ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಸಾಹಿತ್ಯ ಪರಿಷತ್ತು.


�����- -

$} ನಿಬಂಧನೆಗಳಲ್ಲಿ ಮಾಡಬಹುದಾಗಿರುವ ತಿದ್ದುಪಡೆಗಳು. (ಸಾಮಾಜಿಕರೊಬ್ಬರಿಂದ.) ಕನ್ನಡಿಗರಾದ ನಮ್ಮ ಪೂರ್ವಪುಣ್ಯದಿಂದಲೂ ಹಿರಿಯರ ಆಶೀರ್ವಾದಬಲದಿ ದಲೂ, ದೀರ್ಘಕಾಲಾನಂತರದಲ್ಲಿ ಯಾದರೂ, ನಾವು ನಮ್ಮ ದೇಶಭಾಷಾಭಿಮಾನ ವಿಷಯದಲ್ಲಿ ಜಾಗರೂಕರಾಗಿ "ಮೈಸೂರು ಸಂಪದಭ್ಯುದಯ ಸಮಾಜ"ದವರ ಪ್ರೋತ್ಸಾಹದಿಂದ ಕಳೆದ ೧೯೧೫ನೇ ವರ್ಷದ ಮೇತಿಂಗಳಲ್ಲಿ ಬೆಂಗಳೂರು ಪಟ್ಟಣದಲ್ಲಿ ಸಮ್ಮೇಳನ ಸೇರಿ 'ಕರ್ಣಾಟಕಸಾಹಿತ್ಯ ಪರಿಷತ್ತು' ಎಂಬ ಸಂಸ್ಥಾಪನೆಯನ್ನು ಕೊಂಡಿ ಸಿದ ಸಂಗತಿಯು ಜನಜನಿತವಾಗಿ ಸರ್ವರಿಗೂ ತಿಳಿದೇ ಇರುವುದಲ್ಲವೇ ! ಈಚೆಗೆ ಆ ಸಮ್ಮೇಳನದಲ್ಲಿ ಮಾಡಲಾದ ನಿರ್ಣಯಗಳೂ, ಪರಿಷತ್ತಿನ ನಿಬಂಧನೆಗಳೂ ಮುಂತಾ ಮುಖ್ಯ ವಿಷಯಗಳನ್ನೊಳಕೊಂಡ ವರದಿಯು (Report) ಉಭಯ ಭಾಷೆಗಳಲಿಯೂ ಅಚ್ಚಾಗಿ ಸಾಮಾಜಿಕರ ಕೈಗೆ ಬಂದಿರುವುದು. ಕರ್ಣಾಟದೇಶದ ಹಲವು ಭಾಗಗಳಿಂದ ಪರಸ್ಪರ ಪರಿಚಯವಿಲ್ಲದ ಹಲವು ದೊಡ್ಡ ಮನುಷ್ಯರು ಮೊದಲಲ್ಲಿಯೇ ಯಾವತ್ತೂ ಸಾಧಕ ಬಾಧಕಕಾರಣಗಳನ್ನು ಸೂಕ್ಷ್ಮವಾಗಿ ಆಲೋಚಿಸದೆ-ಹೇಗಾದರೂ ಒಂದು ಬಾರಿಗೆ ಪರಿಷತ್ತು ಹೊರಡಲಿ ; ಮುಂದೆ ನೋಡೋಣ!” ವೆಂದು ಆತ್ಯವಸರದಿಂದ ಮಾಡಿದ ಇಂಥ ಈ ನಿಬಂಧನೆಗಳೊಳಗೆ ಕೆಲಕೆಲವು ನ್ಯೂನತೆಗಳಿದ್ದರೆ ಅದೊಂದು ವಿಶೇಷವಲ್ಲ; ಅವು ತಿದ್ದಲ್ಪಡಲು ಬಾರದಂಥವುಗಳೂ ಅಲ್ಲ. ಆದರೆ, ಈ ಮುಂದೆ ಸಹ ಸದಸ್ಯರು ಒಟ್ಟುಗೂಡುವ ಸಂದರ್ಭವು ವರ್ಷದಲ್ಲಿ ಎರಡು ಮೂರು ದಿನ ಮಾತ್ರವೇ ಆದುದರಿಂದಲೂ, ಬರುವ ಸೂಚನೆಗಳನ್ನೆಲ್ಲ ಸಭಿಕರು ಶಾಂತಚಿತ್ತರಾಗಿ ಆಗಲೇ ವಿಮರ್ಶಿಸಿ ನಿಬಂಧನೆಗಳನ್ನು ತಕ್ಕಂತೆ ತಿದ್ದುಪಡೆಮಾಡುವುದು ಪ್ರಾಯಃದುಸ್ಸಾಧ್ಯಹಾದುದರಿಂದಲೂ, ಆತ ಏವ ಇಂಥ ಸೂಚನೆಗಳನ್ನು ಸ್ವಲ್ಪ ಮುಂದಾಗಿಯೇ ಪರಿಷತ್ತಿನ ಹಿತಚಿಂತಕರ ಸನ್ನಿಧಿಯಲ್ಲಿಟ್ಟು ಕೂಲಂಕಷವಾದ ಚರ್ಚೆಗೆ ಅವಕಾಶಕೊಡುವುದು ಯುಕ್ತವೆಂದು ನನಗೆ ತೋರಿ ನನ್ನ ಮಿತ್ರರು ಕೂಡ ಈರೀತಿ ಮಾಡುವಂತೆ ಪ್ರೋತ್ಸಾಹಿಸಿದುದರಿಂದಲೂ, ನನ್ನ ಮನಸ್ಸಿಗೆ ಹೊಳೆದ ಬೇರೆ ಬೇರೆ ಸೂಚನೆಗಳನ್ನು ಈ