ಈ ಪುಟವನ್ನು ಪರಿಶೀಲಿಸಲಾಗಿದೆ

ನವಮಲಹರಿ.

ಇತ್ತಕಡೆ ಭೀಮರಾಜನೂ, ಸುವರ್ಣಪುರಾಧೀಶ್ವರನೂ ಕೋಟಿಗಳನ್ನೆಲ್ಲಾ ಸ್ವಾಧೀನಪಡಿಸಿಕೊಂಡು ಜಯಭೇರಿ ಹೊಡೆಸುತ್ತಿರುವಾಗ ಅವಂತೀಶನ ಮುಖ್ಯ ಮಂತ್ರಿಯು ಸುವರ್ಣಪುರಾಧ್ಯಕ್ಷನ ಬಳಿಗೆ ಒಬ್ಬ ರಾಜದೂತನ ಕೈಯಲ್ಲಿ ತಾವು ಕೌಲುಮಾಡಿಕೊಂಡು ಅವರವರ ರಾಜ್ಯಗಳನ್ನು ಅವರವರಿಗೇ ಕೊಟ್ಟು ಪರಸ್ಪರ ಸ್ನೇಹಿ ತರಾಗಿ ವರ್ತಿಸಲು ಅಭಿಪ್ರಾಯಪಟ್ಟಿರುವುದನ್ನು ಹೇಳಿಕಳುಹಿಸಲು ಅದೇಪ್ರಕಾರ ಕೌಲಿಗೆ ಸುವರ್ಣ ಪುರಾಧೀಶನು ಒಪ್ಪಿ ಯುದ್ಧವನ್ನು ನಿಲ್ಲಿಸಿಬಿಡುವಂತೆ ಸೈನಿಕರಿಗೆ ಆಜ್ಞೆಯಿತ್ತನು.ಮಾರನೆಯದಿನ ಅವಂತೀಶನು ಎಲ್ಲರಿಗೂ ರಾಜಯೋಗ್ಯವಾದ ಔತನ ವನ್ನು ಮಾಡಿಸಿ ಔತಣವಾದಮೇಲೆ ಸಭೆಯಲ್ಲಿ ನೆರೆದಿದ್ದ ಅನೇಕ ರಾಜರುಗಳು, ಪಂಡಿ ತರು ಮೊದಲಾದವರೆದುರಿಗೆ ತನ್ನ ಪುತ್ರಿಯು ತನಗೆ ಲಭಿಸಿದ ವಿಷಯವನ್ನು ತಿಳಿಸಿ ಅದಕ್ಕಾಗಿ ದೇವರನ್ನು ಕೊಂಡಾಡಿ ಸಭೆಯನ್ನು ಮುಕ್ತಾಯಮಾಡಿದನು. ಮತ್ತು ಮೊದಲೇ ತನ್ನ ಚಾರರೆಲ್ಲರಿಗೂ ಆಜ್ಞೆ ಮಾಡಿದ್ದಂತೆ ಎಲ್ಲರೂ ಹುಡುಕಿ ಕರುಣಾಕರ ದಯಾಕರರನ್ನು ಆಹೊತ್ತಿಗೆ ಸರಿಯಾಗಿ ಕರೆದುಕೊಂಡುಬರಲು ಅವರಿಬ್ಬರನ್ನೂ ರೋಹಿಣಿ ಕರುಣಾಂಬೆಯರನ್ನೂ ಸುವರ್ಣಪುರಾಧ್ಯಕ್ಷ, ಭೀಮರಾಜರನ್ನೂ ಮೊದಲೇ ಆಣಿಮಾಡಿದ್ದ ಒಂದು ಚಿಕ್ಕಮನೆಗೆ ಕರೆದುಕೊಂಡುಹೋಗಿ ಎಲ್ಲರೆದುರಿಗೂ ತನ್ನ ಮಗಳು ಅಹಲ್ಯೆಯು ಪುನಃ ಲಭಿಸಿದ ಸಂಗತಿಯನ್ನು ತಿಳಿಸಿದನು. ಎಲ್ಲರ ಕ್ಷೇಮ ಸಮಾಚಾರಗಳೂ ವಿಚಾರಿಸಲ್ಪಟ್ಟನಂತರ ಭೀಮರಾಜನು ಸುವರ್ಣಪುರಾಧ್ಯಕ್ಷನ ಜೈಷ್ಠ ಪುತ್ರನೆಂದೂ, ರೋಹಿಣಿಯು ಅವಂತೀಶನ ಪುತ್ರಿಯೆಂದೂ ಗೊತ್ತಾದ ಬಳಿಕ ರೋಹಿಣಿಯನ್ನು ಭೀಮರಾಜನಿಗೆ ಕೊಟ್ಟು ವಿವಾಹಮಾಡಲು ಪ್ರಶಸ್ತವಾದ ಶುಭಲಗ್ನವನ್ನು ಗೊತ್ತು ಮಾಡಿಸಿದರು. ಗೊತ್ತಾದ ದಿವಸ ಮದುವೆಯೊ ಆಗಿಹೋಯಿತು. ಕರುಣಾಕರನು ಅವಂತೀಶನ ಆಸ್ಥಾನದಲ್ಲಿ ಪ್ರಧಾನಮಂತ್ರಿಪ್ರವರನಾದನು. ದಯಾ ಕರನನ್ನು ಭೀಮರಾಜನು ತನ್ನ ಬಳಿ ಮಂತ್ರಿಯನ್ನಾಗಿ ನೇಮಕಮಾಡಿಕೊಂಡನು.

ಪಾಠಕಮಹಾಶಯ! ಅವಂತೀಶನಿಗೆ ರೋಹಿಣಿಯ ಗುರುತನ್ನು ಮಾಡಿಕೊಟ್ಟ ಸುವರ್ಣಪುರಾಧ್ಯಕ್ಷನಿಗೆ ಭೀಮರಾಜನ ಸಂಬಂಧವು ಹೇಗೆ ಲಭಿಸಿತೆಂದು ಕೇಳ ಬಹುದು.ಭೀಮರಾಜನ ಜನನಕಾಲದಲ್ಲಿ ಈತನ ಮಲತಾಯಿಯು ತನ್ನ ಸಂತಾನಕ್ಕೆ ಮುಂದಕ್ಕೆ ಪಟ್ಟಕಟ್ಟುವ ಸಂಭವವು ತಪ್ಪಿಹೋಗಬಹುದೆಂಬ ಸಂಶಯದಿಂದ ಭೀಮ