ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀಸಂಗ್ರಹ ಕೆಳಗೆ ಕೊಟ್ಟಿರುವೆನು. ಇವನ್ನೆಲ್ಲ ಆಯಾ ಪ್ರಾಂತದ ಸಭಾಸದರು ತಮ್ಮ ತಮ್ಮ ಸೀಮೆಯ ಪ್ರಮುಖವಾದ ಪತ್ರಗಳಲ್ಲಿ ನಿರ್ಮಾಸತ್ಸರ್‍ಯದಿಂದ ಚರ್ಚಿಸಿ, ಪರಿಷತ್ತಿನ ಕಾಲದಲ್ಲಿ ಮುಂದೆ ಬರಬಹುದಾದ ಸೂಚನೆಗಳಿಗೆ ನಿರರ್ಥಕವಾದ ಕಾಲಯಾಪನೆಯಾಗದಂತೆ ಯೋಗ್ಯತಾನುಗುಣವಾಗಿ ಮತಗಳನ್ನು ಕೊಡಲು ಸಾಧ್ಯಪಡಿಸಬೇಕೆಂದೇ ಈ ಲೇಖ ನವನ್ನು ಬರೆದುದರ ಮುಖ್ಯೋದ್ದೇಶವಾಗಿದೆ. ೧ ನೆಯ ನಿಬಂಧನೆಯು ಪರಿಷತ್ತಿನ ಹೆಸರನ್ನೂ, ೨ ನೆಯದು ಅದು ಇರತಕ್ಕ ಮುಖ್ಯಸ್ಥಳವನ್ನೂ ಹೇಳುವುದು, ಇವೆರಡೂ ನಿರಾಕ್ಷೇಪಕರಗಳಾಗಿವೆ. ೩ ನೆಯ ನಿಬಂಧನೆಯು ಪರಿಷತ್ತಿನ ಉದ್ದೇಶವನ್ನು ಸಂಗ್ರಹವಾಗಿ ನಿರೂಪಿಸುವುದು. ಮತ್ತು ಅದನ್ನು ನೆರವೇರಿಸಲು ಒಟ್ಟು ೧೩ ಮಾರ್ಗಗಳನ್ನು ಹೇಳಿದೆ. ಆದರೆ ಸಮ್ಮೇಳನದ ೨ನೇ ನಿರ್ಣಯರೂಪವಾಗಿ ಗೊತ್ತಾದ: 'ಕರ್ಣಾಟಕದ ಬೇರೆ ಬೇರೆ ಭಾಗಗಳಲ್ಲಿ ಕ.ಸಾ.ಪರಿಷತ್ತಿನ ಶಾಖೆಗಳನ್ನು ಸ್ಥಾಪಿಸಿ,ಸಮಾನೋದ್ದೇಶಗಳಿಗಾಗಿ ಏರ್ಪಟ್ಟ ಬೇರೆಬೇರೆ ಸಭೆಗಳನ್ನು ಪರಿಷತ್ತಿಗೆ ಜೋಡಿಸುವುದು (Affiliatc) ” ಎಂಬುದನ್ನೂ ೧೧ ನೆಯ ಮಾರ್ಗವೆಂದು ಹೇಳಿರುವ ಅಂಶಕ್ಕೆ ಸೇರಿಸಿ ಅದನ್ನು ವಿಸ್ತಾರಪಡಿಸುವುದು ಆಯುಕ್ತವಾಗಲಾರದೆಂದು ನನಗೆ ತೋರುತ್ತಿದೆ. ಇನ್ನು ಕನ್ನಡ ಸಾಹಿತ್ಯವನ್ನೂ ಭಾಷೆಯನ್ನೂ ಉನ್ನತಿಗೆ ತರುವುದಿಷ್ಟೇ ನಮ್ಮ ಪರಿಷತ್ತಿನ ಮಹೋದ್ದೇಶವೆಂದು ನಾನು ತಿಳಿಯುವುದಿಲ್ಲ. 'ಭಾರತೀಯ ಸಾಹಿತ್ಯ ಕಲಾಶಾಸ್ತ್ರರೂಪವಾಗಿ ವ್ಯಕ್ತವಾಗಿರುವ ಸರ್ವ ವಿಧವಾದ ಅರ್‍ಯಸಂಸ್ಕೃತಿ (Culture)ಯನ್ನು ಕರ್ಣಾಟಭಾಷಾ ಮೂಲವಾಗಿ ವಿಕಾಸಗೊಳಿಸಿ ಸಮಸ್ತೋಪಾಯಗಳಿಂದ ಕನ್ನಡಿಗರ ಅಭ್ಯುದಯವನ್ನು ಸಾಧಿಸುವುದೇ ಕರ್ಣಾಟಕಸಾಹಿತ್ಯ ಪರಿಷತ್ತಿನ ಉದ್ದೇಶ ” ವೆಂದು ಈಗಳಿನ ಮಾತುಗಳಿಗೆ ಬದಲಾಗಿ ಹಾಕಿದರೆ ಚೆನ್ನಾಗಿರಬಹುದೆಂದು ನನಗೆ ತೋರುತ್ತಿದೆ. ಹೀಗೆ ಮಾಡಿದೆವಾದರೆ,ನಾಟಕಗಳು, ಹುಕೀರ್ತನೆಗಳು, ಚಿತ್ರಲೇಖನ, ಗಾನ ಮುಂತಾದವುಗಳು ಕೂಡ ನಮ್ಮ ಉದ್ದೇಶಕ್ಕೆ ವಿಸಂಗತವಲ್ಲವಾದುದುಂದ ಅವು ಕೂಡ ಈ ಅರ್ಥವಿವರಣೆಯೊಳಗೆ ಬರುವು ದಕ್ಕೆ ಅವಕಾಶವಾಗುವುದು. ೪ ನೆಯ ನಿಬಂಧನೆಯು ಪರಿಷತ್ತಿನ ಘಟನೆಯನ್ನು ಕುರಿತು ಹೇಳುವುದು. ಪರಿಷತ್ತಿಗೆ ಸಂಬಂಧಪಟ್ಟವರನ್ನು ಪೋಷಕರು (Patrons), ಉಪವೋಷಕರು (Vice patrons), ಪ್ರದಾತೃಗಳು (Donors), ಆಶ್ರಯದಾತರು(Suppotters), ಆಜೀವಸಭ್ಯರು (Life-members ), ಒಂದನೆಯ ಮತ್ತು ಎರಡನೆಯ