ಚನಕನ ಮಹಿಮೆ ನೆನೆದಮಾತ್ರಕೆ ವಕ್ರತುಂಡನು | ಮನದೆಮುದವನುತಾಳ್ದು ಭಕ್ತನ | ಮನಕೆ ಸಂತಸಗೈದನಾಗಳೆ ಭಕ್ತವತ್ಸಲನು | ಎನುತ ಮಹಿಮನುಮಾತ್ಮರೂಪವ | ನನಿತನಜನಿಗೆ ತೋರ್ಕೆಗೊಡುತಿರೆ | ತನುಜ ! ಪಕ್ಕದೊಳಿರ್ದುನೋಡಿದೆನದನೆಪೇಳುವೆನು | ೧೯ || ರಕ್ತವರ್ಣನ ಸಿಂಧುರಾಸ್ಯನ | ರಕ್ತನೇತ್ರನ ಚಂದ್ರಕೋಟಿ | ವ್ಯಕ್ತತೇಜನ ಸೂರ್ಯಕೋಟಿಸಮಾನಭಾಸನನು || ಭಕ್ತನುಗ್ರದಮರೂಪದಂದವ | ಮುಕ್ತಲೋಚನನಾಗಿ ಕಂಡನು || ತ್ಯಕ್ತಧೈರೈನು
ಜಪವಮಾಣುತೆ ಮುಚ್ಚೆಯೆಯ್ದಿದನು || ೨೦ ||
ಕೆಲದೊಳೊದವಿದಕಾಂತಿರಾಶಿಯ | ಸಲಘುವಿಕ್ರಮನಂದುನೋಡುತೆ | ಛಲದೊಳೆದ್ದನು, ಸಾವಧಾನದೊಳಿಷ್ಟದೇವತೆಯ || ಬಲದತೇಜೋರೂಪವನುಕಂಡಲುಗದಿರ್ದನು. ವಿಧಿಯು ಕೈಮುಗಿ | ದಲಸನಾದೆ,ಧೈರ್ಯದಿಂದಲೆನಿಂದುನುತಿಸಿದನು. || ೨೧ || ಜಯಜಯಾನಂದ ಸ್ವರೂಪನೆ ! | ಜಯಜಯ ಧರಾಧಾರಭೂತನೆ ? | ಜಯ ಸುಸತ್ಪಾತ್ಮಕನೆ ! ನಿತ್ಯನೆ ! ನಿನಗೆನಮಿಸುವೆನು || ಭಯನಿವಾರಕ ! ದೇವದೇವನೆ ! ನಿಯತಸೀಹರಿಹರನುವಿಧಿಯೈ | ಜಯವ ಪೇಳ್ವೆನು ಮತ್ತೆ ವಂದಿಪೆನೆಂದುಬೆಸಗೊಂಡ || ೨೨ || - ಪರಮ ದೇವನು ಕೇಳ್ದು ಭಕ್ತನ | ವಿಂದುನುತಿಯನವಂಗೆನಿಜಸಂ | ದರುಶನಂಗಳನಿತ್ತು ಸೃಷ್ಟಿ ವಿಘಾತವನು ಕೇಳಿ || ಕರುಣದಿಂದಲಿ ತನ್ನ ಭಕ್ತನಿ | ಗೊರೆದನಜನಿಗೆ ದೇವದೇವನು | ಧರಿಣಿಗೇಳ್ಗೆಯ ಮಾಳ್ವಪರಿಯಿಂ ಕುವರ ಸಂತಸದೆ || ೨೩ || - ಆರಮಂತ್ರವ ನೀನು ನೆನೆದೆಯ | ದಾರುಮಂತ್ರವ ನಿನಗೆ ಪೇಳ್ದರೊ | ಸಾರವಹದೇವೇಶನಾತನಯೋಗಮಾರ್ಗದೊಳು || ಪಾರುತಿರ್ಪರೊಸವಕಮೊದಲಹ | ಭೂರಿಮುನಿಗಳು ವಕ್ರತುಂಡನು | ಧೀರನಾನೆಯ್ತಂದೆ ನಿನ್ನಿಷ್ಟವನುಸಲಿಸುವೆನು || ೨೪ || - ನನ್ನ ಕರೆವರು ವಕ್ರಮುಖನೆನು | ತಿನ್ನು ಲೋಕದ ವಸ್ತುವೆಲ್ಲವು | ನನ್ನ ರೂಪವು ಪೇಳ್ವುದೇನೈ ನಾನೆ ಜಗವೆನಿಪೆ | ನನ್ನಿಯೈ: ಕೇಳೆಂಬ ದೇವನ | ಸನ್ನು ತಾಲಾಪವನು ಕೇಳುತೆ || ತನ್ನ ಚಿತ್ತದೊಳಾಂತುಮುದವನು ಬಿದಿಯು ಬೇಡಿದನು || ೨೫ ||