ರೋಹಿಣಿ , \ \ \ # /\\ \r\ \ \} 1 1 1 1 1 1 (1 * * * * * * * * * * * * * * * \ \ \ \ \ + \ \ \ \ 1 1 1 1 0 ವಿದ್ಯಾಭ್ಯಾಸ ಮಾಡಿಸುವುದು ಉತ್ತಮವೆಂದು ಒಂದು ದಿವಸ ಮನೆಯ ಕೆಲಸಗಳನ್ನೆಲ್ಲಾ ಮುಗಿಸಿ ವಿರಾಮದಲ್ಲಿರುವಾಗ ರೋಹಿಣಿಯನ್ನು ಕರೆದಳು. ಕೂಡಲೆ ರೋಹಿಣಿಯು ಸಮಿಾಪಕ್ಕೆ ಬಂದು ನಿಂತು ಏನು ಅತ್ತೆಮ್ಮ ! ಕರೆದಿರಿ ಎಂದು ಕೇಳಿ ದಳು, ಕರುಣಾಂಬೆಯು ನಿನ್ನನ್ನು ನಾಳೆಯಿಂದ ಪಾಠಶಾಲೆಗೆ ಕಳುಹಬೇಕೆಂದಿರು ವೆನು ಎಂದಳು. ರೋ-ಅದೇತಕ್ಕೆ? ಕ-ವಿದ್ಯಾಭ್ಯಾಸಮಾಡುವುದಕ್ಕೆ. - ರೋ-ಮನೆ ಕೆಲಸಗಳನ್ನು ಮಾಡಿಕೊಂಡಿರುವ ಸ್ತ್ರೀಯರಿಗೆ ಓದುಬರಹವೇ ತಕ್ಕೆ ? ನಾವೇನು ಪುರುಷರಂತೆ ನ್ಯಾಯಸ್ಥಾನಗಳಲ್ಲೂ, ಪಾಠಶಾಲೆಗಳಲ್ಲೂ ಕೆಲಸ ಮಾಡಬೇಕೆ ? ಕ-ಪುರುಷರೇ ವಿದ್ಯೆಯನ್ನು ಕಲಿಯಬೇಕೆಂದೂ ಸ್ತ್ರೀಯರು ಕಲಿಯಬಾರ ದೆಂದೂ ಜಗದೀಶನ ಸಿದ್ಧಾಂತವಲ್ಲ, ವಿದ್ಯಾಭಿಮಾನಿವದೇವತೆಯಾದ ಸರಸ್ವತಿಯೇ ಸ್ತ್ರೀಯಲ್ಲವೆ ? ರೋ-ಅಷ್ಟು ಮಾತ್ರಕ್ಕೇ ಸ್ತ್ರೀಯರು ವಿದ್ಯೆಯನ್ನು ಕಲಿಯಬೇಕೋ ? ಕ-ಅಲ್ಲ, ಅದರಿಂದ ಪತಿಭಕ್ತಿ, ಮಾತಾಪಿತೃಭಕ್ತಿ, ದೈವಭಕ್ತಿ, ರಾಜಭಕ್ತಿ, ಗುರುಹಿರಿಯರಲ್ಲಿ ಭಕ್ತಿ, ಭೂತದಯೆ, ಇವೆಲ್ಲವೂ ಉಂಟಾಗುವವು. ಕ-ಇನ್ನೂ ಇದೆ. ಮುಖ್ಯವಾಗಿ ತಾಯಿಯೇ ಮಕ್ಕಳನ್ನು ಪೋಷಿಸಬೇಕಾದುದರಿಂದಲೂ, ತಾಯಿಯ ಬಳಿಯಲ್ಲಿಯೇ ಮಕ್ಕಳು ತಮ್ಮ ಬಾಲ್ಯಾವಸ್ಥೆಯನ್ನು ಕಳೆಯಬೇಕಾಗಿರುವುದರಿಂದಲೂ, ಸ್ತ್ರೀಯರೆಲ್ಲರೂ ವಿದ್ಯಾವತಿಯರಾಗಿದ್ದರೆ ಒಳ್ಳೆಯ ದಲ್ಲವೆ ?
ರೋ-ಹಾಗಿದ್ದರೆ ಪೂರ್ವಕಾಲದಲ್ಲಿ ಯಾರಾದರೂ ವಿದ್ಯಾವತಿಯರಾಗಿದ್ದರೋ ?
ಕ-ಅನೇಕ ಮಹಿಳೆಯರು ವಿದ್ಯಾವತಿಯರಾಗಿದ್ದರು. ಅತ್ರಿವಂಶದಲ್ಲಿ ಹುಟ್ಟಿದ ವಿಶ್ವ ವರೆ, ಅಗಸ್ತ್ಯರ ಪತ್ನಿ ಲೋಪಾಮುದ್ರೆ, ಯಾಜ್ಞವಲ್ಕ್ಯರಪತ್ನಿ ಮೈತ್ರೇಯಿ, ಇವರಲ್ಲದೆ ದೇವಹೂತಿ, ಸಂಗಮಿತೆ, ಖನೆ, ಶಕುಂತಲೆ, ರುಕ್ಷ್ಮಿಣಿ, ಸತ್ಯಭಾಮೆ, ಚಂದ್ರಮತಿ ಮೊದಲಾದವರು ವಿದ್ಯಾನಿಧಿಗಳಾಗಿದ್ದರು. - -ಈಗ ಇವರಲ್ಲಿ ಯಾರಾದರೂ ಇರುವರೋ ? ಕ-ಇಲ್ಲ, ಇವರುಗಳೆಲ್ಲಾ ಪೂರ್ವಯುಗಗಳಲ್ಲಿ ಇದ್ದ ಮಹಿಳೆಯರು. ರಾಗಿ ೧೪3.