಲ್ಲಾ ಮೋಹವನ್ನುಂಟುಮಾಡುತ್ತವೆ; ಜಗತ್ತ್ರಯವು - ಮಹಾವಿಷ್ಣುವಿನಿಂದ ಉತ್ಪನ್ನವಾಗಿ ಅವನಿಂದಲೇ ರಕ್ಷಿತವಾಗಿವೆ; ಸಂಸಾರವೆಂಬ ಸರ್ಪದಿಂದ ದಷ್ಟನಾದವನು - ಕೃಷ್ಣಃ ' ಎಂಬ ಭೇಷಜರೂಪವಾದ ಮಂತ್ರವನ್ನುಚ್ಚರಿಸಿ ದರೆ ಮೋಕ್ಷವನ್ನು ಹೊಂದುತ್ತಾರೆ; ಮಕ್ಕಳು ತಾಯಿಯನ್ನು ಆಶ್ರಯಿಸಿ ಹೇಗೆ ಬೆಳೆಯುತ್ತವೆಯೋ ಹಾಗೆಯೇ ವೈಷ್ಣವಮಂತ್ರವನ್ನು ಆಶ್ರಯಿಸಿ ಜನಗಳೆಲ್ಲಾ ಇದ್ದಾರೆ ; ವಿಷ್ಟು ಭಕ್ತಿ ಇಲ್ಲದವರಿಗೆ ವೇದಗಳಿಂದೇನು? ಶಾಸ್ತ್ರಗಳಿಂದೇನು? ತೀರ್ಥಸೇವೆಯಿಂದೇನು? ತಪಸ್ಸುಗಳಿಂದೇನು?ಯಾಗಾದಿಗಳಿಂದೇನು ಪ್ರಯೋಜನವು? ಭಕ್ತಿಯೇ ಮೋಕ್ಷಪ್ರದವು; ಭಕ್ತಿಯೇ ಫಲದಾಯಕವು; ಭಕ್ತಿಯೇ ದೊಡ್ಡದು; ಆದ್ದರಿಂದ ಎಲೈ ಯತಿಗಳೇ ! ನಮ್ಮ ಮತವನ್ನಾಶ್ರಯಿಸಿ” ಎನ್ನಲು ಶಂಕರರು " ವಿಷ್ಣುಶರ್ಮಾದಿಗಳೇ! ಯಜ್ಞಾಭದಿಕರ್ಮಗಳನ್ನು ತ್ಯಜಿಸಿ ಭಕ್ತಿ ಯನ್ನು ಅಪೇಕ್ಷಿಸುವಿರಿ ; ಭಿನ್ನರನಪವಾದ ದ್ವೈತಭಕ್ತಿಯಿಂದ ಸಂಸಾರವು ವೃದಿ; ಹೊಂದುತ್ತದೆ. ಅಭಿನ್ನ ರೂಪವಾದ ಅದ್ವೈತಭಕ್ತಿಯಿಂದ ಮೋಕ್ಷಉಂಟಾಗುತ್ತ ದ್ಧೆ ದ್ವೈತರೂಪವಾದ ಭಕ್ತಿಯು ಕ್ಲೇಶವಾಯಕವು; ಅಚಲವಾದ ಅದ್ವೈತಭಕ್ತಿಯು ಸುಖದಾಯಕವು; ಆದ್ದರಿಂದ ಸರ್ವಸಿದ್ಧಿದಾಯಕವಾದ ಅದ್ವೈತಭಕ್ತಿಯನ್ನು ಆಶ್ರ ಯಿಸಬೇಕು; ಆ ಭಕ್ತಿಯಿಂದ ಚಿತ್ತವು ಶುದ್ಧವಾಗುತ್ತದೆ; ಚಿತ್ತಶುದ್ದಿಯಿಂದ ಜ್ಞಾನ ವುಂಟಾಗುತ್ತದೆ; ಆ ಜ್ಞಾನದಿಂದಲೇ ಮೋಕ್ಷಬರುವುದಲ್ಲದೇ ಕಲ್ಪಕೋಟಿಶತಗಳಿ೦ದಲೂ ಬರಲಾರದು; ಹರಿಯ ರೂಪವನ್ನೇ ಶಂಭುವು ಧರಿಸಿರುತ್ತಾನೆ ; ಶಂಭುರೂಪವನ್ನೇ ಹರಿಯು ಧರಿಸಿರುತ್ತಾನೆ; ಅವರಿಬ್ಬರಿಗೂ ಸ್ವಲ್ಪವೂ ಭೇದವೇ ಇಲ್ಲ ; ಯಾವನು ಭೇದ