ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ರೋಹಿಣಿ

                                                               39  
       ರಾಜನನ್ನು ಒಂದು ತೊಟ್ಟಲಿನಲ್ಲಿ ಮಲಗಿಸಿ ಎಲ್ಲಿಯೋ ಒಂದು ಹೊಳೆಯಲ್ಲಿ ಬಿಟ್ಟು 
       ಬರುವಂತೆ ತನ್ನ ಕಡೆ ಆಳುಗಳಿಗೆ ತಿಳಿಸಿ ಅವರಿಗೆ ಬಹಳವಾಗಿ ಹಣವನ್ನು ಕೊಟ್ಟಿದ್ದಳು. 
       ಅವರು ಅದರಂತೆಯೇ ಹೊಳೆಯಲ್ಲಿ ಬಿಟ್ಟು ಬಂದಿದ್ದರು. ಒಂದು ದಿವಸ ಭೀಮರಾಜನ 
       ಸಾಕುತಂದೆಯು ಕಾಡಿಗೆ ಬೇಟಿಮಾಡಲು ಹೋಗಿದ್ದು ತುಂಬಾ ದಣುವಾಗಿದ್ದುದರಿಂದ 
       ಹೊಳೆಯಬಳಿಗೆ ಬಂದು ನೀರನ್ನು ಕುಡಿದು ತನ್ನ ತೃಷೆಯನ್ನು ನೀಗಿಕೊಳ್ಳುವಷ್ಟರ 
       ಲ್ಲಿಯೇ ನದಿಯ ಪ್ರವಾಹದ ಮಧ್ಯದಲ್ಲಿ ತೇಲಿಕೊಂಡು ಬರುತ್ತಿದ್ದ ತೊಟ್ಟಿಲನ್ನು ನೋಡಿ
       ಅದೇನೋ ಒಂದು ವಿಶೇಷವಿರಬಹುದೆಂದು ಊಹಿಸಿ ತನ್ನ ಬಳಿಯಲ್ಲಿದ್ದ ಅಂಬಿಗರಿಗೆ 
       ತೊಟ್ಟಿಲನ್ನು ತರುವಂತೆ ಆಜ್ಞಾಪಿಸಲು ಅವರು ಆಜ್ಞೆಯನ್ನು ಶಿರಸಾವಹಿಸಿ ಈಜು
       ಬಿದ್ದು ತೊಟ್ಟಿಲನ್ನೂ ಮತ್ತು ಅದರಲ್ಲಿದ್ದ ತೇಜೋವಂತನಾದ ಮಗುವನ್ನೂ ಸುರಕ್ಷಿ 
       ತವಾಗಿ ದಡಕ್ಕೆ ತಂದು ದೊರೆಗೆ ಅರ್ಪಿಸಿದರು. ತನಿಗೆ ಮಕ್ಕಳಿಲ್ಲದೆ ಇದ್ದುದರಿಂದ
       ಭಗವಂತನು ಕರುಣಿಸಿ ದಯಪಾಲಿಸಿದ ಮಗುವನ್ನು ತನ್ನ ಮಗನೆಂದೇ ಭಾವಿಸಿ ಊರ
       ನ್ನೆಲ್ಲಾ ತೋರಣ ಮೇಲ್ಕಟ್ಟುಗಳಿಂದ ಅಲಂಕಾರಮಾಡಿಸಿ ಬಹಳ ವಿಜೃಂಭಣೆಯಿಂದ
       ಪುತ್ರೋತ್ಸವವನ್ನು ಮಾಡಿಕೊಂಡನು. ಭೀಮರಾಜನಿಗೆ ಕ್ಲಿಸ್ತ ಕಾಲದಲ್ಲಿ ವಿದ್ಯಾಭ್ಯಾ
       ಸಮಾಡಿಸಿ ಸ್ವಲ್ಪಕಾಲದಲ್ಲೇ ಸಕಲವಿದ್ಯಾಪಾರಂಗತನನ್ನಾಗಿ ಮಾಡಿಸಿ ಆತನಿಗೆ
       ರಾಜ್ಯಭಾರವನ್ನು ವಹಿಸಿ ತಾನು ಪರಲೋಕವನ್ನೈದಿದನು.
           ಭೀಮರಾಜನನ್ನು ಹೊಳೆಯಲ್ಲಿ ಹಾಕುವಂತೆ ಅಪ್ಪಣೆಮಾಡಿದ ಆತನ ಮಲ
       ತಾಯಿಯು ತನ್ನ ಪ್ರಾಣೋತ್ಕ್ರಮಣಕಾಲದಲ್ಲಿ ತಾನುಮಾಡಿದ ಈ ಘೋರಕೃತ್ಯ 
       ವನ್ನೊಪ್ಪಿಕ್ಕೊಂಡು ಪ್ರಾಣಬಿಟ್ಟಳು.
           ಭೀಮರಾಜನ ಸಾಕುತಂದೆಯು ಈತನು ತನಗೆ ಹೇಗೆ ಸಿಕ್ಕಿದನೆಂಬುದನ್ನು ಬರೆ
       ಸಿಟ್ಟಿದ್ದು ತಾನು ಪ್ರಾಣಬಿಡುವಾಗ ಭೀಮರಾಜನನ್ನು ಹತ್ತಿರಕ್ಕೆ ಕರೆಯಿಸಿ ಎಲ್ಲಾ
       ವಿಷಯವನ್ನೂ ಆತನಿಗೆ ಸಾಂಗವಾಗಿ ತಿಳಿಸಿದ್ದನು. ಅದೇ ಪ್ರಸ್ತಾಪವು ಅವಂತೀಶನ 
       ಕಿರುಮನೆಯಲ್ಲಿ ಬರಲು ಕಡೆಗೆ ಸುವರ್ಣಪುರಾಧ್ಯಕ್ಷನಿಗೂ ಭೀಮರಾಜನಿಗೂ ಇದ್ದ
       ಸಂಬಂಧವು ವ್ಯಕ್ತವಾಯಿತು.
            ಈ ರೀತಿ ಸುವರ್ಣಪುರ, ಅವಂತಿಪುರದವರಿಬ್ಬರಿಗೂ ಅನ್ಯೋನ್ಯ ಬಾಂಧವ್ಯ ಬೆಳ
       ದುದರಿಂದ ಒಬ್ಬರೊಬ್ಬರಿಗೆ ಆಗಾಗ್ಗೆ ನಡೆಯುತ್ತಿದ್ದ ಕಲಹವು ತಪ್ಪಿ ಉಭಯಪಕ್ಷ 
       ದವರೂ ಸೌಖ್ಯವಾಗಿದ್ದರು.
                             ಸ೦ಪೂ ರ್ಣ೦.
           PRINTED AT THE ROYAL PRESS, MYSORE-1916.