ಶಂಕರಕಥಾಸಾರ ೫೯
ಲ್ಪಟ್ಟಿದೆ; ತರ್ಕಸಿದ್ಧಾಂತಪ್ರಕಾರವಾಗಿ ಅನಿತ್ಯವಾದ ವಸ್ತುವಿನಲ್ಲಿ ಬ್ರಹ್ಮತ್ವವು ಹೇಗೆ ಹೇಳಲ್ಪಡುತ್ತದೆ ? ಸೂರ್ಯಪರಗಳೂ, ಬ್ರಹ್ಮಬೋಧಕಗಳೂ ಆದ ಶ್ರುತಿವಾಕ್ಯಗಳು - ಜಗದೀಶಾಜ್ಞೆಯಿಂದ ಸೂರ್ಯನು ಪ್ರಕಾಶಿಸುತ್ತಾನೆ' ಎಂಬ ಅರ್ಥವನ್ನು ಸ್ಪಷ್ಟಗೊಳಿ ಸುತ್ತವೆ; ಸೂರ್ಯಾದಿಗಳಿಗೆ ಜ್ಯೋತಿಶಾಸ್ತ್ರದಲ್ಲಿಯೂ ಅನಿತ್ಯತ್ವವು ಸಿದ್ದವಾಗಿದೆ, ಆದ್ದ ರಿಂದ ಪಾಷಂಡಚಿಹ್ನೆಗಳನ್ನು ಬಿಟ್ಟು ಶುದ್ಧವಾದ ಅದ್ವೈತಬೋಧೆಯಿಂದ ಶುದ್ಧರಾಗಿ ಮುಕ್ತಿಯನ್ನು ಹೊಂದಿ” ಎಂದುಪದೇಶಿಸಲು ಅವರೆಲ್ಲಾ ಆಚಾರ್ಯರಿಗೆ ವಂದಿಸಿ ಅವರ ಶಿಷ್ಯರಾದರು.
ಅನಂತರ ಶಂಕರಭಗವತ್ಪಾದಪೂಜ್ಯರು, ವಾಯವ್ಯ ದಿಗ್ಜಯಾಪೇಕ್ಶೆಯಿಂದ ಆ ದಿಕ್ಕಿಗೆ ಮೂರು ಸಹಸ್ರ ಮಂದಿ ಮುಖ್ಯ ಶಿಷ್ಯರುಗಳಿಂದ ಹಿಂಬಾಲಿಸಲ್ಪಡುತ್ತಾ ಹೊರಟರು.
ಆ ಶಿಷ್ಯರಲ್ಲಿ ಕೆಲವರು ಆಚಾರ್ಯರನ್ನು ಬೀಸಣಿಗೆಗಳಿಂದಲೂ, ಕೆಲವರು ಶುಭೋಕ್ತಿಗಳಿಂದಲೂ, ಕೆಲವರು ಶಂಖನಾದದಿಂದಲೂ, ಕೆಲವರು ವಾದ್ಯ ವಿಶೇಷಗಳಿಂದಲೂ, ಕೆಲವರು ಘಂಟಾನಾದದಿಂದಲೂ, ಕೆಲವರು ಕೈಚಪ್ಪಾಳೆಗಳಿಂದಲೂ, ಸೇವಿಸುತ್ತಾ ಹೊರಟರು.
ಶಂಕರರು ದಾರಿಯಲ್ಲಿ ಸಿಕ್ಕಿದ ಊರುಗಳಲ್ಲಿದ್ದ ಕುಮತಸ್ಥರಾದ ಬ್ರಾಹ್ಮಣರನ್ನು ಸೋಲಿಸುತ್ತಾ ಅನಂತರ ಗಣವರಪುರವೆಂಬ ಸ್ಥಳಕ್ಕೆ ಬಂದು, ಅಲ್ಲಿರುವ ಕೌಮುದೀನದಿಯಲ್ಲಿ ಸ್ನಾನಾದಿಗಳಂ ಮಾಡಿ ವಿಘ್ನೇಶ್ವರನನ್ನು ಪೂಜಿಸುತ್ತಾ ಬಹಳ ಕಾಲವಿದ್ದರು, ಪದ್ಯ ಪಾದಾದಿಗಳುಪಂಚಪೂಚಾರತವಾಗಿ ಪರಪಕ್ಷ ಭೇದನೋತ್ಸುಕಮಾ ನಸರಾಗಿದ್ದರು.
ಇತರ ಶಿಷ್ಯರು, ಆಚಾರ್ಯರಿಗೂ, ಪದ್ಮಪಾದಾದಿಗಳಿಗೂ ಭಿಕ್ಷೆಯನ್ನೀಯುತ್ತಲೂ, ಸಾಯಂಕಾಲದ ಹೊತ್ತಿನಲ್ಲಿ ಗುರುಗಳಿಗೆ ದ್ವಾದಶನಮಸ್ಕಾರಗಳನ್ನು ಸಮರ್ಪಿಸುತ್ತಲೂ, ಡಕ್ಕಾ, ತಾಲ, ನೃತ್ಯ ಇವುಗಳಿಂದ ಸ್ತುತಿಸುತ್ತಲೂ ಇದ್ದರು.
ಗಾಣಾಪತ್ಯಮತ ಭಂಜನವು.
ಅನಂತರ ಆಚಾರ್ಯರು ಗಣವರಪುರಕ್ಕೆ ಹೋಗಿ, ಅಲ್ಲಿರುವ ಗಂಧವತೀನದಿಯಲ್ಲಿ ಸ್ನಾನಮಾಡಿ ಗಣಪತಿಯನ್ನು ಸೇವಿಸುತ್ತಾ ಎಂಟುದಿನಗಳು ಇರಲು; ಧುಂಡಿರಾಜ ಮತ್ತು ವೀರವಿಘ್ನೇಶ್ವರೆಂದು ಹೆಸರುಳ್ಳ ಇಬ್ಬರು ಬಂದು "ಎಲೈ, ಯತಿಯೇ ! ನಿನ್ನ ಮತವು ನೋಡುವುದಕ್ಕೂ ಕೇಳುವುದಕ್ಕೂ ಸಮಾಚೀನವಾಗಿಲ್ಲ ; ಬ್ರಹ್ಮಕೈವಲ್ಯವನ್ನು