ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೫೮ ಕಾದಂಬರೀಸಂಗ್ರಹ

ವತೆಗಳಲ್ಲೆಲ್ಲಾ ಮೊದಲನೆಯವನು; ವಿಸ್ಫುಲಿಂಗಾತ್ಮಕವಾದ ಮಣಿಗಳನ್ನು ಧರಿಸಿ ಅಗ್ನ್ಯುಪಾಸನೆ ಮಾಡಿದರೆ ಮೋಕ್ಷವು ಕರಗತವಾಗುತ್ತದೆ, ಆದ್ದರಿಂದ ಅಗ್ನಿಯು ಬ್ರಾಹ್ಮಣರೆಲ್ಲರಿಂದಲೂ ಸೇವಿಸಲ್ಪಡಲರ್ಹನು” ಎಂದು ಹೇಳಲು,–

ಶಂಕರರು " ಎಲೈ ' ಅಗ್ನಿಯು ದೇವತೆಗಳಲ್ಲಿ ಅವಮನೆಂತಲೂ, ವಿಷ್ಣುವು ಪರಮನೆಂತಲೂ, ಇತರ ದೇವತೆಗಳು ಮಧ್ಯಮರೆಂದೂ, ಹೇಳಲ್ಪಟ್ಟಿದ್ದಾರೆ; ಹಾಗೆಯೇ ಅಗ್ನಿಯು ದೇವತೆಗಳಿಗೆ ಅವರ ಭಾಗಗಳನ್ನು ಕೊಡುವ ಕರ್ಮದೇವತೆಯು; ಆದ್ದರಿಂದ ನೀವು ವಹ್ನ್ಯಧೀನವಾದ ಕರ್ಮಗಳನ್ನು ಮಾಡುತ್ತಲೂ, ವಿಷ್ಣುವನ್ನು ಪೂಜಿಸುತ್ತಲೂ, ಆದ್ವೈತಮತಾನುಯಾಯಿಗಳಾಗಿರಿ ” ಎಂದು ಉಪದೇಶಿಸಲು ಅವರೆಲ್ಲರೂ, ಆಚಾರ್ಯರಿಗೆ ನಮಸ್ಕರಿಸಿ ಪಂಚಾಯತನ ಪೂಜಾರತರಾದ ಅದ್ವೈತಿಗಳಾದರು.

                      ರವಿಮತ ದೂರೀಕರಣವು.
    ತರುವಾಯ, ಹಣೆಯಲ್ಲಿ ರಕ್ತ ಕಂದನವನ್ನೂ, ಕತ್ತಿನಲ್ಲಿ ರಕ್ತಪುಪ್ಪವನ್ನೂ ಧರಿಸಿದ್ದ ದಿವಾಕರನೇ ಮೊದಲಾದವರು ಒಂದು « ಸ್ವಾಮೀ ! ಸೂರ್ಯ ಆತ್ಮಾಜಗ ತಸ್ತಸ್ಥುಷಶ್ಛ' ಎಂಬ ಶ್ರುತಿಯಿಂದ ಸೂರ್ಯನಲ್ಲಿ ಬ್ರಹ್ಮತ್ವವು ಸಿದ್ಧವಾಗಿದೆ ; ಕೆಲವರು ರಕ್ತಗಂಧವನ್ನೂ , ರಕ್ತ ಪುಷ್ಪಮಾಲೆಗಳನ್ನೂ ಧರಿಸಿ ಪ್ರಕಾಶಿಸುತ್ತಲಿರುವ ಬ್ರಹ್ಮ ರೂಪಿಯಾದ ಸೂರ್ಯಮಂಡಲವನ್ನೂ, ಕೆಲವರು ಒಗಯರೂಪಿಯೂ, ಆಕಾಶ ಮಧ್ಯಸ್ಟನೂ, ಆದ ಸೂರ್ಯನನ್ನೂ ಕೆಲವರು ಅಸ್ತಮಯಕಾಲದ ಸೂರ್ಯನನ್ನೂ, ಕೆಲವರು ಹಿರಣ್ಯಶ್ಮಶ್ರುಕೇಶಯುಕ್ತವಾದ ಮಂಡಲದಲ್ಲಿ ಕ್ಷಣಮಾತ್ರ ವ್ರತಧಾರಿಗ ಳಾಗಿಯೂ, ಇನ್ನು ಕೆಲವರು ಸೂರ್ಯನನ್ನು ನೋಡಿ ಅವನನ್ನು ಅರ್ಘ್ಯಪಾದ್ಯಾಚಮ ನಾದಿಗಳಿಂದ ಪೂಜಿಸಿ ಅನಂತರ ಭೋಜನಮಾಡತಕ್ಕವರಾಗಿಯೂ, ಮತ್ತೆ ಕೆಲವರು ಹಣೆಯಲ್ಲಿಯೂ, ಭುಜದ್ವಯಗಳಲ್ಲಿಯೂ, ಮತ್ತು ವಕ್ಷಸ್ಥಲದಲ್ಲಿಯೂ ಮಂಡಲ ದಿಂದ ಚಿಹ್ನಿತರಾಗಿಯೂ ಸೂರ್ಯ್ಯನನ್ನು ಆರಾಧಿಸುತ್ತಾರೆ. ಈ ಉಪಾಸಕರಿಗೆಲ್ಲಾ ಪ್ರತ್ಯೇಕವಾದ ಮಂತ್ರವು ಉಕ್ತವಾಗಿದೆ; "ಆದಿತ್ಯಾನಾಮಹಂವಿಷ್ಣು ಜ್ಯೋತಿಷಾಂ ರವಿರಂಶುರ್ಮಾ' ಎಂದು ಶ್ರೀಕೃಷ್ಣನು ಹೇಳಿದ್ದಾನೆ; ಬ್ರಹ್ಮಾದಿದೇವತೆಗಳೆಲ್ಲ ಸೂ‌ರ್ಯನಿಂದಲೇ ಉತ್ಪನ್ನ ರಾಗಿದ್ದಾರೆ; ಆದ್ದರಿಂದ ಮೋಕ್ಷಾಪೇಕ್ಷಿಗಳಾದ ಸಕಲ ರಿಂದಲೂ ಸೂರ್ಯನು ಪೂಜಿಸಲ್ಪಡಬೇಕು' ಎಂದರು.

ಅದಕ್ಕೆ ಶಂಕರದೇಶಿಕರು "ಎಲೈ ಮೂಢರಾದ ದಿವಾಕರಾದಿಗಳೇ ! - ಚಕ್ಶೋ ಸ್ಸೂರ್ಯೋ ಅಜಾಯತ' ಇತ್ಯಾದಿ ಶ್ರುತಿವಾಕ್ಯಗಳಿಂದ ಸೂರ್ಯನಿಗೆ ಅನಿತ್ಯತ್ವವು ಹೇಳ