ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಕಾದಂಬರೀಸಂಗ್ರಹ

ವನ್ನು ಮಾಡುವನೋ ಅವನು ದೋಷಭಾಗಿಯಾಗುತ್ತಾನೆ; ಪರಬ್ರಹ್ಮದಿಂದ ಅಭಿನ್ನ ನಾದ ತನ್ನನ್ನು ಭಿನ್ನನನ್ನಾಗಿ ಯಾವನು ತಿಳಿಯುವನೋ ಅವನು ಸಾಕ್ಷಾಧ್ಬ್ರಹ್ಮಘಾತುಕನು; ಅಜ್ಞಾನಸಾಗರದುಗ್ನರಾದ ಪಾಪಿಗಳು ಮಾತ್ರ ಭೇದವನ್ನು ಎಣಿ ಸುವರು ; ಯುಗಾಂತ್ಯದಲ್ಲಿ ಹರಿಯೇ ರುದ್ರರೂಪದಿಂದ ಸಕಲ ಜಗತ್ತನ್ನೂ ನಾಶ ಮಾಡುವನು ; ಆ ರುದ್ರನೇ ಬ್ರಹ್ಮರೂಪದಿಂದ ಪುನಃ ಸಕಲ ಜಗತ್ತನ್ನೂ ಸೃಷ್ಟಿಸಿ ವಿಷ್ಣುರೂಪದಿಂದ ರಕ್ಷಿಸುತ್ತಾನೆ. ಆದ್ದರಿಂದ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ಭೇದವಿಲ್ಲ ; ಪರಬ್ರಹ್ಮರೂಪಿಯಾದ ಆ ಶಿವನೇ ಎಲ್ಲರಿಗೂ ಗುರುವು ; ಆ ಶಿವನೇ ಜೀವನು ; ಶಿವನೇ ಪ್ರಾಣಿಗಗೆ ಬಂಧವು ; ಶಿವನೇ ಪ್ರಾಣಿಗಳ ಆತ್ಮನು ; ಶಿವನೇ ದೇವನು ; ಆ ಶಿವನಿಗಿಂತ ಬೇರೆಯಾದದ್ದು ಯಾವುದೂ ಇಲ್ಲ ; ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಯಾವನು ಭೇದವನ್ನು ಎಣಿಸುವನೋ ಅವನು ಚಂದ್ರತಾರಕಗಳಿ ರುವವರಿವಿಗೂ ನರಕಯಾತನೆಯನ್ನನುಭವಿಸುವನು ; ಯಾವನು ಸ್ವಕರ್ಮವನ್ನು ತ್ಯಜಿ ಸಿ ಭಕ್ತಿಮಾತ್ರದಿಂದಲೇ ಜೀವಿಸುವನೋ ಅವನ ವಿಷಯದಲ್ಲಿ ವಿಷ್ಣುವು ತೃಪ್ತಿ ಯಾಗುವುದಿಲ್ಲ; ಏಕೆಂದರೆ ವಿಷ್ಣುವು ಆಚರದಿಂದ ಪೂಜಿಸಲ್ಪಡತಕ್ಕವನು; ಸ್ವಧರ್ಮ ಹೀನರಿಗೆ ಭಕ್ತಿಯೂ ಕೂಡ ದುಃಖಪ್ರದವು; ಹರಿಭಕ್ತನೇ ಆಗಲಿ ಹರಭಕ್ತನೇ ಆಗಲೀ ಸ್ವಾಶ್ರಮಾಚಾರವನ್ನು ತ್ಯಜಿಸಿದರೆ ಅವನು ಭ್ರಷ್ಟನಾಗುವುದರಲ್ಲಿ ಸಂದೇಹವಿಲ್ಲ; ಪರಬ್ರಹ್ಮನು ಸೃಷ್ಟಿಸಮಯದಲ್ಲಿ ತನ್ನ ವಾಮಭಾಗದಿಂದ ವಿಷ್ಣುವನ್ನು ಸೃಷ್ಟಿಸಿದನು; ತನ್ನ ಬಲಭಾಗದಿಂದ ಬ್ರಹ್ಮನನ್ನೂ, ತನ್ನ ಹೃದಯದಿಂದ ರುದ್ರನನ್ನೂಸೃಷ್ಟಿಸಿದನು; ಆ ಬ್ರಹ್ಮನಿಗೆ ಪಾಣಿಪಾದಗಳಿಲ್ಲ; ಅವನಿಗೆ ಜನನಮರಣಗಳಿಲ್ಲ; ಅವನು ಎಲ್ಲರ ಹೃದ ಯದಲ್ಲಿದಾನೆ; ಅವನಿಗೆ ಆಕಾರವಿಲ್ಲ; ಕಣ್ಣು ಕಿವಿಗಳಿಲ್ಲ; ಇಷ್ಟಾದರೂ ಅವನು ನಾವಾಡುವುದನ್ನು ಕೇಳುತ್ತಲೂ ಮಾಡುವುದನ್ನು ನೋಡುತ್ತಲೂ ಇರುತ್ತಾನೆ; ಸೂಕ್ಷ್ಮದರ್ಶಿಗಳಾದ ಋಷಿಗಳು ಮಾತ್ರ ಆತ್ಮಾನುವರ್ತಿಯಾದ ಆ ಬ್ರಹ್ಮನನ್ನು ನೋಡುತ್ತಾರೆ ; ಆದ್ದರಿಂದ ಬ್ರಹ್ಮಸದೃಶವಾದ ಈ ನಮ್ಮ ದೇಹಾದಿಗಳಿಗೆ ಚಿಹ್ನ ಕಲ್ಪನ ವು ಹೇಗೆ? ಅದನ್ನು ಧರಿಸಿದರೆ ಜ್ಞಾನವುಳ್ಳವನೂ ಮುಕ್ತಿಯುಳ್ಳವನೂ ಹೇಗೆ ಆಗು ತ್ತಾನೆ ? ಮನುಜನು ವೇದೋಕ್ತ ಕರ್ಮಗಳನ್ನು ಆಚರಿಸುತ್ತಾ ಕ್ರಮವಾಗಿ ಜ್ಞಾನ ವನ್ನೂ ಅನಂತರ ಮೋಕ್ಷವನ್ನೂ ಹೊಂದುತ್ತಾನೆ; ನಿತ್ಯ ಕರ್ಮಪರಿತ್ಯಾಗದಿಂದ ನರನು ಪತಿತನಾಗುತ್ತಾನೆ; ಶಂಖಚಕ್ರಾಂಕಿತವಾದ ದೇಹವನ್ನು ನೋಡಿದ ಕೂಡಲೇ ಸ್ನಾನಮಾಡಬೇಕು; ಅಂತಹವನನ್ನು ಮಾತಿನಿಂದಲೂ ಅರ್ಚಿಸಕೂಡದು ; ಜೀವಚ್ಛವ ದಂತಿರುವ ಅವನು ಶೂದ್ರನಂತೆ ಬಿಡಲ್ಪಡತಕ್ಕವನು; ಅವನಿಗೆ ಕೊಡಲ್ಪಟ್ಟ ಹವ್ಯ ಕವ್ಯಗಳು ವ್ಯರ್ಥವಾಗುತ್ತವೆ; ಅವನು ವೇದೋಕ್ತ ಕರ್ಮಾನುಯಾಯಿಯಾದರೂ