ಈ ಪುಟವನ್ನು ಪರಿಶೀಲಿಸಲಾಗಿದೆ

ಆದಂಬರೀ ಸಂಗ್ರಹ.

ಪತಿಯ ಮನೆಗೆ ಕಳುಹಿಸತಕ್ಕ ಕಾಲದಲ್ಲಿ ಉಂಟಾಗತಕ್ಕ ತಾಯಿತಂದೆಗಳ ವ್ಯಥೆಯು ಎಷ್ಟೋ ಅದನ್ನು ವರ್ಣಿಸಲು ಶಕ್ಯವಲ್ಲ, ಅದನ್ನು ಪ ಜ್ಞ ರಾದ ಅನುಭವೈಕವೇತ್ತರಾದ ಪಾಠಕರಿಗೇ ಬಿಟ್ಟಿರುವೆವು. ಇನ್ನು ಮುಂದೆ ಕರುಣಾಂಬೆಯ ಯಾರು ? ಎಂಬುದನ್ನು ವಿಚಾರ ಮಾಡುವ. ಕಳ ತೃತೀಯಲಹರಿ. ವಿದ್ಯಾಭ್ಯಾಸ. ಕರುಣಾಂಬೆಯು ಒಬ್ಬ ಬಾಲವಿತಂತುವು. ಆಕೆಯು ಸುವರ್ಣ ಪುರದ ಪುರಾಧ್ಯಕ್ಷನ ಮೂರನೆಯ ಪತ್ನಿಯು, ಪುರಾಧ್ಯಕ್ಷನು ಬಹು ದ್ರವ್ಯ ವನ್ನೂ, ಯಶಸ್ಸನ್ನೂ, ಸಂಪಾದಿಸಿ ಮೃತಪಟ್ಟನು, ಕೂಡಲೇ ಆತನ ಪ್ರಥಮ ದ್ವಿತೀಯ ಪತ್ನಿಯರ ಪ್ರತರು ಕರುಣಾಂಬೆಗೆ ಮಾಸಾಶನ ವನ್ನು ಕೊಟ್ಟು ಕಳುಹಿಸಿಬಿಟ್ಟರು. ಕರುಣಾಂಬೆಯು ಸುವರ್ಣಪುರದಲ್ಲಿ ವಾಸಿಸಲು ಅಜ್ಜಿತಳಾಗಿ ಕಲ್ಯಾ ಅಪುರಕ್ಕೆ ಬಂದು ವಾಸಮಾಡಲಾರಂಭಿಸಿದಳು: ಈಕೆಯು ಸುಗುಣಿ ಸದಾಚಾರಸಂಪನ್ನಳು, ಯಾವಾಗಲೂ ಸತ್ಕಾಲಕ್ಷೇಪದಲ್ಲೇ ಕಾಲಯಾ ಪನೆ ಮಾಡುತ್ತಾ ವಿದ್ಯಾವತಿಯಾಗಿದ್ದುದರಿಂದ ಅನೇಕಗ್ರಂಥಗಳನ್ನು ಪಠನ ಮಾಡಿ ಅದರಿಂದ ತಿಳಿದು ಬಂದ ನೀತಿ ಮಾರ್ಗದಲ್ಲೇ ಸಂಚರಿಸುತ್ತ ಇತ ರರಿಗೂ ಸನ್ಮಾರ್ಗವನ್ನು ಬೋಧಿಸುತ್ತ ತಪಸ್ಸಿ ಯಂತೆ ಇದ್ದಳು. ರೋಹಿಣಿ ಯು ಬಂದ ಸ್ವಲ್ಪ ದಿನಗಳಲ್ಲಿಯೇ ಕರುಣಾಂಬೆಗೆ ಪೂರ್ಣವಾಗಿ ದೇಹಾರೋಗ್ಯವುಂಟಾಯಿತು. ಮನೆಯ ಕೆಲಸಗಳನ್ನು ಎಂದಿನಂತೆ ಮಾಡತೊಡಗಿದಳು. ಆಗ ರೋಹಿಣಿಯ ಕೂಡ ತನ್ನ ಪ್ರೇಮದ ಸೋದರತ್ತೆಯ ಸಂಗಡ ಕೆಲಸ ಮಾಡಲುದ್ಯುಕಳಾದಳು. ಕರುಣಾಂಬೆಯು ಬಹು ಸಂತೋಷಪಟ್ಟು ವಿರಾಮಕಾಲದಲ್ಲೆಲ್ಲಾ ಕಸೂತಿ ಮೊದಲಾದ ಕೈ ಕೆಲಸಗಳನ್ನು ಅಭ್ಯಾಸ ಮಾಡಲಾರಂಭಿಸಿದಳು. ಚತು ರೆಯಾದ ರೋಹಿಳೆಯು ಬಹು ಶೀಘ್ರದಲ್ಲಿಯೇ ಕರಕಶಲ ವಿದ್ಯೆಗಳಲ್ಲಿ ನಿಪುಣೆಯಾದಳು. ಇದನ್ನು ನೋಡಿದ ಕರುಣಾಂಬೆಯು ರೋಹಿಣಿಗೆ